ಜಿಲ್ಲೆಯ ರೈತರ ಹಿತ ಕಾಪಾಡಲು ಹಾಲು ಒಕ್ಕೂಟ ಬದ್ಧ: ಆರ್‌. ರಾಜೇಂದ್ರ

KannadaprabhaNewsNetwork |  
Published : Feb 05, 2024, 01:50 AM IST
ಮಧುಗಿರಿಯ ತುಮುಲ್‌ ಉಪಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಡೈರಿ ಮತ್ತು ಕ್ಯಾಲೆಂಡರ್‌ ಬುಡುಗಡೆ  ಹಾಗೂ ಮೃತಪಟ್ಟ ರಾಸುಗಳ ಮಾಲೀಕರಿಗೆ  ಪರಿಹಾರದ  ಚೆಕ್‌ ವಿತರಣಾ  ಸಮಾರಂಭದಲ್ಲಿ  ವಿಧಾನ ಪರಿಷ್ತ್‌ ಸತಸ್ಯ ಆರ್‌.ರಾಜೇಂದ್ರ ಹಾಲು ಉತ್ಪಾದಕ ರೈತರಿಗೆ ಪರಿಹಾರದ ಚೆಕ್‌ ವಿತರಿಸಿದರು.ಬಿ.ನಾಗೇಶ್‌ಬಾಬು,ಗಂಗಣ್ಣ ,ಕಾಂತರಾಜು ಸೇರಿದಂತೆ ಅನೇಖರು ಇದ್ದಾರೆ.  | Kannada Prabha

ಸಾರಾಂಶ

ರೈತರ ಹಿತ ಕಾಪಾಡುವ ಒಕ್ಕೂಟಗಳಿಗೆ ಹಾಲು ಪೂರೈಸಿ ಆ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಗತಿಗೆ ಪದಾಧಿಕಾರಿಗಳು ಕೈ ಜೋಡಿಸುವ ಮೂಲಕ ಮತ್ತಷ್ಠು ಬಲಪಡಿಸಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ಕರೆ ನೀಡಿದರು.

ಕನ್ನಪ್ರಭ ವಾರ್ತೆ ಮಧಗಿರಿ

ರೈತರ ಹಿತ ಕಾಪಾಡುವ ಒಕ್ಕೂಟಗಳಿಗೆ ಹಾಲು ಪೂರೈಸಿ ಆ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಗತಿಗೆ ಪದಾಧಿಕಾರಿಗಳು ಕೈ ಜೋಡಿಸುವ ಮೂಲಕ ಮತ್ತಷ್ಠು ಬಲಪಡಿಸಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ಕರೆ ನೀಡಿದರು.

ಇಲ್ಲಿನ ತುಮುಲ್‌ ಉಪಕೇಂದ್ರದಲ್ಲಿ ಶುಕ್ರವಾರ ತುಮುಲ್‌ನಿಂದ ಹಮ್ಮಿಕೊಂಡಿದ್ದ ನೂತನ ವರ್ಷದ ಡೈರಿ ಮತ್ತು ಕ್ಯಾಲೆಂಡರ್‌ ಬಿಡುಗಡೆ ಹಾಗೂ ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರದ ಮೊತ್ತ 8.9 ಲಕ್ಷ ರು.ಗಳ ಚೆಕ್‌ ಹಾಗೂ ಮೇವು ಕಟಾವು ಯಂತ್ರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ರೈತರ ಹಿತ ಕಾಪಾಡಲು ಒಕ್ಕೂಟ ಬದ್ದವಾಗಿದ್ದು, ಯಶಸ್ವಿನಿ ಯೋಜನೆ ಅನುಷ್ಠಾನಗೊಳ್ಳುವ ಜೊತೆಗೆ ಇತರೆ ಎಲ್ಲ ಅನುಕೂಲಗಳನ್ನು ರೈತರು ಪಡೆದುಕೊಳ್ಳಿ, ರೈತರು ಕಷ್ಟ ಪಟ್ಟು ಶೇಖರಣೆ ಮಾಡಿದ ಹಾಲನ್ನು ನಿಮ್ಮಗಳ ಹಿತ ಕಾಪಾಡುವ ಒಕ್ಕೂಟಕ್ಕೆ ಸರಬರಾಜು ಮಾಡಿ ಎಂದರು. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲವರು ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ, ಕಳೆದ ಮೂರು ದಿನಗಳಿಂದ ಹಾಲಿನ ಶೇಖರಣೆ ಹೆಚ್ಚಿದ್ದು ಜಿಲ್ಲೆಯಲ್ಲಿ ಹಾಲಿನ ಗುಣಮಟ್ಟವಿಲ್ಲ ಎಂಬ ದೂರುಗಳು ಬಂದಾಗ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.

ತುಮುಲ್‌ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌ ಮಾತನಾಡ, ಈ ಹಿಂದೆ ಹಾಲಿನಲ್ಲಿ ಉಪ್ಪು, ಸಕ್ಕರೆ ಬೆರಸಿದವರ ವಿರುದ್ಧ ಒಕ್ಕೂಟದ ನಿಯಮದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಮ್ಮ ತಂದೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರಿಂದ ಅನುಕೂಲ ಪಡೆದವರೇ ಅವರ ಬೆನ್ನಿಗೆ ಚೂರಿ ಹಾಕಿದರು. ಚುನಾವಣೆ ವೇಳೆ ನಾಯಕರಾಗಲು ಹೋದರು. ಎರಡು ಸಲ ನಿರ್ದೇಶಕರಾಗಿದ್ದ ಅವರು ಕೇವಲ 20 ತಿಂಗಳು ಮಾತ್ರ ಅಧ್ಯಕ್ಷ ಸ್ಥಾನ ಅಲಂಕರಿಸಬೇಕೆಂದು ಮಾತನಾಡಿದ್ದರು. ಕೆ.ಎನ್‌. ರಾಜಣ್ಣ ಅವರಿಂದ 5 ವರ್ಷ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದರು ಎಂದು ಹೆಸರೇಳದೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ತುಮುಲ್‌ ವ್ಯವಸ್ಥಾಪಕ ಜಿ. ಶ್ರೀನಿವಾಸ್‌ ಮಾತನಾಡಿ, ರಾಜಣ್ಣ ಅವರು ಸರ್ಕಾರದಲ್ಲಿ ಸಹಕಾರ ಸಚಿವರಾದ ಬಳಿಕ ಹಾಲು ಒಕ್ಕೂಟಗಳು ಗಣನೀಯ ಪ್ರಗತಿ ಸಾಧಿಸಿದ್ದು, 14 ಒಕ್ಕೂಟಗಳ ವ್ಯವಸ್ಥಾಪಕರನ್ನು ಕರೆಸಿ ಹಾಲಿನ ಕೊಬ್ಬಿನಾಂಶ ಪರೀಕ್ಷಿಸಿ ದರ ನಿಗದಿ ಪಡಿಸುವ ಸಾಫ್ಟ್‌ವೇರ್‌ ಅಳವಡಿಕೆಗೆ ಒತ್ತು ನೀಡಿರುವುದರಿಂದ ಗುಣಮಟ್ಟದ ಹಾಲು ಸಂಗ್ರಹವಾಗುತ್ತಿದೆ ಎಂದರು.

ಕೆಎಂಎಫ್‌ ನಿದೇರ್ಶಕ ಮೈತನಹಳ್ಳಿ ಕಾಂತರಾಜು ಮಾತನಾಡಿ, ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಚರ್ಚೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಅದು ಸಕಾರಗೊಳ್ಳಲಿದೆ ಎಂದರು.

ತುಮುಲ್‌ ಮಾಜಿ ಅಧ್ಯಕ್ಷ ಬಿ. ನಾಗೇಶ್‌ ಬಾಬು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ನಿಬಂಧಕ ಸಣ್ಣಪ್ಪಯ್ಯ, ತುಮುಲ್‌ ಆಡಳಿತಾಧಿಕಾರಿ ಉಮೇಶ್‌, ಪುರಸಭೆ ಮಾಜಿ ಅಧ್ಯಕ್ಷ ಎನ್‌. ಗಂಗಣ್ಣ, ಸದಸ್ಯ ಲಾಲಪೇಟೆ ಮಂಜುನಾಥ್‌, ಉಮೇಶ್‌, ಆನಂದ್, ಕಿಶೋರ್‌ ಸೇರಿದಂತೆ ಅನೇಕರಿದ್ದರು.ಫೋಟೊ

ವಿಧಾನ ಪರಿಷ್ತ್‌ ಸತಸ್ಯ ಆರ್‌. ರಾಜೇಂದ್ರ ಹಾಲು ಉತ್ಪಾದಕ ರೈತರಿಗೆ ಪರಿಹಾರದ ಚೆಕ್‌ ವಿತರಿಸಿದರು. ಬಿ. ನಾಗೇಶ್‌ ಬಾಬು, ಗಂಗಣ್ಣ, ಕಾಂತರಾಜು ಸೇರಿದಂತೆ ಅನೇಕರಿದ್ದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ