ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಎ.ಕೆ.ಫೌಂಡೇಶನ್, ಕರುನಾಡ ಕನ್ನಡ ಸೇನೆ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಕಲಾ ಸಂಗಮ-2024 ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಡು, ನುಡಿ, ಸಂಸ್ಕೃತಿ, ಪರಂಪರೆ ಬೆಳೆದು ಬಂದ ರೀತಿ, ಮಹನೀಯರು ನಾಡನ್ನು ಕಟ್ಟಿ ಬೆಳೆಸಿದ ಶ್ರಮ ತಿಳಿಸುವ ಮಾರ್ಗವೇ ಸುಗಮ ಸಂಗೀತ. ಸಂಗೀತದಲ್ಲಿನ ಪಾತ್ರ, ಕಲಾವಿದರನ್ನು ಒಟ್ಟಿಗೆ ಸೇರಿಸುವ ಸಾಧನವೇ ಸುಗಮ ಸಂಗೀತ ಎಂದು ಹೇಳಿದರು.
ನಿವೃತ್ತ ಡಿಡಿಪಿಐ ಕೆ.ಬಿ.ರಾಮಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಪಠ್ಯದ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.ಈ ಕಾರ್ಯಕ್ರಮದಲ್ಲಿ ಕರುನಾಡ ಕನ್ನಡ ಸೇನೆಯ ಅಧ್ಯಕ್ಷ ಕೆ.ಟಿ. ಗೋಪಾಲ ಗೌಡ್ರು, ಡಿ.ಚಾಮರಸ, ಶಿವಯೋಗಿ ಹಿರೇಮಠ್, ಲಲಿತ್ ಕುಮಾರ್ ಜೈನ್ ಇತರರು ಭಾಗವಹಿಸಿದ್ದರು. ನಂತರ ಪ್ರದೀಪ್ ಕುಮಾರ್ ಸಂಗಡಿಗರಿಂದ ಸುಗಮ ಸಂಗೀತ ಮತ್ತು ಸೀತಾರವಾದನ ಸಂಗೀತ ಕಾರ್ಯಕ್ರಮ ನಡೆಯಿತು.