ಬೀದರ್: ಫಲಾನುಭವಿಗಳ ಸಂಪರ್ಕ ಅಭಿಯಾನದಡಿ, ಕೇಂದ್ರ ಸಚಿವರು ಹಾಗೂ ಸಂಸದ ಭಗವಂತ ಖೂಬಾ, ಪಕ್ಷದ ಪ್ರಮುಖರು ಸೇರಿ, ಬೀದರ್ ಶಿವನಗರ ದಕ್ಷೀಣದಲ್ಲಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಹಾಯ ಪಡೆದ ಫಲಾನುಭವಿಗಳ ಮನೆ ಮನೆಗೆ ತೆರಳಿ, ಫಲಾನುಭವಿಗಳಿಗೆ ಕರಪತ್ರಗಳು ನೀಡಿ, ಮೋದಿ ಗ್ಯಾರಂಟಿಯ ಸ್ಟೀಕರ್ ಅಂಟಿಸಿದರು.
ಜನರೊಂದಿಗೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಡಿ, ದೇಶವು ಉನ್ನತ್ತಿಯತ್ತ ಸಾಗುತ್ತಿದೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು. ಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಮೂರನೆ ಬಾರಿಗೆ ಆಶೀರ್ವಾದಿಸಿ, ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ನರೇಂದ್ರ ಮೋದಿ ಅವರಿಗೆ ಆಶಿರ್ವಾದ ಮಾಡಬೇಕೆಂದು ಜನರಲ್ಲಿ ವಿನಂತಿಸಿಕೊಂಡರು.
ರಾಜ್ಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಪ್ರದೀಪ ಕಾಡಾದಿ, ಜಿಲ್ಲಾ ಸಂಚಾಲಕ ದಿನೇಶ ಮೂಲಗೆ ಹಾಗೂ ಪ್ರಮುಖರಾದ ನೀತಿನ ಕರ್ಪೂರ, ಗೋಪಾಲ, ಸೂರ್ಯಕಾಂತ ರಾಮಶೇಟ್ಟಿ, ಶರಣಪ್ಪ ಪಂಚಾಕ್ಷರಿ ಇದ್ದರು.