ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್‌ ಲ್ಯಾಬ್‌

KannadaprabhaNewsNetwork |  
Published : Aug 15, 2026, 03:45 AM IST
ಮಾಹೆ ಮತ್ತು ಮೈಕ್ರೋಸಾಪ್ಟ್‌ ನಡುವೆ ಒಪ್ಪಂದಕ್ಕೆ ಸಹಿ | Kannada Prabha

ಸಾರಾಂಶ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್‌ ಲ್ಯಾಬ್‌

ಮಣಿಪಾಲ: ಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಸಂಶೋದನಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ (ಎಂಎಸ್‌) ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಇದರ ಭಾಗವಾಗಿ ಮಾಹೆಯ ಐದು ಅಂಗಸಂಸ್ಥೆಗಳಲ್ಲಿ ಅತ್ಯಾಧುನಿಕ ಮೈಕ್ರೋಸಾಫ್ಟ್ ಲ್ಯಾಬ್''''''''ಗಳು ಆರಂಭವಾಗಲಿದ್ದು, ಈ ಲ್ಯಾಬ್‌ಗಳ ಮೂಲಕ ಎಐ ಮತ್ತು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳು ವಿದ್ಯಾರ್ಥಿಗಳ ಕೈಗೆಟುಕಲಿವೆ. ಇದು ಪ್ರಾಯೋಗಿಕ ಕಲಿಕೆ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗೆ ಮೀಸಲಾದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಈ ಮೈಕ್ರೋಸಾಫ್ಟ್ ಲ್ಯಾಬ್‌ಗಳನ್ನು ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ), ಬೆಂಗಳೂರಿನ ಟಿ. ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ), ಮಣಿಪಾಲದ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ (ಎಂಎಸ್‌ಸಿಇ), ಬೆಂಗಳೂರಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್, ಫೈನಾನ್ಸ್ ಅಂಡ್ ಎಕನಾಮಿಕ್ಸ್ (ಎಂಐಸಿಎಫ್‌ಇ) ಮತ್ತು ಬೆಂಗಳೂರಿನ ಮಣಿಪಾಲ್ ಲಾ ಸ್ಕೂಲ್ (ಎಂಎಲ್‌ಎಸ್‌) ಕ್ಯಾಂಪಸ್‌ಗಳಲ್ಲಿ ಸ್ಥಾಪಿಸಲಾಗುವುದು. ಈ ಒಪ್ಪಂದ ಕಾರ್ಯಕ್ರಮದ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ಹಾಗೂ ಹಿಟಾಚಿ ಸಂಸ್ಥೆಯ ಪ್ರಮುಖರು ಮಾಹೆ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ಬಿಯಾಂಡ್ ದಿ ಹೈಪ್: ಹೌ ಎಐ ಈಸ್ ರಿಶೇಪಿಂಗ್ ವರ್ಕ್, ಬ್ಯುಸಿನೆಸ್, ಅಂಡ್ ಸೊಸೈಟಿ ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಕೆಲಸದ ಸ್ಥಳಗಳು, ವ್ಯಾಪಾರ, ಶಿಕ್ಷಣ ಹಾಗೂ ಸಮಾಜದ ಮೇಲೆ ಎಐ ಬೀರುತ್ತಿರುವ ಪ್ರಭಾವಗಳ ಜತೆಗೆ, ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಬಗ್ಗೆಯೂ ಚರ್ಚಿಸಲಾಯಿತು.ಬದ್ಧತೆ ಪ್ರತೀಕ: ಸಭೆಯ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಅವರು ಹೊಸತನವನ್ನು ಹಿಂಬಾಲಿಸುವುದಕ್ಕಿಂತ ಮುಂದಕ್ಕೆ ಸಾಗುವ ನಂಬಿಕೆಯನ್ನು ಮಾಹೆ ಸದಾ ಪಾಲಿಸಿಕೊಂಡು ಬಂದಿದೆ. ಮೈಕ್ರೋಸಾಫ್ಟ್ ಮತ್ತು ಹಿಟಾಚಿ ಸಹಭಾಗಿತ್ವದಲ್ಲಿ ಈ ಎಐ ಪ್ರಯೋಗಶಾಲೆಗಳ ಆರಂಭ ಮಾಹೆಯ ದೃಷ್ಟಿಕೋನದ ಪ್ರತೀಕವಾಗಿದೆ. ಇದು ನವೋದ್ಯಮ ಮತ್ತು ನೈತಿಕತೆ ಕೈಗೂಡಿಸಿ ಮುನ್ನಡೆಯುವ ಸಂಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆ ಪ್ರತಿಬಿಂಬಿಸುತ್ತಿದೆ ಎಂದರು.

ಮೈಕ್ರೋಸಾಫ್ಟ್ ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಪುನೀತ್ ಚಂಡೋಕ್, ಭಾರತದ ಯುವ ಸಮುದಾಯ ಎಐ ಆಧಾರಿತ ಆವಿಷ್ಕಾರಗಳ ಭವಿಷ್ಯವನ್ನು ಬರೆಯುವ ಶಕ್ತಿ ಹೊಂದಿದೆ. ಮಾಹೆಯೊಂದಿಗೆ ನಮ್ಮ ಒಪ್ಪಂದವು ಯುವ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಭವಿಷ್ಯದ ತಂತ್ರಜ್ಞಾನಗಳು, ಉಪಕರಣಗಳು ಮತ್ತು ಕೌಶಲ್ಯಗಳನ್ನು ನೇರವಾಗಿ ಪರಿಚಯಿಸಲಿದೆ ಎಂದರು. ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, ಹಿಟಾಚಿ ಸಿಸ್ಟಮ್ಸ್ ಇಂಡಿಯಾ ಸಿಇಒ ರಾಜ್ ಕಮಲ್ ಸಿಂಘಾಲ್ ಮತು ಮಾಹೆಯ ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ನಾಗೇಂದ್ರ ರಾಜೀನಾಮೆಗೆ ಉಡುಪಿ ಬಿಜೆಪಿ ಆಗ್ರಹ
ಕರಾವಳಿಗೆ ಪ್ರತ್ಯೇಕ ನಿಯಮ ರೂಪಿಸಿ: ಗಂಟಿಹೊಳೆ