ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶನಿವಾರ ಹೊನ್ನಾಳಿ ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯಾಲಯಗಳಿಗೆ ಸುತ್ತಾಡುವ ಬದಲು ಸ್ಥಳಿಯ ನ್ಯಾಯಾಲಯದಲ್ಲೇ ತಮ್ಮ ಪ್ರಕರಣಗಳು ರಾಜೀ ಮಾಡಿಕೊಂಡರೆ ಕೋರ್ಟ್‌ನಿಂದ ಕೋರ್ಟಿಗೆ ಅಲೆದಾಡುವುದು ತಪ್ಪುತ್ತದೆ ಹಾಗೂ ಜೀವನದಲ್ಲಿ ಶಾಂತಿ ನೆಮ್ಮದಿ ಕಂಡುಕೊಳ್ಳಬಹುದು ಎಂದು ಹೇಳಿದರು.ಜಮೀನು ವಿಚಾರಗಳಿಗೆ ರಕ್ತ ಸಂಬಂಧಿಗಳು ದ್ವೇಷ ಭಾವನೆಯಿಂದ ಜೀವನ ಸಾಗಿಸುವ ಬದಲು, ಇದ್ದುದ್ದರಲ್ಲೇ ಹಂಚಿಕೊಂಡು ತಮ್ಮ ವೈರತ್ವ ಮರೆತು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡರೆ ಸುಂದರ ಬದುಕನ್ನು ಸಾಗಿಸಬಹುದು ಎಂದ ಅವರು ರಾಜೀಯಾದ ಪ್ರಕರಣಗಳಿಂದ ಎಷ್ಟೋ ಕುಟುಂಬಗಳು ಇಂದಿಗೂ ಸಂತಸದ ಬದುಕನ್ನು ಸಾಗಿಸುತ್ತಿವೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎನ್ ಪುಣ್ಯಕೋಟಿ ಮಾತನಾಡಿ, ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ತಮ್ಮ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸಿಕೊಡಲಾಗುವುದು ಹಾಗೂ ಉಭಯ ಕಕ್ಷಿದಾರರಿಗೆ ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.
-----
ಫೋಟೋ: 13ಎಚ್.ಎಲ್.ಐ2.ಹೊನ್ನಾಳಿ ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಲೋಕ ಅದಾಲತ್ ನಡೆಯಿತು.