ನಾಪತ್ತೆಯಾದ ಗೋವಾ ಬೋಟ್ ಪತ್ತೆ, ಎಲ್ಲ 27 ಮೀನುಗಾರರು ಸುರಕ್ಷಿತ

KannadaprabhaNewsNetwork |  
Published : Dec 06, 2023, 01:15 AM IST
1 | Kannada Prabha

ಸಾರಾಂಶ

ಬೋಟು ಹಾಗೂ ಮೀನುಗಾರರನ್ನು ಸುರಕ್ಷಿತವಾಗಿ ಕಾರವಾರಕ್ಕೆ ಕರೆತರಲಾಗಿದೆ. ಬೋಟಿನ ಎಂಜಿನ್ ವೈಫಲ್ಯದಿಂದಾಗಿ ಬಂದರಿನತ್ತ ಮರಳಲು ಸಾಧ್ಯವಾಗಿರಲಿಲ್ಲ.

ಕಾರವಾರ:

ನಾಲ್ಕು ದಿನಗಳ ಹಿಂದೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಗೋವಾದ ಮೀನುಗಾರಿಕಾ ಬೋಟನ್ನು ಅಂಕೋಲಾದ ಬೇಲೆಕೇರಿಯಿಂದ 30 ನಾಟಿಕಲ್ ಮೈಲು ದೂರದಲ್ಲಿ ಕೋಸ್ಟ್ ಗಾರ್ಡ ಸಿಬ್ಬಂದಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಬೋಟಿನಲ್ಲಿದ್ದ ಎಲ್ಲ 27 ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಪಣಜಿ ಮೂಲದ ಕ್ರಿಸ್ಟೋ ರೇ ಹೆಸರಿನ ಈ ಬೋಟ್ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಯಾವುದೇ ಬಂದರಿಗೆ ಬರಲಾರದೆ ಸಮುದ್ರದಲ್ಲಿ ನಾಪತ್ತೆಯಾಗಿ ಆತಂಕ ಉಂಟುಮಾಡಿತ್ತು. ಜೊತೆಗೆ ಎಲ್ಲ ಸಂಪರ್ಕವನ್ನೂ ಕಡಿದುಕೊಂಡಿತ್ತು. ಗೋವಾದ ಕೋಸ್ಟಗಾರ್ಡ್ ಈ ಬಗ್ಗೆ ಕಾರವಾರದ ಕೋಸ್ಟಗಾರ್ಡಗೆ ಮಾಹಿತಿ ನೀಡಿತ್ತು. ಹುಡುಕಾಟ ಆರಂಭಿಸಿದ ಕೋಸ್ಟಗಾರ್ಡ ಸಿಬ್ಬಂದಿ ಬೇಲೆಕೇರಿಯಿಂದ 30 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಬೋಟನ್ನು ಪತ್ತೆಹಚ್ಚುವಲ್ಲಿ ಸಫಲವಾಗಿದ್ದು, ಬೋಟು ಹಾಗೂ ಮೀನುಗಾರರನ್ನು ಸುರಕ್ಷಿತವಾಗಿ ಕಾರವಾರಕ್ಕೆ ಕರೆತರಲಾಗಿದೆ. ಬೋಟಿನ ಎಂಜಿನ್ ವೈಫಲ್ಯದಿಂದಾಗಿ ಬಂದರಿನತ್ತ ಮರಳಲು ಸಾಧ್ಯವಾಗಿರಲಿಲ್ಲ.

ಈ ಬೋಟ್ ಗೋವಾದ ಫ್ಲೋಸಿ ರೊಡ್ರಗಿಸ್ ಎನ್ನುವವರಿಗೆ ಸೇರಿದ್ದು, ನ. 29ರಂದು ಪಣಜಿಯಿಂದ ಮೀನುಗಾರಿಕೆಗೆ ತೆರಳಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ