ಮಿಲನ ಸಂಘದ ಹಣ ಅಕ್ರಮ ವರ್ಗ: ಸಿಬ್ಬಂದಿ, ಮಂಗಳಮುಖಿಯರ ಪ್ರತಿಭಟನೆ

KannadaprabhaNewsNetwork |  
Published : Sep 29, 2024, 01:50 AM IST
ಪೋಟೋ: 28ಜಿಎಲ್‌ಡಿ2-  ಗುಳೇದಗುಡ್ಡದ ವಿರೂಪಾಕ್ಷಪ್ಪ ಮಂಟೂರು ಲೆಕ್ಕಾಧಿಕಾರಿ ಮನೆ ಮುಂದೆ ಮಂಗಳಮುಖಿಯರು ಹಾಗೂ ಸಿಬ್ಬಂದಿಗಳು  ಶನಿವಾರ ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ಬಾಗಲಕೋಟೆಯ ಮಿಲನ ಸಂಘದ ಸಿಬ್ಬಂದಿ ವೇತನದ ಹಣ ಹಾಗೂ ಮಂಗಳಮುಖಿಯರ ಪರಿಕರಗಳ ವಿತರಣೆ ಹಣವನ್ನು ನಕಲಿ ಸಹಿ ಮಾಡಿ, ಲಕ್ಷಾಂತರ ಹಣ ದುರುಪಯೋಗ ಮಾಡಿದ್ದಾನೆ ಎಂದು ಆರೋಪಿಸಿ ಸಂಘದ ಲೆಕ್ಕಾಧಿಕಾರಿ ಮನೆ ಮುಂದೆ ಮಂಗಳಮುಖಿಯರು ಹಾಗೂ ಸಿಬ್ಬಂದಿ ಪ್ರತಿಭಟನೆ ಮಾಡಿದ ಘಟನೆ ಶನಿವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಬಾಗಲಕೋಟೆಯ ಮಿಲನ ಸಂಘದ ಸಿಬ್ಬಂದಿ ವೇತನದ ಹಣ ಹಾಗೂ ಮಂಗಳಮುಖಿಯರ ಪರಿಕರಗಳ ವಿತರಣೆ ಹಣವನ್ನು ನಕಲಿ ಸಹಿ ಮಾಡಿ, ಲಕ್ಷಾಂತರ ಹಣ ದುರುಪಯೋಗ ಮಾಡಿದ್ದಾನೆ ಎಂದು ಆರೋಪಿಸಿ ಸಂಘದ ಲೆಕ್ಕಾಧಿಕಾರಿ ಮನೆ ಮುಂದೆ ಮಂಗಳಮುಖಿಯರು ಹಾಗೂ ಸಿಬ್ಬಂದಿ ಪ್ರತಿಭಟನೆ ಮಾಡಿದ ಘಟನೆ ಶನಿವಾರ ನಡೆದಿದೆ.

ಕಾರ್ಯಕ್ರಮ ವ್ಯವಸ್ಥಾಪಕ ಸಮೀರ ಕರಜಗಿ ಮಾತನಾಡಿ, ಕರ್ನಾಟಕ ಏಡ್ಸ್ ಪ್ರಿವೆನ್ಷನ್‌ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಬಾಗಲಕೋಟೆಯ ಮಿಲನ ಸಂಘದಲ್ಲಿ ಗುಳೇದಗುಡ್ಡದ ವಿರೂಪಾಕ್ಷಪ್ಪ ಮಂಟೂರು ಎಂಬುವರು ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಸೆ.21ರಿಂದ ಒಟ್ಟು ₹10.34 ಲಕ್ಷ ಹಣವನ್ನು ಮಿಲನ ಸಂಘದ ಖಾತೆಯಿಂದ ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದಾನೆ. ದುರುಪಯೋಗಪಡಿಸಿಕೊಂಡಿರುವ ನಮ್ಮ ಹಣವನ್ನು ಮಂಟೂರ ಅವರಿಂದ ವಸೂಲಿ ಮಾಡಿ ನಮ್ಮ ಸಂಘದ ಖಾತೆಗೆ ಹಣ ಜಮೆ ಮಾಡಿಸಿ, ನಮಗೆ ನ್ಯಾಯಕೊಡಿಸಬೇಕೆಂದು ಅವರು ಆಗ್ರಹಿಸಿದರು.

ಸಂಘದ ಅಧ್ಯಕ್ಷೆ ಸುರೇಖಾ ವಡ್ಡರ ಮಾತನಾಡಿ, ನಮ್ಮ ಸಂಘವು ಕರ್ನಾಟಕ ಏಡ್ಸ್ ಪ್ರಿವೆನ್ಷನ್‌ ಸೊಸೈಟಿ ಅಡಿಯಲ್ಲಿ ನಡೆಯುತ್ತಿದೆ. ಸಂಘದ ಸಿಬ್ಬಂದಿ ವೇತನ ₹6.50 ಲಕ್ಷ ಹಾಗೂ ಮಂಗಳಮುಖಿಯರ ಸದಸ್ಯರಿಗೆ ಪರಿಕರ ವಿತರಿಸಲು ಕಾಯ್ದಿರಿಸಿದ್ದ ಹಣವನ್ನು ಅಧ್ಯಕ್ಷರ ಹಾಗೂ ಯೋಜನಾ ನಿರ್ದೇಶಕರ ಸಹಿಯನ್ನು ನಕಲು ಮಾಡಿ, ಅಕೌಂಟೆಂಟ್ ವೀರುಪಾಕ್ಷಪ್ಪ ಮಂಟೂರು ವರ್ಗಾಯಿಸಿಕೊಂಡಿದ್ದಾರೆ. ನಮಗೆ ಅನ್ಯಾಯವಾಗಿದೆ. ಸಿಬ್ಬಂದಿ ಹೇಗೆ ಜೀವನ ನಡೆಸಬೇಕು? ಆತ ಲಪಾಟಿಯಿಸಿದ ಹಣವನ್ನು ನಮಗೆ ಮರಳಿ ಕೊಡಿಸಬೇಕು. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹುಚ್ಚಮ್ಮ ಹಡಪದ, ಸಂಗಮ್ಮ ಹಂಜಿ, ಸಂಗೀತಾ ಬಿಸನಾಳ, ರಂಗಮ್ಮ ಬನ್ನಿದಿನ್ನಿ, ಪರಶು ನಾಯ್ಕರ, ಅರ್ಪಿತಾ ಮೆಟ್ಟಿನ, ನಕ್ಷತ್ರಾ ಜಾಧವ ಸಿಬ್ಬಂದಿಗಳು ಸೇರಿದಂತೆ ಇತರರು ಆಗ್ರಹಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ