ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಸಹಿಸಲಸಾಧ್ಯ: ಚಂದ್ರಶೇಖರ್

KannadaprabhaNewsNetwork |  
Published : Aug 21, 2025, 01:00 AM IST
20 ಟಿವಿಕೆ 2 - ತುರುವೇಕೆರೆಯಲ್ಲಿ ಧರ್ಮಸ್ಥಳ ಭಕ್ತ ವೃಂದ ವತಿಯಿಂದ ಪ್ರತಿಭಟನೆ ಹಾಗೂ ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು. | Kannada Prabha

ಸಾರಾಂಶ

ಸನಾತನ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ, ಹಿಂದೂಧರ್ಮವು 10 ಸಾವಿರ ವರ್ಷಗಳಷ್ಟು ಹಳೆಯದು. ದುಷ್ಟಶಕ್ತಿಗಳು ದೇಶವನ್ನು ವಿಭಜಿಸಲು ಹುನ್ನಾರ ನಡೆಸುತ್ತಿವೆ, ಭಾರತದ ಶಕ್ತಿಯನ್ನು ವಿರೋಧಿ ದೇಶಗಳಿಗೆ ಸಹಿಸಲು ಆಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿರುವುದು ಸಹಿಸಲಸಾಧ್ಯವಾಗಿದೆ. ಇಂತಹ ದುಷ್ಕೃತ್ಯ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿಯ ವಕ್ತಾರ, ಯುವ ಮುಖಂಡ ಚಂದ್ರಶೇಖರ್ ಆಗ್ರಹಿಸಿದರು.

ಪಟ್ಟಣದ ಹಲವಾರು ಸಂಘಸಂಸ್ಥೆಗಳ ಆಶ್ರಯದಲ್ಲಿ ಹಾಗೂ ಧರ್ಮಸ್ಥಳ ಭಕ್ತವೃಂದದ ವತಿಯಿಂದ ಹಮ್ಮಿಕೊಳ್ಳಲಾದ ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಪ್ರತಿಭಟನೆ ಹಾಗೂ ಸ್ವಯಂ ಪ್ರೇರಿತ ಬಂದ್ ಆಚರಣೆ ವೇಳೆ ಅವರು ಮಾತನಾಡಿದರು.

ಸನಾತನ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ, ಹಿಂದೂಧರ್ಮವು 10 ಸಾವಿರ ವರ್ಷಗಳಷ್ಟು ಹಳೆಯದು. ದುಷ್ಟಶಕ್ತಿಗಳು ದೇಶವನ್ನು ವಿಭಜಿಸಲು ಹುನ್ನಾರ ನಡೆಸುತ್ತಿವೆ, ಭಾರತದ ಶಕ್ತಿಯನ್ನು ವಿರೋಧಿ ದೇಶಗಳಿಗೆ ಸಹಿಸಲು ಆಗುತ್ತಿಲ್ಲ, ವಿದೇಶಿ ಶಕ್ತಿಗಳು ನಮ್ಮಲ್ಲಿರುವ ದೇಶದ್ರೋಹಿಗಳ ನೆರವನ್ನು ಪಡೆದು ಈ ರೀತಿಯ ದುಷ್ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಈ ಹಿಂದೆ ಶಬರಿಮಲೆ ದೇವಸ್ಥಾನ, ತಿರುಪತಿ, ನಂಜನಗೂಡು ಮುಂತಾದ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ತರುವಂತಹ ಕಾರ್ಯ ಮಾಡಿದ್ದರು. ಈಗ ಧರ್ಮಸ್ಥಳದ ಮೇಲೆ ಅವರ ಕಣ್ಣು ಬಿದ್ದಿದೆ. ಧರ್ಮಸ್ಥಳ ಧಾರ್ಮಿಕ ಕ್ಷೇತ್ರ. ಜೊತೆಗೆ ಡಾ. ವೀರೇಂದ್ರ ಹೆಗ್ಗಡೆ ದೂರದೃಷ್ಟಿಯಿಂದ ಗ್ರಾಮೀಣಾಭಿವೃದ್ಧಿ ಸಂಘ ಸ್ಥಾಪಿಸಿ ರಾಜ್ಯದ ಬಡ ಜನರು ಆರ್ಥಿಕವಾಗಿ ಪ್ರಬಲರಾಗಿ ಬಾಳು ಬೆಳಗುವಂತೆ ಮಾಡಿದ್ದಾರೆ ಎಂದರು.

ಪ್ರತಿಭಟನೆ ಹಿನ್ನೆಲೆ ಪಟ್ಟಣದಲ್ಲಿ ಕೆಲವು ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ನಂತರ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಬಾಣಸಂದ್ರ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನವೀನ್ ಬಾಬು, ಶ್ರೀಧರ್, ಹೆಡಗಿಹಳ್ಳಿ ವಿಶ್ವನಾಥ್, ಗಿರೀಶ್ ಆಚಾರ್, ಕುಮಾರ್ ಜಗದೀಶ್, ಕನ್ನಡ ಕಂದ ವೆಂಕಟೇಶ್, ಧನಂಜಯ, ಮುನಿಯಪ್ಪ, ಜಯಲಕ್ಷ್ಮೀ, ಹುಲ್ಲೇಕೆರೆ ಲೋಕೇಶ್, ರೇಣುಕೇಶ್, ರಾಕೇಂದು, ಗೌರೀಶ್ ಹಟ್ಟಿಹಳ್ಳಿ, ಯೋಜನಾಧಿಕಾರಿಗಳಾದ ಶಾಲಿನಿ ಶೇಖರ್ ಶೆಟ್ಟಿ, ಚಂದನ, ತಾಲೂಕು ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಚಂದ್ರಕೀರ್ತಿ, ಶಂಕರಪ್ಪ, ರೇಣುಕೇಶ್, ರವಿ, ಶಿವರಾಜ್, ಸೋಮೇನಹಳ್ಳಿ ಜಗದೀಶ್‌, ತಂಡಗದ ಮಹಾವೀರ ಜೈನ್‌ ಸಮಾಜ, ಕೂಷ್ಮಾಂಡಿನಿ ಜೈನ ಮಹಿಳಾ ಸಮಾಜ, ಮಾಯಸಂದ್ರದ ಸರಸ್ವತಿ ಮಹಾಜೈನ ಮಹಿಳಾ ಸಮಾಜ, ಪಾರ್ಶ್ವನಾಥ ಜೈನ್‌ ಸಮಾಜದ ಪದಾದಿಕಾರಿಗಳು ಸೇರಿ ಹಲವಾರು ಜನರು ಭಾಗವಹಿಸಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ