ಕನಿಷ್ಠ ವೇತನ ಎಂಬುದು ದಾನವಲ್ಲ

KannadaprabhaNewsNetwork |  
Published : Mar 06, 2026, 01:30 AM IST
9999 | Kannada Prabha

ಸಾರಾಂಶ

ಕನಿಷ್ಠ ವೇತನ ಎಂಬುದು ದಾನವಲ್ಲ ಅದು ಕಾರ್ಮಿಕರ ಶ್ರಮದ ಘನತೆಯನ್ನು ಕಾಪಾಡುವ ಸಂವಿಧಾನಿಕ. ಹಕ್ಕು 1992ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಐತಿಹಾಸಿಕ ರೆಪ್ಪಾ ಕೋಸ್ ಬ್ರೆಟ್ ತೀರ್ಪಿನಲ್ಲಿ ಕನಿಷ್ಠ ವೇತನ ಬದುಕಲು ಪೂರಕ ವೇತನ ಆಗಿರಬೇಕು ಎಂದು ಮಹತ್ವದ ತೀರ್ಪು ನೀಡಿದೆ ಎಂದು ಎಟಿಯುಸಿ ಜಿಲ್ಲಾಧ್ಯಕ್ಷ ಕಂಬೇಗೌಡ ತಿಳಿಸಿದರು

ಕನ್ನಡಪ್ರಭ ವಾರ್ತೆ, ತುಮಕೂರುಕನಿಷ್ಠ ವೇತನ ಎಂಬುದು ದಾನವಲ್ಲ ಅದು ಕಾರ್ಮಿಕರ ಶ್ರಮದ ಘನತೆಯನ್ನು ಕಾಪಾಡುವ ಸಂವಿಧಾನಿಕ. ಹಕ್ಕು 1992ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಐತಿಹಾಸಿಕ ರೆಪ್ಪಾ ಕೋಸ್ ಬ್ರೆಟ್ ತೀರ್ಪಿನಲ್ಲಿ ಕನಿಷ್ಠ ವೇತನ ಬದುಕಲು ಪೂರಕ ವೇತನ ಆಗಿರಬೇಕು ಎಂದು ಮಹತ್ವದ ತೀರ್ಪು ನೀಡಿದೆ ಎಂದು ಎಟಿಯುಸಿ ಜಿಲ್ಲಾಧ್ಯಕ್ಷ ಕಂಬೇಗೌಡ ತಿಳಿಸಿದರು ಅವರು ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸುವಂತೆ ಹಾಗೂ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಎಐಟಿಯುಸಿ ಜಿಲ್ಲಾ ಮಂಡಳಿ ವತಿಯಿಂದ ಕಾರ್ಮಿಕ ಇಲಾಖೆಯ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಒಂದು ಕುಟುಂಬದಲ್ಲಿ ಮನುಷ್ಯ ಬದುಕು ನಡೆಸಲು ಅವಶ್ಯಕವಾದ ಆಹಾರ, ಉಡುಪು, ವಸತಿ ಶಿಕ್ಷಣ. ಆರೋಗ್ಯ ಇತ್ಯಾದಿಗಳಿಗೆ ಅಗತ್ಯವಾದಷ್ಟು ವೇತನ ದೊರಕಬೇಕೆಂದು ವೈಜ್ಞಾನಿಕವಾದ ಮಾರ್ಗಸೂಚಿಗಳನ್ನು ನೀಡಿದೆ ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೆ 2700 ಕ್ಯಾಲೋರಿ ಪೌಷ್ಟಿಕಾಂಶ ವರ್ಷಕ್ಕೆ ಇಡೀ ಕುಟುಂಬಕ್ಕೆ 72ಗಜ ಬಟ್ಟೆ, ಮನೆಬಾಡಿಗೆ, ಇದೆಲ್ಲದೆ ಇಂಧನ ಮತ್ತು ಬೆಳಕಿನ ವ್ಯವಸ್ಥೆಗಾಗಿ ಶೇ.20ರಷ್ಟು ಹಾಗೂ ಮಕ್ಕಳ ಶಿಕ್ಷಣ ವೈದ್ಯಕೀಯ ಅವಶ್ಯಕತೆಗಳಿಗಾಗಿ ಶೇ.25ರಷ್ಟು ಸಂಭಾವನೆಯೂ ಕನಿಷ್ಟ ವೇತನದಲ್ಲಿ ಒಳಗೊಂಡಿರಬೇಕೆಂದು ನ್ಯಾಯಾಲಯವು ಸೂಚಿಸಿದೆ ಎಐಟಿಯುಸಿ ಕಾರ್ಯಧ್ಯಕ್ಷ ಗಿರೀಶ್ ಮಾತನಾಡಿ ತುಮಕೂರಿನ ಹೈಟೆಕ್ ಆಟೋಮೊಬೈಲ್ ಕಾರ್ಖಾನೆ ಕಾರ್ಮಿಕರಿಂದ ಹಿಡಿದು ಗ್ರಾಮೀಣ ತಾಲ್ಲೋಕುಗಳ ಗುಡಿ ಕೈಗಾರಿಕೆ ಆಧಾರಿತ ಅಗರಬತ್ತಿ ಬೀಡಿ ಕಾರ್ಮಿಕರವರೆಗೆ ಹಾಗೂ ಸ್ವಿಗ್ಗಿ ರೋಮ್ಯಾಟೊದಂತಹ ಗಿಗ್-ಎಕನಾಮಿ ಡೆಲವರಿ ಪಾರ್ಟ್ನರ್ ಗಳಿಂದ ಕನಿಷ್ಠವೇತನ ಪರಿಷ್ಠರಣೆಯ ಮೂಲಕ 1.77 ಕೋಟಿಗೂ ಹೆಚ್ಚು ಕುಟುಂಬಗಳು ಘನತೆ ಮತ್ತು ಗೌರವಯುತಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ಜಿ ಮಾತನಾಡಿ ಏಪ್ರಿಲ್ 11.2025 ರ ಕರಡು ಕನಿಷ್ಟ ಕೂಲಿ ಅಧಿಸೂಚನೆಯನ್ನು ಕೂಡಲೇ ಅಂತಿಮ ಅಧಿಸೂಚನೆಯಾಗಿ ಪ್ರಕಟಿಸಿ, ಮೂರು ವರ್ಷಗಳ ವಿಳಂಭವನ್ನು ಸರಿದೂಗಿಸಲು ಪರಿಷ್ಕರಣೆಯು 2022 ರಿಂದ ಜಾರಿಗೆ ಬರುವಂತೆ ಪೂರ್ವಾನ್ವಯವಾಗಿ ಹಾರಿಗೊಳಿಸಿ, ತುಟ್ಟಿಭತ್ಯೆ ದರವನ್ನು ಪ್ರತಿ ಸೂಚ್ಯಂಕ ಪಾಯಿಂಟ್ ೮ ಪೈಸೆ ಹೆಚ್ಚಿಸಬೇಕು ಎಂದರು. ಪ್ರತಿಭಟನೆಯಲ್ಲಿ ಖಜಾಂಚಿ ರವಿಪ್ರಸಾದ್ ಸಿ.ಎ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ ಬೈಎಲೆಕ್ಷನ್‌: ಗೆಲುವೇ ಮುಖ್ಯ ಗುರಿ: ರಾಧಾಮೋಹನ ದಾಸ್
ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ