.ಗ್ರಾಪಂ ವತಿಯಿಂದ ಸೋಲಾರ್‌ ವಿದ್ಯುತ್‌ ಉತ್ಪಾದನೆ

KannadaprabhaNewsNetwork | Published : Mar 23, 2025 1:33 AM

ಸಾರಾಂಶ

ಗ್ರಾಪಂಗಳಿಂದ ಬೆಸ್ಕಾಂ ಇಲಾಖೆಗೆ ೨,೫೦೦ ಕೋಟಿ ಬಾಕಿ ನೀಡಬೇಕಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಬಜೆಟ್‌ನಲ್ಲಿ ಗ್ರಾಪಂನಲ್ಲಿ ಸಾಕಷ್ಟು ರೆವಿನ್ಯೂ ಆಸ್ತಿಯಿದ್ದು, ನಾವು ಸ್ವಂತ ವಿದ್ಯುತ್‌ನ್ನು ಏಕೆ ತಯಾರಿಸಬಾರದು ಎಂಬುದರ ಬಗ್ಗೆ ಮನವಿ ಸಲ್ಲಿಸಲಾಯಿತು. ಪ್ರಾಯೋಗಿಕವಾಗಿ ಗ್ರಾಪಂ ವತಿಯಿಂದ ಸೋಲಾರ್‌ನಿಂದ ವಿದ್ಯುತ್ ತಯಾರಿಸಲು ಅನುಮೋದನೆ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಮಾಲೂರು

ರಾಜ್ಯದಲ್ಲಿಯೇ ಮೊದಲ ಬಾರಿಗೆ ಗ್ರಾಪಂ ವತಿಯಿಂದ ಸೋಲಾರ್ ಮೂಲಕ ವಿದ್ಯುತ್‌ನ್ನು ಉತ್ಪಾದಿಸಿ ಗ್ರಾಪಂಗಳಿಗೆ ಪೂರೈಸುವ ಯೋಜನೆಯನ್ನು ಕಾರ‍್ಯರೂಪಕ್ಕೆ ತಂದಿದ್ದು, ಮೊದಲ ಹಂತದಲ್ಲಿ ಕಲಬುರಗಿ ಹಾಗೂ ಮಾಲೂರಿನಲ್ಲಿ ಪ್ರಾಯೋಗಿಕವಾಗಿ ಸೋಲಾರ್ ಪ್ಲಾಂಟ್ ನಿರ್ಮಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ತಾಲೂಕಿನ ಕಸಬಾ ಹೋಬಳಿಯ ಸಂತೆಹಳ್ಳಿ ಗ್ರಾಮದಲ್ಲಿ ವಿವಿಧ ಅನುದಾನಗಳಿಂದ ಸುಮಾರು ೧.೦೮ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ನೂತನ ಗ್ರಾಪಂ ಕಚೇರಿ ಕಟ್ಟಡವನ್ನು ಉದ್ಟಾಟಿಸಿ ಮಾತನಾಡಿದರು.

ಗ್ರಾಪಂಗೆ ಸೋಲಾರ್‌ ವಿದ್ಯುತ್‌

ಗ್ರಾಪಂಗಳಿಂದ ಬೆಸ್ಕಾಂ ಇಲಾಖೆಗೆ ೨,೫೦೦ ಕೋಟಿ ಬಾಕಿ ನೀಡಬೇಕಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಬಜೆಟ್‌ನಲ್ಲಿ ಗ್ರಾಪಂನಲ್ಲಿ ಸಾಕಷ್ಟು ರೆವಿನ್ಯೂ ಆಸ್ತಿಯಿದ್ದು, ನಾವು ಸ್ವಂತ ವಿದ್ಯುತ್‌ನ್ನು ಏಕೆ ತಯಾರಿಸಬಾರದು ಎಂಬುದರ ಬಗ್ಗೆ ಮನವಿ ಸಲ್ಲಿಸಲಾಯಿತು. ಪ್ರಾಯೋಗಿಕವಾಗಿ ಗ್ರಾಪಂ ವತಿಯಿಂದ ಸೋಲಾರ್‌ನಿಂದ ವಿದ್ಯುತ್ ತಯಾರಿಸಲು ಅನುಮೋದನೆ ನೀಡಿದ್ದಾರೆ. ಕಲಬುರಗಿ ಹಾಗೂ ಮಾಲೂರಿನಲ್ಲಿ ಪ್ರಾಯೋಗಿಕವಾಗಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುವುದು ಎಂದರು.ಕಾರ‍್ಯಕ್ರಮಗಳಲ್ಲಿ ಯಾವುದೇ ರೀತಿಯ ಶಾಲು, ಹಾರ ಹಾಕಿಸಿಕೊಳ್ಳುವುದಿಲ್ಲ. ಬದಲಿಗೆ ಪುಸ್ತಕಗಳನ್ನು ಪಡೆಯುತ್ತೇನೆ ಎಂದ ಸಚಿವರು ಗ್ರಾಪಂ ವತಿಯಿಂದ ೬ ಸಾವಿರ ಲೈಬ್ರರಿಗಳನ್ನು ನಡೆಸಲಾಗುತ್ತಿದೆ. ಕಾರ‍್ಯಕ್ರಮಗಳಲ್ಲಿ ನೀಡುವಂತಹ ಪುಸ್ತಕಗಳನ್ನು ಲೈಬ್ರರಿಗಳಿಗೆ ನೀಡುತ್ತಿದ್ದು, ಇದರಿಂದ ೫೧ ಲಕ್ಷ ಯುವಕ, ಯುವತಿಯರು ಉನ್ನತ ದರ್ಜೆ ಪಡೆಯಲು ಲೈಬ್ರರಿಗಳಿಗೆ ಭೇಟಿ ನೀಡಿ ಸ್ವರ್ಧಾತ್ಮಕ ಪುಸ್ತಕಗಳನ್ನು ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಲಾಗಿದೆ ಎಂದರು. ಗ್ರಾಪಂ ತೆರಿಗೆ ಹಣ ಅಭಿವೃದ್ಧಿಗೆ

ತಾಲೂಕಿನಲ್ಲಿ ಹೊಸದಾಗಿ ಹಲವು ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಿದ್ದಾರೆ. ರಾಜ್ಯದಲ್ಲಿ ೧೧.೨೦ ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಪಡಿಸಿದ್ದು, ಇದರಿಂದ ೧೭೦೦ ಕೋಟಿ ತೆರಿಗೆ ಗ್ರಾಪಂ ವತಿಯಿಂದ ಆಗಿದೆ. ಈ ಹಣ ಇಲ್ಲಿಯೇ ಇರುತ್ತದೆ. ರಾಜ್ಯ ಬಜೆಟ್‌ನಲ್ಲಿ ಎಲ್ಲ ಸಮುದಾಯಗಳು, ಎಲ್ಲಾ ಇಲಾಖೆಗಳಿಗೂ ಹೆಚಿನ ಅನುದಾನ ನೀಡಲಾಗಿದೆ. ಇದು ಪ್ರತಿಪಕ್ಷಗಳ ಕಣ್ಣಿಗೆ ಕಾಣುತ್ತಿಲ್ಲ ಎಂದು ಟೀಕಿಸಿದರು.

ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಯಡಿ ಹಣ ಸಿಗುತ್ತಿದೆ. ಈ ಹಣವನ್ನು ನೀವು ಮಕ್ಕಳ ಫೀಜು, ಇನ್ನಿತರೆಗೆ ಬಳಸುತ್ತಿದ್ದೀರೆ. ಮೋದಿ ಅವರ ಮಾಸ್ಟರ್ ಸ್ಟ್ರೋಕ್‌ನಿಂದ ಜನತೆ ಬೀದಿಗೆ ಬಿದ್ದಿದ್ದಾರೆ. ವಿರೋಧ ಪಕ್ಷದವರು ಬಿಟ್ಟಿ ಭಾಗ್ಯ ಎನ್ನುತ್ತಾರೆ. ಆದರೆ ಜನರನ್ನು ಆರ್ಥಿಕ ಸ್ಥಿರತೆ, ಸ್ವಾಭಿಮಾನದ ಕಡೆಗೆ ಹೋಗಲು ಗ್ಯಾರಂಟಿ ಸಹಕಾರಿಯಾಗಿದೆ ಎಂದರು.ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಮುಖ್ಯಮಂತ್ರಿಗಳ ಸಹಕಾರದಿಂದ ವಿವಿಧ ಯೋಜನೆಗಳಿಗೆ ೨,೨೦೦ ಕೋಟಿ ಅನುದಾನವನ್ನು ತಾಲೂಕಿಗೆ ಮಂಜೂರು ಮಾಡಿದ್ದಾರೆ. ಮುಂದಿನ ೧ ರಿಂದ ೨ ವರ್ಷದ ವೇಳೆಗೆ ತಾಲೂಕಿನ ಚಿತ್ರಣವೇ ಬದಲಾಗಲಿದೆ ಎಂದರು.ಈ ಸಂದರ್ಭದಲ್ಲಿ ಜಿಪಂ ಇಲಾಖೆಯ ಉಪಕಾರ‍್ಯದರ್ಶಿ ಶಿವಕುಮಾರ್, ತಹಸೀಲ್ಥಾರ್ ರೂಪ, ಗ್ರಾಪಂ ಅಧ್ಯಕ್ಷೆ ಮಾಯಮ್ಮ ನಾರಾಯಣಸ್ವಾಮಿ, ಪುರಸಭೆ ಅಧ್ಯಕ್ಷೆ ಕೋಮಲ ಕೋಳಿ ನಾರಾಯಣ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ನಯಿಮ್ ಉಲ್ಲಾ, ಆಡಳಿತಾಧಿಕಾರಿ ರಮೇಶ್, ದರಕಾತ್ತು ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ, ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎ.ಅಶ್ವಥ್‌ರೆಡ್ಡಿ, ತಾ.ಅಧ್ಯಕ್ಷ ಆಂಜೀನಫ್ಪ, ಪಿಎಲ್‌ಡಿ ಬ್ಯಾಂಕ್ ನಿರ್ಧೇಶಕ ಚನ್ಙರಾಯಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ನರಸಿಂಹ ಇನ್ನಿತರರು ಹಾಜರಿದ್ದರು.

Share this article