ಖಾಜು ಸಿಂಗೆಗೋಳ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಬದಲಾವಣೆ ಪರ್ವ ಮೇಳೈಸಿದ್ದು, ಒಂದುವೇಳೆ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯಾದರೇ ಇಂಡಿ ಮತಕ್ಷೇತ್ರಕ್ಕೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗುಬಹುದೆಂಬ ನಿರೀಕ್ಷೆಯಲ್ಲಿ ಕ್ಷೇತ್ರದ ಜನತೆ ಇದ್ದಾರೆ.
1947ರಲ್ಲಿ ಮೊದಲ ಬಾರಿಗೆ ಇಂಡಿ ಮತಕ್ಷೇತ್ರ ನಾಮಕರಣವಾಗಿದ್ದು, ಅಂದು ಬಳ್ಳೊಳ್ಳಿ ಮೀಸಲು ಕ್ಷೇತ್ರ ಹಾಗೂ ಇಂಡಿ ಸೇರಿ ಒಂದೇ ಮತಕ್ಷೇತ್ರವಾಗಿತ್ತು. ಅಂದು ಎನ್.ಎನ್.ಕಾಳೆ ಅವರು ನಾಮನಿದೇ೯ಶಿತ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಇಂಡಿ ಮತಕ್ಷೇತ್ರ 1952ರಲ್ಲಿ ಮುಂಬೈ ಪ್ರಾಂತ್ಯಕ್ಕೆ ಸೇರಿತು. ಆಗ ನಗರದ ಮಗನಲಾಲ ಶಹಾ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಇಂಡಿ ಮೈಸೂರ ರಾಜ್ಯಕ್ಕೆ ಸೇರಿತು. 1957ರಲ್ಲಿ ಮಲ್ಲಪ್ಪ ಕರಬಸಪ್ಪ ಸುರಪೂರ ಶಾಸಕರಾಗಿ ಆಯ್ಕೆಯಾದರು. ಆದರೆ, ಕೆಂಗಲಹನುಮಂತರಾಯ ಸಂಪುಟದಲ್ಲಿ ಸುರಪುರ ಮಂತ್ರಿಯಾಗಲಿಲ್ಲ.1962 ರಲ್ಲಿ ಚಾಂದಕವಟೆಯ ಗವಿಸಿದ್ದಪ್ಪಗೌಡ ಪಾಟೀಲರು ಶಾಸಕರಾದರು. ಅವರು ಪಕ್ಷೇತರಾಗಿ ಆಯ್ಕೆಯಾದ ನಿಮಿತ್ತ ಮಂತ್ರಿ ಪದವಿ ದೊರೆಯಲಿಲ್ಲ. 1967 ಹಾಗೂ 1972 ರಲ್ಲಿ ಮತ್ತೆ ಮಲ್ಲಪ್ಪ ಕರಬಸಪ್ಪ ಸುರಪೂರ ಆಯ್ಕೆಯಾದರು. ನಂತರ 1978ರಲ್ಲಿ ಕಲ್ಲೂರ ರೇವಣಸಿದ್ದಪ್ಪ ರಾಮಗೊಂಡಪ್ಪ ಜನತಾ ಪಕ್ಷದಿಂದ ಆಯ್ಕೆಯಾದರು. ಅಂದು ರಾಜ್ಯದಲ್ಲಿ ದೇವರಾಜ ಅರಸು ಸರ್ಕಾರ ರಚನೆ ಆಗಿದ್ದರಿಂದ ಅವರಿಗೆ ಮಂತ್ರಿ ಸ್ಥಾನ ದೊರೆಯಲಿಲ್ಲ.1983ರಲ್ಲಿ ಕಲ್ಲೂರ ರೇವಣಸಿದ್ದಪ್ಪ ರಾಮಗೊಂಡಪ್ಪ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು. ಆಗ ರಾಜ್ಯದಲ್ಲಿ ರಾಮಕೖಷ್ಣ ಹೆಗಡೆ ಸಕಾ೯ರ ರಚನೆಯಾಗಿದ್ದರಿಂದ ಅಂದೂ ಸಹ ಇಂಡಿಗೆ ಮಂತ್ರಿ ಸ್ಥಾನ ಸಿಗಲಿಲ್ಲ. 1985ರಲ್ಲಿ ಜನತಾ ಪಕ್ಷದಿಂದ ಎನ್.ಎಸ್.ಖೇಡ ಆಯ್ಕೆಯಾದರು. ರಾಮಕೖಷ್ಣ ಹೆಗಡೆ ಸಕಾ೯ರ ರಚನೆಯಾದರೂ ಮಂತ್ರಿ ಸ್ಥಾನ ದೊರೆಯಲಿಲ್ಲ. 1989ರಲ್ಲಿ ಮತ್ತೆ ಕಲ್ಲೂರ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು.ರಾಜ್ಯದಲ್ಲಿ ವಿರೇಂದ್ರ ಪಾಟೀಲ ಸರ್ಕಾರ ರಚನೆಯಾದರೂ ಮಂತ್ರಿ ಪದವಿ ಇಂಡಿ ಮತಕ್ಷೇತ್ರಕ್ಕೆ ದಕ್ಕಲಿಲ್ಲ. 1994, 1999 ಹಾಗೂ 2004ರಲ್ಲಿ 3 ಬಾರಿ ಪಕ್ಷೇತರ ಶಾಸಕರಾಗಿ ರವಿಕಾಂತ ಪಾಟೀಲರು ಆಯ್ಕೆಯಾದರು. ಅವರು ಪಕ್ಷೇತರಾಗಿ ಆಯ್ಕೆಯಾಗಿದ್ದರಿಂದ ಮಂತ್ರಿ ಸ್ಥಾನ ಸಿಗಲಿಲ್ಲ. 2008ರಲ್ಲಿ ಬಿಜೆಪಿಯಿಂದ ಡಾ.ಸಾರ್ವಭೌಮ ಬಗಲಿ ಶಾಸಕರಾಗಿ ಆಯ್ಕೆಯಾದರು. ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಆದರೂ ಸಚಿವ ಸ್ಥಾನ ದೊರೆಯಲಿಲ್ಲ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಇಂಡಿ ಮತಕ್ಷೇತ್ರಕ್ಕೆ ದೇಶ ಸ್ವಾಂತ್ರಂತ್ರ್ಯ ಕಂಡಾಗಿನಿಂದಲೂ ಸಚಿವ ಸ್ಥಾನಮಾನ ಸಿಗದಿರುವುದು ಕ್ಷೇತ್ರದ ಜನರಿಗೆ ಬೇಸರದೊಂದಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶಕ್ಕೆ ಹೊರಹಾಕುತ್ತಿದ್ದಾರೆ.2013, 2018 ಹಾಗೂ 2023ರಲ್ಲಿ ಕಾಂಗ್ರೆಸ್ ಪಕ್ಷದಿಂದ ಯಶವಂತರಾಯಗೌಡ ಪಾಟೀಲ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದರು. ಅಂದೂ ಸಹ ಕಾಂಗ್ರೆಸ್ ಶಾಸಕರಾಗಿರುವ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಯಶವಂತರಾಯಗೌಡರಿಗೆ ಅಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡಿದ್ದರಿಂದ ಶಾಸಕ ಸ್ಥಾನ ಸಿಗಲಿಲ್ಲ. 2023ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದೆ. 3 ವರ್ಷದ ಆಡಳಿತ ಅವಧಿ ಪೂರ್ಣಗೊಂಡಿದೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲಿಲ್ಲ. ಸದ್ಯ ರಾಜ್ಯದಲ್ಲಿ ಸಿಎಂ ಹಾಗೂ ಸಚಿವ ಸಂಪುಟ ಬದಲಾವಣೆ ಆಗುತ್ತಿದ್ದು, ಇಂಡಿ ಮತಕ್ಷೇತ್ರದ ಜನತೆಗೆ ಇದ್ದ ಸಚಿವ ಸ್ಥಾನದ ಕೊರಗನ್ನು ನಿವಾರಿಸಬೇಕೆಂದು ಮತಕ್ಷೇತ್ರದ ಪ್ರಜ್ಞಾವಂತ ಮತದಾರರ ಆಗ್ರಹ.
ನಂಜುಂಡಪ್ಪ ವರದಿಯಂತೆ ಇಂಡಿ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ,ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಾಗಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಈ ಕ್ಷೇತ್ರದಲ್ಲಿ ಕನ್ನಡ ಭಾಷೆ ಸುಧಾರಣೆಗೆ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಗಳು ಉನ್ನತಿ ಹೊಂದಬೇಕಾಗಿದೆ. ಕನ್ನಡ ಶಾಲೆಗಳಿಗೆ ಕೋಣೆಗಳ ಕಟ್ಟಡ, ಶಿಜ್ಷಕರು ಸೇರಿದಂತೆ ಮೂಲಸೌಲಭ್ಯಗಳು ಒದಗಿಸಬೇಕಾಗಿದೆ. ಉದ್ಯೋಗಕ್ಕಾಗಿ ಮಹಾರಾಷ್ಟ್ರ, ಗೋವಾ ರಾಜ್ಯಳಿಗೆ ಹೋಗುವ ವಿದ್ಯಾವಂತರಿಗೆ ಉದ್ಯೊಗ ಕಲ್ಪಿಸಲು ಗಡಿಭಾಗದಲ್ಲಿ ಕಾರ್ಖಾನೆಗಳ ಬೆಳವಣಿಗೆ ಆಗಬೇಕಾಗಿದೆ. ಈ ಎಲ್ಲ ಸಮಸ್ಯೆಗಳ ನಡುವೆ ನಿವಾರಣೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ನೀಡಬೇಕಾಗಿದೆ.ಇಂಡಿ ಮತಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು 3 ಬಾರಿ ನನಗೆ ಹ್ಯಾಟ್ರಿಕ್ ಗೆಲುವು ಒದಗಿಸಿಕೊಟ್ಟಿದ್ದಾರೆ. ಸಚಿವ ಸ್ಥಾನ ನೀಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಷಯ. ಈ ಬಾರಿ ಸಚಿವ ಸ್ಥಾನ ನೀಡುತ್ತಾರೆಂಬ ವಿಶ್ವಾಸವಿದೆ.
-ಶಿವಯೋಗೆಪ್ಪ ಚನಗೊಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಇಂಡಿ.ಇಂಡಿ ಮತಕ್ಷೇತ್ರ ಸರ್ವವಿಧದಲ್ಲಿ ಅಭಿವೃದ್ಧಿ ಹೊಂದಲು ಉನ್ನತ ಶಿಕ್ಷಣ, ನಿರುದ್ಯೋಗ ಸಮಸ್ಯೆ ನೀಗಿಸಲು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು.
-ಅವಿನಾಶ ಬಗಲಿ,