ದಸರಾ ನವರಾತ್ರಿ ಮಹೋತ್ಸವಕ್ಕೆ ಸಚಿವ ಎಸ್‌ಎಸ್‌ಎಂ ಚಾಲನೆ

KannadaprabhaNewsNetwork |  
Published : Oct 12, 2026, 01:45 AM IST
ಕ್ಯಾಪ್ಷನ11ಕೆಡಿವಿಜಿ42, 43, 44, 45 ದಾವಣಗೆರೆಯ ದುಗ್ಗಮ್ಮ ದೇವಸ್ಥಾನದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ ಶಾಮನೂರು ಕುಟುಂಬದವರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ದೀಪ ಬೆಳಗಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. .........ಕ್ಯಾಪ್ಞನ11ಕೆಡಿವಿಜಿ46 ದಾವಣಗೆರೆ ಶಂಕರ ವಿಹಾರ್‌ ಬಡಾವಣೆಯ ಅಂಬಾಭವಾನಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿರುವುದು. | Kannada Prabha

ಸಾರಾಂಶ

ಶಕ್ತಿ ದೇವತೆಗಳ ಆರಾಧನೆ ಹಬ್ಬವಾದ ದಸರಾ ಅಂಗವಾಗಿ ಜಿಲ್ಲೆಯಾದ್ಯಂತ 9 ದಿನಗಳ ಕಾಲ ನವರಾತ್ರಿ ಸಂಭ್ರಮಾಚರಣೆಗೆ ಭಾನುವಾರ ವಿವಿಧ ಪೂಜೆ, ಅಭಿಷೇಕ, ವಿಶೇಷ ಅಲಂಕಾರಗಳೊಂದಿಗೆ ಚಾಲನೆ ನೀಡಲಾಯಿತು.

- ಎಲ್ಲೆಡೆ ದೇವಿ ಆರಾಧನೆ ಸಂಭ್ರಮ: 9 ದಿನಗಳ ಕಾಲ ವಿಶೇಷ ಪೂಜೆ, ಅಲಂಕಾರ । ಸಂಸದೆ, ಶಾಸಕ, ಗಣ್ಯರು ಭಾಗಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಕ್ತಿ ದೇವತೆಗಳ ಆರಾಧನೆ ಹಬ್ಬವಾದ ದಸರಾ ಅಂಗವಾಗಿ ಜಿಲ್ಲೆಯಾದ್ಯಂತ 9 ದಿನಗಳ ಕಾಲ ನವರಾತ್ರಿ ಸಂಭ್ರಮಾಚರಣೆಗೆ ಭಾನುವಾರ ವಿವಿಧ ಪೂಜೆ, ಅಭಿಷೇಕ, ವಿಶೇಷ ಅಲಂಕಾರಗಳೊಂದಿಗೆ ಚಾಲನೆ ನೀಡಲಾಯಿತು.

ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಅ.11 ರಿಂದ 22ರವರೆಗೆ ನವರಾತ್ರಿ ಅಂಗವಾಗಿ ಪ್ರತಿದಿನ ಪಾದಗಟ್ಟೆ ಬಳಿ ದೇವಿ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದೆ. ಈ 9 ದಿನಗಳು ದುಗ್ಗಮ್ಮನಿಗೆ ಜಗತ್ಪ್ರುಸೂತಿ ಅಲಂಕಾರ, ವೃಷಭವಾಹನಿ, ಮಯೂರವಾಹನಿ, ಹಂಸವಾಹನ, ಗರುಡವಾಹನ, ವೀಣಾಪಾಣಿ, ಕಾಳಿ, ದುರ್ಗಾ, ಚಾಮುಂಡಿ, ಮಹಿಷ ಮರ್ದಿನಿ, ಗಜಲಕ್ಷ್ಮೀ ಅಲಂಕಾರಗಳ ನೆರವೇರಿಸಿ, ಪೂಜಿಸಲಾಗುವುದು. ಅ.22ರಂದು ಸಾಮೂಹಿಕ ವಿವಾಹ ಮಹೋತ್ಸವ ಆಚರಿಸಲಾಗುವುದು.

ಈ ಹಿನ್ನೆಲೆ ಭಾನುವಾರ ಬೆಳಗ್ಗೆ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನಿಂದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಆಯೋಜಿಸಿದ್ದ ನವರಾತ್ರಿ ಹಾಗೂ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ ಶಾಮನೂರು ಸೇರಿದಂತೆ ಅವರ ಕುಟುಂಬದವರು ತಾಯಿ ದುರ್ಗಾ ಮಾತೆಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ದೀಪ ಬೆಳಗುವ ಮೂಲಕ ನವರಾತ್ರಿ, ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಹಬ್ಬದ ಅಂಗವಾಗಿ ದೇವಾಲಯಗಳು ಸುಣ್ಣ-ಬಣ್ಣ ಕಂಡು, ವಿದ್ಯುತ್‌ ದೀಪಾಲಂಕಾರದೊಂದಿಗೆ ಸಿದ್ಧಗೊಂಡಿವೆ. ಭಕ್ತಾಧಿಗಳು ಭಾನುವಾರ ಮುಂಜಾನೆ ಶುಭ್ರ ಬಟ್ಟೆ ಧರಿಸಿ, ತಮ್ಮ ಕುಟುಂಬದ ಸದಸ್ಯರೊಂದಿಗೆ ಅಮ್ಮನವರ ದೇವಸ್ಥಾನಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರು.

ಇನ್ನು ಇಲ್ಲಿನ ವಿವಿಧ ದೇವಿ, ಅಮ್ಮನವರ ದೇವಾಲಯಗಳಲ್ಲಿ ಭಾನುವಾರದಿಂದ 9 ದಿನಗಳ ಕಾಲ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತಿದೆ. ನಿತ್ಯ ಸದ್ಭಕ್ತರಿಂದ ಅಮ್ಮನವರಿಗೆ ಅಭಿಷೇಕ, ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗಣಪತಿ, ಶಾರದಾಂಬ, ಚಂದ್ರಮೌಳೇಶ್ವರ, ಶಂಕರಾಚಾರ್ಯರ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಅಲಂಕಾರದೊಂದಿಗೆ ಅ.2ರಂದು ಗಜಲಕ್ಷ್ಮೀ ಅಲಂಕಾರ ಮಾಡುವರು. ಆಂಜನೇಯ ಬಡಾವಣೆಯ ಬನ್ನಿ ಮಹಾಂಕಾಳಿ ದೇವಸ್ಥಾನ, ಶಂಕರ ವಿಹಾರ್‌ ಬಡಾವಣೆಯ ಅಂಬಾಭವಾನಿ ದೇವಸ್ಥಾನ, ದಾವಲ್ ಪೇಟೆಯ ಚಾಮುಂಡೇಶ್ವರಿ ದೇವಸ್ಥಾನ, ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ, ಕೆಟಿಜೆ ನಗರದ ಚೌಡೇಶ್ವರಿ, ನಿಟ್ಟುವಳ್ಳಿಯ ಚಾಮುಂಡೇಶ್ವರಿ, ವಿನೋಬನಗರದ ಶ್ರೀ ಚೌಡೇಶ್ವರಿ, ಭಗತ್‌ಸಿಂಗ್ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ ಸೇರಿದಂತೆ ವಿವಿಧ ದೇವಿಯರ ದೇವಸ್ಥಾನದಲ್ಲಿ ನಿತ್ಯ ಪೂಜೆ, ಅಭಿಷೇಕ, ಅಲಂಕಾರ ಕಾರ್ಯಕ್ರಮಗಳು ನಡೆಯಲಿವೆ.

- - -

-11ಕೆಡಿವಿಜಿ42, 43, 44, 45: ದಾವಣಗೆರೆಯ ದುಗ್ಗಮ್ಮ ದೇವಸ್ಥಾನದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ ಶಾಮನೂರು ಕುಟುಂಬದವರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ದೀಪ ಬೆಳಗಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. -11ಕೆಡಿವಿಜಿ46: ದಾವಣಗೆರೆ ಶಂಕರ ವಿಹಾರ್‌ ಬಡಾವಣೆಯ ಅಂಬಾಭವಾನಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ ನೆರವೇರಿಸಿ ಪೂಜಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಯಾನ್ಸಿರಾಂ ತತ್ವಾದರ್ಶಗಳ ಆದರ್ಶಗಳ ಪಾಲಿಸಿ: ಅಂದಾನಪ್ಪ
ಚಂದ್ರಶೇಖರ್ ನಿಸ್ವಾರ್ಥ ರಾಜಕಾರಣಿ,ಪಟೇಲರು ಶ್ರೇಷ್ಠರು: ಬಿಎಲ್‌ ಶಂಕರ್‌