ಕಾಲುಬಾಯಿ ರೋಗದಿಂದ ಹಾಲು ಇಳುವರಿ ಕುಂಠಿತ

KannadaprabhaNewsNetwork |  
Published : Apr 28, 2025, 12:50 AM IST
4646 | Kannada Prabha

ಸಾರಾಂಶ

ಕಾಲುಬಾಯಿ ರೋಗವು ದನ, ಎಮ್ಮೆ, ಹಂದಿ ಹಾಗೂ ಇತರೆ ಸೀಳು ಗೊರಸಿನ ಜಾನುವಾರಗಳಿಗೆ ತಗಲುತ್ತದೆ. ಈ ರೋಗದಿಂದ ಜಾನುವಾರಗಳು ಗುಣಮುಖವಾದರು ಸಹ ಮುಂದೆ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಹಾಲಿನಲ್ಲಿ ಇಳುವರಿ ಕಡಿಮೆ ಆಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.

ಹನುಮಸಾಗರ:ಕಾಲುಬಾಯಿ ರೋಗದಿಂದ ಹಾಲಿನ ಇಳುವರಿ ಕಡಿಮೆಯಾಗುವುದು ಮತ್ತು ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಜಾನುವಾರ ಅಧಿಕಾರಿ ಎಂ.ಜಿ. ಹೊಳೆಆಲೂರು ಹೇಳಿದರು.

ಇಲ್ಲಿನ ಪಶು ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಜಾನುವಾರ ರೋಗಗಳ ನಿಯಂತ್ರಣ ಕಾರ್ಯಕ್ರಮದ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲುಬಾಯಿ ರೋಗವು ದನ, ಎಮ್ಮೆ, ಹಂದಿ ಹಾಗೂ ಇತರೆ ಸೀಳು ಗೊರಸಿನ ಜಾನುವಾರಗಳಿಗೆ ತಗಲುತ್ತದೆ. ಈ ರೋಗದಿಂದ ಜಾನುವಾರಗಳು ಗುಣಮುಖವಾದರು ಸಹ ಮುಂದೆ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಹಾಲಿನಲ್ಲಿ ಇಳುವರಿ ಕಡಿಮೆ ಆಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ರೈತರು ಜಾನುವಾರುಗಳ ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು ಇದರ ಲಕ್ಷಣವಾಗಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್‌ಸಾಬ ಮೂಲಿಮನಿ ಮಾತನಾಡಿ, ಜಾನುವಾರಗಳಿಗೆ ಚರ್ಮ ಗಂಟು ರೋಗ ಮಾರಣಾಂತಿಕ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಈ ರೋಗಕ್ಕೆ ಇನ್ನೂ ಲಸಿಕೆ ಕಂಡು ಹಿಡಿದಿಲ್ಲವಾದ್ದರಿಂದ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಕೊಳ್ಳುವುದು ಹಾಗೂ ರೋಗಪೀಡಿತ ಜಾನುವಾರುಗಳನ್ನು ಬೇರ್ಪಡಿಸಿ ಹಾಗೂ ನೊಣಗಳು ಕೂಡದಂತೆ, ಸೊಳ್ಳೆಪದರೆ ಕಟ್ಟುವುದು ಅವಶ್ಯಕವಿದೆ ಎಂದರು.

ಜಾನುವಾರಗಳ ಸಹಾಯಕ ಫೀರಸಾಬ್ ಹೊಸಮನಿ, ಭೈಪ್ ಸಂಸ್ಥೆಯ ಅಧಿಕಾರಿ ಮಂಜುನಾಥ ಮಾಳಶೆಟ್ಟಿ, ಮೈತ್ರಿ ಕಾರ್ಯಕರ್ತ ಗಂಗಾಧರ ನಾಗೂರ, ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ಶರಣಪ್ಪ ಬಾಚಲಾಪುರ, ಯಮನೂರ ಮಡಿವಾಳ, ಮುತ್ತಣ್ಣ ಹಲಕೂಲಿ, ಬಸವರಾಜ ಮೋಟಗಿ, ಅಹ್ಮದಸಾಬ್‌ ಮುದಗಲ್, ಮುತ್ತಣ್ಣ ಕಟಗಿ, ಶಿವಕುಮಾರ ಪೂಜಾರ, ರುದ್ರಪ್ಪ ಬಾಚಲಾಪುರ, ದಾವಲಸಾಬ್‌ ಬಸರಕೋಡ್, ವಿಶ್ವನಾಥ ಸೂಡಿ, ಅಶೋಕ ಹಾದಿಮನಿ, ಶಿವಕುಮಾರ, ಶ್ರೀಕಾಂತ ಕಂದಗಲ್ಲ, ಉಮೇಶ ರಾಠೋಡ, ಪಶುಸಖಿಯರಾದ ದೀಪಾ ಸೂಡಿ, ಲಕ್ಷ್ಮೀ ಬಡಿಗೇರ ಇತರರು ಇದ್ದರು.27ಎಚ್‌ಎನ್‌ಎಂ02

ಹನುಮಸಾಗರ ಪಶು ಚಿಕಿತ್ಸಾ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ