ಕನ್ನಡಪ್ರಭ ವಾರ್ತೆ ಕೆಂಗೇರಿ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಯಶವಂತಪುರ ವಿಧಾನಸಭಾ ಕ್ಷೇತ್ರದ ದುಬಾಸಿಪಾಳ್ಯ, ಗೇರುಪಾಳ್ಯ ಬ್ರಾಕೆಟ್ (ರಾಮೋಹಳ್ಳಿ ಗೇಟ್) ಹಾಗೂ ಚಲ್ಲಘಟ್ಟ ರೈಲ್ವೆ ಗೇಟ್ ಲೆವೆಲ್ ಕ್ರಾಸಿಂಗ್ ಪ್ರದೇಶಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಲೆವಿಲ್ ಕ್ರಾಸಿಂಗ್ ರೈಲ್ವೆ ಗೇಟ್‌ನಿಂದಾಗಿ ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಮನ್ವತೆಯನ್ನು ಸಾಧಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಈ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡಿ ಅಧಿಕಾರಿಗಳು ವರದಿ ನೀಡಿ ಎಂದು ಸೂಚಿಸಿದರು.ಬಿಬಿಎಂಪಿ ರಾಜರಾಜೇಶ್ವರಿ ನಗರ ಉಪವಲಯ ಜಂಟಿ ಆಯುಕ್ತ ಡಾ। ಅಜಯ್, ಬಿಬಿಎಂಪಿ ಮಾಜಿ ಸದಸ್ಯ ಅಂಜನಪ್ಪ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಂಗರಾಜ್, ಉತ್ತರ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ಪಿ.ಪ್ರಕಾಶ್, ಮುಖಂಡರಾದ ಸ್ಪಾಟ್ ನಾಗರಾಜ್ ಪಾಂಡು, ವಾಜರಹಳ್ಳಿ ಶಶಿಕುಮಾರ್, ಎನ್.ಸಿ.ಕುಮಾರ್ ನಾಗದೇವನಹಳ್ಳಿ ಹಾಜರಿದ್ದರು.