ಮೈಕ್ರೋ ಪ್ಲಾಸ್ಟಿಕ್ ವಸ್ತುಗಳಿಂದ ದೇಹಕ್ಕೆ ವಿಷ

KannadaprabhaNewsNetwork |  
Published : Apr 12, 2026, 01:15 AM IST
000 | Kannada Prabha

ಸಾರಾಂಶ

ಪ್ಲಾಸ್ಟಿಕ್ ಮುಕ್ತ ದೇಶ ಅಭಿಯಾನದ ಅಡಿಯಲ್ಲಿ ಜೆಸಿಐ ತುಮಕೂರು ಮೆಟ್ರೋ ವತಿಯಿಂದ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುಪ್ಲಾಸ್ಟಿಕ್ ಮುಕ್ತ ದೇಶ ಅಭಿಯಾನದ ಅಡಿಯಲ್ಲಿ ಜೆಸಿಐ ತುಮಕೂರು ಮೆಟ್ರೋ ವತಿಯಿಂದ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಯಿತು. ನಗರದ ಬಿಜಿಎಸ್ ವೃತ್ತದಲ್ಲಿ ಜೆಸಿಐ ತುಮಕೂರು ಮೆಟ್ರೋ ಅಧ್ಯಕ್ಷರಾದ ಮಮತ ರಾಜ್ ಮತ್ತು ಕಾರ್ಯದರ್ಶಿ ಸನಿತ್ ರಾಜ್ ಅವರುಗಳ ನೇತೃತ್ವದಲ್ಲಿ ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜಿತೇಶ್ ಅದ್ವಾನಿ ಆಟೋ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸ್ಟೀಲ್‌ನ ಕುಡಿಯುವ ನೀರಿನ ಬಾಟಲಿಗಳನ್ನು ನೀಡಿ,ದಿನ ನಿತ್ಯ ಬಳಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಹಕಾರ ನೀಡುವಂತೆ ಕೋರಿದರು. ಈ ವೇಳೆ ಮಾತನಾಡಿದ ಜೆಸಿಐ ವಲಯ 14ರ ಅಧ್ಯಕ್ಷ ಪ್ರಜ್ವಲ್ ಎಸ್. ಜೈನ್, ಮನುಷ್ಯ ತನಗೆ ಅರಿವಿಲ್ಲದೆಯೇ ಪ್ರತಿನಿತ್ಯ ಹಾನಿಕಾರಕವಾದ ಮೈಕ್ರೋ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಹನಿ ಹನಿ ವಿಷ ಮನುಷ್ಯನ ದೇಹ ಸೇರುತ್ತಿದೆ. ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜೂನಿಯರ್ ಛೆಂಬರ್ ಅಫ್ ಇಂಟರ್ ನ್ಯಾಷನಲ್ (ಜೆಸಿಐ) ಭವಿಷ್ಯದ ವಾರಸುದಾರರಾಗಿರುವ ಯುವಜನರಲ್ಲಿ ಪ್ಲಾಸ್ಟಿಕ್ ವಿರುದ್ಧ ಜನ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನವನ್ನು ಕೈಗೊಂಡಿದೆ. ಇದರ ಭಾಗವಾಗಿ ಇಂದು ಜೆಸಿಐ ತುಮಕೂರು ಮೆಟ್ರೋ ವತಿಯಿಂದ ಜನರಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲಿ ವಿತರಿಸಲಾಗುತ್ತಿದೆ. ಇದರ ಜನರ ಯುವಜನರನ್ನು ಅರ್ಥಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆ ತರಲು ಅಗತ್ಯವಾದ ತರಬೇತಿ ಮತ್ತು ಮಾರ್ಗದರ್ಶನ ನೀಡಿ, ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲಾಗುತ್ತಿದೆ ಎಂದರು. ಜೆಸಿಐ ತುಮಕೂರು ಮೆಟ್ರೋದ ಅಧ್ಯಕ್ಷ ಮಮತರಾಜ್ ಮಾತನಾಡಿ, ಆರೋಗ್ಯವೆಂಬುದು ಇಂದು ಎಲ್ಲರಿಗೂ ದುಬಾರಿಯಾಗಿದೆ. ಇದಕ್ಕೆ ನಮ್ಮ ಜೀವನ ಶೈಲಿಯ ಜೊತೆಗೆ,ತಿಳುವಳಿಕೆಯ ಕೊರತೆಯಿಂದ ನಾವು ಉಪಯೋಗಿಸುವ ಪರಿಸರ ಮಾಲಿನ್ಯ ಯುಕ್ತ ವಸ್ತುಗಳೇ ಕಾರಣವಾಗಿದೆ. ಭೂಮಿಗೆ ಹಾಕಿದರೂ ಕೊಳೆಯದ ಪ್ಲಾಸ್ಟಿಕ್ ಬಳಕೆಯಿಂದ ಭೂಮಿ, ನೀರು, ಗಾಳಿ ಎಲ್ಲವೂ ಮಲೀನಗೊಳ್ಳುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜೆಸಿಐ ಈ ಅಭಿಯಾನ ಹಮ್ಮಿಕೊಂಡಿದೆ.ಇದರ ಜೊತೆಗೆ ಬೆಳ್ಳಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಇಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿರುವ ಎಚ್.ಐ.ವಿ.ಪೀಡಿತರಿಗೆ ಪೌಷ್ಠಿಕ ಪೌಡರ್ ನೀಡಲಾಗುತ್ತಿದೆ. ಇದೇ ರೀತಿಯ ಸಮಾಜ ಸೇವಾ ಕಾರ್ಯಗಳು ಜೆಸಿಐನಿಂದ ನಡೆಯಲಿವೆ ಎಂದರು.ಕಾರ್ಯಕ್ರಮದಲ್ಲಿ ಜೆಸಿಐ ತುಮಕೂರು ಮೆಟ್ರೋ ಮಾಜಿ ಅಧ್ಯಕ್ಷ ಬೆಳ್ಳಿ ಲೋಕೇಶ್, ಪ್ರಸಕ್ತ ಸಾಲಿನ ಕಾರ್ಯದರ್ಶಿ ಸುನಿತ್ ರಾಜ್,ಜ್ಹೋನಲ್‌ನ ತರಬೇತಿ ವಿಭಾಗದ ಚೇರ್ಮನ್ ಶ್ರೀನಿವಾಸಮೂರ್ತಿ, ಪದಾಧಿಕಾರಿಗಳಾದ ಉಮಾಮಹೇಶ್, ಸಂಜಯ್, ಅನು, ನಾಗೇಂದ್ರನಾಥ್, ನಾಗಭೂಷಣ್, ವೇಣುಗೋಪಾಲ್ ಹಾಗೂ ನಟರಾಜಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಏಳಿಗೆಯಲ್ಲಿ ಗುರುವಿನ ಪಾತ್ರ ಮಹತ್ವದ್ದು: ಇಂದ್ರಮ್ಮ
ಶರಣರ ವಿಚಾರಧಾರೆ ಮನುಕುಲದ ಮಂಗಳ ಸೌಭಾಗ್ಯ