ರೈತ ಸಂಘದವರನ್ನು ಹಾಸನಾಂಬೆ ನೇರ ದರ್ಶನಕ್ಕೆ ಬಿಟ್ಟ ಉಸ್ತುವಾರಿ ಸಚಿವ

KannadaprabhaNewsNetwork |  
Published : Nov 07, 2026, 01:45 AM IST
6ಎಚ್ಎಸ್ಎನ್19: | Kannada Prabha

ಸಾರಾಂಶ

ರೈತರ ಸಂಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಒಳ್ಳೆಯ ಬುದ್ಧಿ ಕೊಡೆಂದು ಪ್ರಾರ್ಥಿಸಲು ರೈತ ಸಂಘದ ನೂರಾರು ಜನರು ಶುಕ್ರವಾರ ಹಾಸನಾಂಬೆ ದೇಗುಲದ ಮುಖ್ಯ ದ್ವಾರಕ್ಕೆ ಆಗಮಿಸಿದ್ದರು. ಆದರೆ, ಇವರನ್ನು ಪೊಲೀಸರು ತಡೆದಿದ್ದರಿಂದ ಸ್ಥಳದಲ್ಲೇ ಪ್ರತಿಭಟನೆ ಕುಳಿತರು. ಆದರೆ, ಅವರನ್ನು ಸಮಾಧಾನಪಡಿಸಲು ಅವರನ್ನೆಲ್ಲಾ ನೇರವಾಗಿ ದರ್ಶನಕ್ಕೆ ಬಿಟ್ಟ ಜಿಲ್ಲಾ ಉಸ್ತುವಾರಿ ಸಚಿವರ ನಡೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತಿದ್ದವರ ಕೆಂಗಣ್ಣಿಗೆ ಕಾರಣವಾಯಿತು.

ಹಾಸನ:ರೈತರ ಸಂಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಒಳ್ಳೆಯ ಬುದ್ಧಿ ಕೊಡೆಂದು ಪ್ರಾರ್ಥಿಸಲು ರೈತ ಸಂಘದ ನೂರಾರು ಜನರು ಶುಕ್ರವಾರ ಹಾಸನಾಂಬೆ ದೇಗುಲದ ಮುಖ್ಯ ದ್ವಾರಕ್ಕೆ ಆಗಮಿಸಿದ್ದರು. ಆದರೆ, ಇವರನ್ನು ಪೊಲೀಸರು ತಡೆದಿದ್ದರಿಂದ ಸ್ಥಳದಲ್ಲೇ ಪ್ರತಿಭಟನೆ ಕುಳಿತರು. ಆದರೆ, ಅವರನ್ನು ಸಮಾಧಾನಪಡಿಸಲು ಅವರನ್ನೆಲ್ಲಾ ನೇರವಾಗಿ ದರ್ಶನಕ್ಕೆ ಬಿಟ್ಟ ಜಿಲ್ಲಾ ಉಸ್ತುವಾರಿ ಸಚಿವರ ನಡೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತಿದ್ದವರ ಕೆಂಗಣ್ಣಿಗೆ ಕಾರಣವಾಯಿತು.ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ನೂರಾರು ರೈತರು ದೇವಿಗೆ ನೈವೇದ್ಯ ಅರ್ಪಿಸಿ, ತಮ್ಮ ಸಮಸ್ಯೆಗಳ ಕುರಿತು ಹಾಸನಾಂಬೆ ತಾಯಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ದೇವಾಲಯಕ್ಕೆ ಆಗಮಿಸಿದ್ದರು. ಮಹಾನಗರ ಪಾಲಿಕೆ ಮುಂಭಾಗದ ಪ್ರೋಟೋಕಾಲ್ ದ್ವಾರದ ಮೂಲಕ ದರ್ಶನಕ್ಕೆ ಅವಕಾಶ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದರೂ, ಭದ್ರತಾ ಸಿಬ್ಬಂದಿ ರೈತರನ್ನು ತಡೆದರು. ಇದರಿಂದ ಅಸಮಾಧಾನಗೊಂಡ ರೈತರು ದೇವಿಯ ದರ್ಶನ ಪಡೆಯದೆ ಹಿಂದಿರುಗುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಬಂಧ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರು ಅವರನ್ನೆಲ್ಲಾ ನೇರವಾಗಿ ದರ್ಶನಕ್ಕೆ ಬಿಟ್ಟರು. ದರ್ಶನ ಪಡೆದ ಬಳಿಕ ರೈತರು ದೇವಿಯ ಮುಂದೆ ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಪರಿಹಾರ ಸಿಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸುಸ್ತಾಗಿದ್ದೇವೆ. ಹೀಗಾಗಿ ಇದೀಗ ನಿನ್ನ ಸನ್ನಿಧಿಗೆ ಬಂದು ನಮ್ಮ ಅಳಲನ್ನು ಹೇಳಿಕೊಳ್ಳುತ್ತಿದ್ದೇವೆ. ಅಧಿಕಾರಿಗಳಿಗೆ ಒಳ್ಳೆಯ ಬುದ್ಧಿ ನೀಡಿ, ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವಂತೆ ಅನುಗ್ರಹಿಸು ತಾಯಿ ಎಂದು ಬೇಡಿದರು.ಇನ್ನು ರೈತರಿಗೆ ವಿಶೇಷ ದರ್ಶನ ಕಲ್ಪಿಸಿದ ಸಚಿವರ ಕ್ರಮಕ್ಕೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದ ಭಕ್ತರು ಆಕ್ಷೇಪ ವ್ಯಕ್ತಪಡಿಸಿದರು. ಬೆಳಗಿನ ಜಾವ ನಾಲ್ಕು ಗಂಟೆಯಿಂದ ಧರ್ಮದರ್ಶನದ ಸಾಲಿನಲ್ಲಿ ನಿಂತಿದ್ದರೂ ಮಧ್ಯಾಹ್ನ ಎರಡು ಗಂಟೆಯಾದರೂ ದೇವಿಯ ದರ್ಶನವಾಗಿಲ್ಲ. ಆದರೆ ನೂರಾರು ಮಂದಿಗೆ ಕೇವಲ ಹತ್ತು ನಿಮಿಷಗಳಲ್ಲಿ ದರ್ಶನ ಮಾಡಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ