ರಾಜ್ಯ ಸರ್ಕಾರದಿಂದ ದಲಿತರ ಅನುದಾನದ ದುರ್ಬಳಕೆ: ಡಾ.ಜಾಧವ

KannadaprabhaNewsNetwork | Published : Apr 2, 2024 1:07 AM

ಸಾರಾಂಶ

ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿಯದೆ, ಅದು ಖರ್ಗೆ ಆ್ಯಂಡ್‌ ಲಿ. ಕಂಪನಿಯಾಗಿದೆ, ರಾಜ್ಯ ಸರಕಾರ ಚುನಾವಣೆ ಗೆಲ್ಲಲು ಗ್ಯಾರಂಟಿ ಘೋಷಿಸಿ, ಈಗ ದಲಿತರ ಅಭಿವೃದ್ದಿ ಹಣ 25 ಸಾವಿರ ಕೋಟಿ ರು. ಎಸ್‍ಸಿಪಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ರಾಜ್ಯ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಂಸದ ಡಾ.ಉಮೇಶ ಜಾಧವ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಹಾಬಾದ ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿಯದೆ, ಅದು ಖರ್ಗೆ ಆ್ಯಂಡ್‌ ಲಿ. ಕಂಪನಿಯಾಗಿದೆ, ರಾಜ್ಯ ಸರಕಾರ ಚುನಾವಣೆ ಗೆಲ್ಲಲು ಗ್ಯಾರಂಟಿ ಘೋಷಿಸಿ, ಈಗ ದಲಿತರ ಅಭಿವೃದ್ದಿ ಹಣ 25 ಸಾವಿರ ಕೋಟಿ ರು. ಎಸ್‍ಸಿಪಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ರಾಜ್ಯ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಂಸದ ಡಾ.ಉಮೇಶ ಜಾಧವ ಆರೋಪಿಸಿದರು.

ಅವರು ಶಹಾಬಾದ್ ಮಂಡಲ ಬಿಜೆಪಿ ಪ್ರಮುಖರ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಾದ ಉಸ್ತುವಾರಿ ಸಚಿವ ಪ್ರಿಯಂಕ್ ಖರ್ಗೆ ಕೇವಲ ರಾಜಕೀಯ ಮಾಡುತ್ತ, ಆರೋಪ ಕರ್ತವ್ಯ ಮರೆತ್ತಿದ್ದಾರೆ ಎಂದು ಹೇಳಿ, ಪ್ರಿಯಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದು, ನಿಮ್ಮದೆ ಸರಕಾರ, ನಿಮ್ಮದೆ ಅಧಿಕಾರ ಇದ್ದು, 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಬೇಕಾಗಿತ್ತು ಎಂದು ಪ್ರಶ್ನಿಸಿದರು.

ಬಿಜೆಪಿ ಕಲಬುರಗಿ ನಗರ ಅಧ್ಯಕ್ಷ ಚಂದು ಪಾಟೀಲ, ವಿಧಾನ ಪರಿಷತ್ ಪ್ರತಿಪಕ್ಷದ ಉಪ ನಾಯಕ ಸುನೀಲ ವಲ್ಲ್ಯಾಪುರೆ, ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು.

ಶಶಿಕಲಾ ಟೆಂಗಳಿ, ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷ ಭಾಗೀರತಿ ಗುನ್ನಾಪುರ, ಕನಕಪ್ಪ ದಂಡಗುಲಕರ್, ನಗರ ಸಭೆ ಸದಸ್ಯರಾದ ಜಗದೇವ ಗುತ್ತೇದಾರ, ರವಿ ರಾಠೋಡ, ಪಾರ್ವತಿ ಪವಾರ ಇದ್ದರು.

ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬಿರಾದಾರ ನಿರೂಪಿಸಿದರು, ಸಿದ್ರಾಮ ಕುಸಾಳೆ ವಂದಿಸಿದರು. ಇದೇ ಸಂದರ್ಭದಲ್ಲಿ ಮಂಡಲ ನೂತನ ಅಧ್ಯಕ್ಷ ನಿಂಗಣ್ಣ ಹುಳಗೋಳ ಅವರು ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಅವರಿಂದ ಅಧಿಕಾರ ಹಸ್ತಾಂತರ ಮಾಡಿದರು.

Share this article