ಚನ್ನರಾಯಪಟ್ಟಣ: ರಾಜ್ಯದಲ್ಲೇ ಸುದೀರ್ಘ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಚನ್ನರಾಯಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಪೇಟೆ ಶಾಲೆಯ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಮಿನಿ ಮಂತ್ರಾಲಯ ಮಾದರಿಯ ಬೃಂದಾವನ ಮಂಟಪ ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಹಿರಿಯ ಚಿತ್ರಕಲಾವಿದ ಹಾಗೂ ರಂಗಕರ್ಮಿ ಸಿ.ಎಂ. ರವೀಂದ್ರ ಅವರ ಕಲಾತ್ಮಕ ಕೈಚಳಕದಲ್ಲಿ ಮೂಡಿಬಂದಿರುವ ಈ ಮಂಟಪ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ೨೦ಕ್ಕೂ ಹೆಚ್ಚು ಕಲಾವಿದರಿಂದ ೧೦ ದಿನಗಳ ಪರಿಶ್ರಮದಿಂದ ಮೂಡಿ ಬಂದಿದೆ. ಲಿಮ್ಕಾ ದಾಖಲೆಗಳೊಂದಿಗೆ ಗುರುತಿಸಿಕೊಂಡಿರುವ ಹಾಸನ ಜಿಲ್ಲೆಯ ಹಿರಿಯ ಚಿತ್ರಕಲಾವಿದ ಹಾಗೂ ರಂಗಕರ್ಮಿ ಸಿ.ಎಂ. ರವೀಂದ್ರ ಅವರ ನೇತೃತ್ವದಲ್ಲಿ ೨೦ಕ್ಕೂ ಹೆಚ್ಚು ಕಲಾವಿದರ ತಂಡ ಸತತ ೧೦ ದಿನಗಳ ಕಾಲ ಶ್ರಮವಹಿಸಿ ಈ ಸುಂದರ ಮಂಟಪವನ್ನು ನಿರ್ಮಿಸಿದೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಮಾದರಿಯಲ್ಲಿ ರೂಪಿಸಲಾಗಿರುವ ಮಂಟಪದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ೯ ಅಡಿ ಎತ್ತರದ ಶ್ರೀ ಪ್ರಸನ್ನ ಗಣಪತಿಯ ವಿಗ್ರಹ ಭಕ್ತರನ್ನು ಆಕರ್ಷಿಸುತ್ತಿದೆ. ಪಟ್ಟಣಕ್ಕೆ ಆಗಮಿಸುವ ಭಕ್ತರು ಮಂಟಪದ ಕಲಾತ್ಮಕ ವಿನ್ಯಾಸವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ಕಲಾವಿದ ರವೀಂದ್ರಗೆ ಮಂತ್ರಾಲಯದ ಶ್ರೀಗಳಿಂದ ಸನ್ಮಾನ:ಈ ಬಾರಿಯ ಗಣೇಶ ಚತುರ್ಥಿಯ ಅಂಗವಾಗಿ ನಿರ್ಮಿಸಲಾಗಿರುವ ’ಮಿನಿ ಮಂತ್ರಾಲಯ’ದ ಕಲಾತ್ಮಕ ವಿನ್ಯಾಸಕ್ಕೆ ಮಂತ್ರಾಲಯದ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ, ಕಲಾವಿದ ಸಿ.ಎಂ. ರವೀಂದ್ರ ಅವರನ್ನು ವಿಶೇ?ವಾಗಿ ಸನ್ಮಾನಿಸಿ ಗೌರವಿಸಿದ್ದಾರೆ. ಈ ಹಿಂದೆ ಚನ್ನರಾಯಪಟ್ಟಣದ ರಾಯರ ರಂಗಮಂದಿರಕ್ಕೆ ಮಂತ್ರಾಲಯದ ಪೂಜ್ಯ ಶ್ರೀಗಳು ಆಗಮಿಸಿದ್ದ ಸಂದರ್ಭದಲ್ಲಿ ಶ್ರೀ ಮೂಲರಾಮ ದೇವರಿಗೆ ಪೂಜೆ ಸಲ್ಲಿಸಿದ್ದರು. ಇದೀಗ ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ.ಕೆ. ಪ್ರಕಾಶ್ ಭಾರದ್ವಾಜ್ ಅವರ ನೇತೃತ್ವದಲ್ಲಿ ಮಂತ್ರಾಲಯಕ್ಕೆ ತೆರಳಿದ ತಂಡವು, ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ’ಮಿನಿ ಮಂತ್ರಾಲಯ’ವನ್ನು ನಿರ್ಮಿಸಿರುವ ಕಲಾವಿದ ಸಿ.ಎಂ. ರವೀಂದ್ರ ಅವರಿಗೆ ಪೂಜ್ಯ ಶ್ರೀಗಳ ಆಶೀರ್ವಾದ ದೊರೆಯುವಂತೆ ವಿನಂತಿಸಿತು. ಅದರಂತೆ ಕಲಾವಿದರಿಗೆ ಪೂಜ್ಯ ಶ್ರೀಗಳ ದಿವ್ಯ ಆಶೀರ್ವಾದ ಲಭಿಸಿತು.ಪಟ್ಟಣದಲ್ಲೇ ಮಂತ್ರಾಲಯದ ದರ್ಶನದ ಅನುಭವ: