ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ಬೇಡ

KannadaprabhaNewsNetwork |  
Published : Feb 06, 2025, 12:18 AM IST
(3ಎನ್.ಆರ್.ಡಿ4 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಹಾಯ‍ಕ ಸರ್ಕಾರಿ ಅಭಿಯೋಜಕ ಜಗತ್ತ ನಾಯಕ ಕಣವಿವರು ಉದ್ಘಾಟಿನೆ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ಕಡೆಗೆ ಆಕರ್ಷಿತರಾಗದೇ, ಒಳ್ಳೆಯ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು

ನರಗುಂದ: ಕಾನೂನು ಪ್ರಕಾರ 18 ವಯಸ್ಸಿನೊಳಗಿನವರು ವಾಹನ ಚಲಾಯಿಸಬಾರದು ಎಂದು ಸಹಾಯ‍ಕ ಸರ್ಕಾರಿ ಅಭಿಯೋಜಕ ಜಗತ್ತ ನಾಯಕ ಕಣವಿ ಹೇಳಿದರು.

ಅವರು ಪಟ್ಟಣದ ಲಯನ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, 18 ವಯಸ್ಸಿನೊಳಗಿನವರು ವಾಹನಗಳನ್ನು ಚಲಾಯಿಸಬಾರದು. ವಾಹನದ ಚಾಲನಾ ಪರವಾನಗಿ ಹಾಗೂ ವಾಹನದ ಇನ್ಸೂರೆನ್ಸ್‌ ಪಡೆದು ವಾಹನ ಚಲಾಯಿಸಬೇಕು. ಒಂದು ವೇಳೆ 18 ವಯಸ್ಸಿನೊಳಗಿನವರಿಗೆ ದ್ವಿಚಕ್ರ ವಾಹನ ಚಲಾಯಿಸಲು ಕೊಟ್ಟರೆ ₹25 ಸಾವಿರ ವಾಹನ ಮಾಲೀಕರಿಂದ ವಸೂಲು ಮಾಡಬೇಕಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ಕಡೆಗೆ ಆಕರ್ಷಿತರಾಗದೇ, ಒಳ್ಳೆಯ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು ಎಂದು ಕಿವಿಮಾತು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಹುಲಕೋಟಿ ಮಾತನಾಡಿ, ಪ್ರತಿ ವರ್ಷ ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ ಮಾಡಲಾಗುತ್ತದೆ. 18 ವರ್ಷಗಳ ಒಳಗೆ ಮದುವೆ ಮಾಡಿಕೊಳ್ಳಬಾರದು. ಹೆಣ್ಣು ಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಒತ್ತು ನೀಡಲಾಗುತ್ತದೆ. ಹೆಣ್ಣು ಶಿಶುಹತ್ಯೆ, ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯದಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿ ಹೊಂದಲಾಗಿದೆ. ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹೆಣ್ಣುಮಕ್ಕಳಿಗೆ ಅವರ ಹಕ್ಕುಗಳು, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ಹಾಗೂ ನಿಮ್ಮ ಸುತ್ತ ಮುತ್ತ ಬಾಲ್ಯ ವಿವಾಹವಾಗುತ್ತಿದ್ದರೆ, 1098 ಸಹಾಯವಾಣಿಗೆ ದೂರವಾಣಿ ಕರೆಯಮಾಡಿ. ದೂರವಾಣಿ ಕರೆ ಮಾಡಿದ ವ್ಯಕ್ತಿಯ ಹೆಸರು ಗೌಪ್ಯವಾಗಿ ಇಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ, ವೈ.ಪಿ. ಕಲ್ಲನಗೌಡ್ರ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ, ನ್ಯಾಯವಾದಿಗಳಾದ ಎಫ್.ವೈ. ದೊಡಮನಿ, ಎಸ್.ಕೆ. ಹರಪನಹಳ್ಳಿ, ಶಾಲೆಯ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ