ಎಂ.ಕೆ.ಇಂದಿರಾ ಕಾಲ ಪ್ರವಾಹದ ವಿರುದ್ಧ ಈಜಿದ ಲೇಖಕಿ: ದೀಪಾ ಹಿರೇಗುತ್ತಿ

KannadaprabhaNewsNetwork |  
Published : Aug 23, 2024, 01:04 AM IST
ಹರಿಹರಪುರ : ಶ್ರಾವಣ ನುಡಿಸಿರಿ ಕಾರ್ಯಕ್ರಮ | Kannada Prabha

ಸಾರಾಂಶ

ಕೊಪ್ಪ, ಎಂ.ಕೆ.ಇಂದಿರಾ ಅವರು ೪೯ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಹಲವು ಕಾದಂಬರಿಗಳು ಚಲನಚಿತ್ರವಾಗಿ ಯಶಸ್ವಿಯಾಗಿವೆ. ಮಾಧ್ಯಮಿಕ ಶಾಲೆಗೆ ಎರಡು ವರ್ಷ ಹೋಗಿದ್ದ ಅವರನ್ನು ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದೆಂಬ ಸಾಮಾಜಿಕ ಒತ್ತಡಕ್ಕೆ ಮಣಿದು ಅವರ ಪೋಷಕರು ಶಾಲೆ ಬಿಡಿಸಿದ್ದರು. ಸಂಪ್ರದಾಯಸ್ಥ ಕುಟುಂಬದಲ್ಲಿದ್ದರೂ ಸಂಪ್ರದಾಯಗಳ ವಿರುದ್ಧವೇ ಬರೆದು ಕಾಲ ವೆಂಬ ಪ್ರವಾಹದ ಎದುರಾಗಿ ಈಜಿದ ಲೇಖಕಿ ಎಂ.ಕೆ.ಇಂದಿರಾ ಎಂದು ಲೇಖಕಿ ದೀಪಾ ಹಿರೇಗುತ್ತಿ ಹೇಳಿದರು.

- ಹರಿಹರಪುರ : ಶ್ರಾವಣ ನುಡಿಸಿರಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ಎಂ.ಕೆ.ಇಂದಿರಾ ಅವರು ೪೯ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಹಲವು ಕಾದಂಬರಿಗಳು ಚಲನಚಿತ್ರವಾಗಿ ಯಶಸ್ವಿಯಾಗಿವೆ. ಮಾಧ್ಯಮಿಕ ಶಾಲೆಗೆ ಎರಡು ವರ್ಷ ಹೋಗಿದ್ದ ಅವರನ್ನು ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದೆಂಬ ಸಾಮಾಜಿಕ ಒತ್ತಡಕ್ಕೆ ಮಣಿದು ಅವರ ಪೋಷಕರು ಶಾಲೆ ಬಿಡಿಸಿದ್ದರು. ಸಂಪ್ರದಾಯಸ್ಥ ಕುಟುಂಬದಲ್ಲಿದ್ದರೂ ಸಂಪ್ರದಾಯಗಳ ವಿರುದ್ಧವೇ ಬರೆದು ಕಾಲ ವೆಂಬ ಪ್ರವಾಹದ ಎದುರಾಗಿ ಈಜಿದ ಲೇಖಕಿ ಎಂ.ಕೆ.ಇಂದಿರಾ ಎಂದು ಲೇಖಕಿ ದೀಪಾ ಹಿರೇಗುತ್ತಿ ಹೇಳಿದರು.ಹರಿಹರಪುರ ಮಲ್ಲೇಶಯ್ಯನ ಛತ್ರದಲ್ಲಿ ತಾಲೂಕು ಸಿರಿಗನ್ನಡ ವೇದಿಕೆ ಹರಿಹರಪುರ ಹೋಬಳಿ ಕಸಾಪ, ರೋಟರಿ ಸಮುದಾಯದಳ ಹರಿಹರಪುರ, ಹೋಬಳಿ ಕರ್ನಾಟಕ ಜಾನಪದ ಪರಿಷತ್ತು ಸಹಕಾರದೊಂದಿಗೆ ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಶ್ರಾವಣ ನುಡಿಸಿರಿ ಕಾರ್ಯಕ್ರಮದಲ್ಲಿ ಎಂ.ಕೆ.ಇಂದಿರಾ-ಬದುಕು, ಬರಹ ಕುರಿತು ಉಪನ್ಯಾಸ ನೀಡಿದರು ವಿಧವೆಯ ಗೋಳು, ಬಾಲ್ಯವಿವಾಹ, ಜಾತಿಪದ್ಧತಿ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಬರೆದರು. ಚಳುವಳಿ ಮನಸ್ಥಿತಿ ಹೊಂದಿದ್ದರು ಲೇಖಕಿ ಎಂ.ಕೆ.ಇಂದಿರಾ ಎಂದರು. ಚಿಕ್ಕಮಗಳೂರು ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದ ಕೆಲಸ ಮಾಡುವುದ ರಿಂದ ನಮಗೆ ಸಂಸ್ಕಾರ ಬರುತ್ತದೆ. ಶರೀರದ ಕೊಳೆ ತೆಗೆಯಲು ಪ್ರತಿದಿನ ಸ್ನಾನ ಮಾಡುವಂತೆ ಮನಸ್ಸಿನ ಕೊಳೆ ತೆಗೆಯಲು ನಾವು ಎಂ.ಕೆ. ಇಂದಿರಾ ಸಾಹಿತ್ಯ ಓದಬೇಕು. ಹಿಂದೆ ಶಿಕ್ಷಣದ ಕೊರತೆ ಇದ್ದರೂ ಜನರಲ್ಲಿ ಮೌಲ್ಯಗಳಿದ್ದವು. ಇಂದು ಶಿಕ್ಷಣ ಇದೆ, ಆದರೆ ಮೌಲ್ಯ ಇಲ್ಲ ಎಂದು ನುಡಿದರು.ಸಭೆಯಲ್ಲಿ ನಿವೃತ್ತ ಯೋಧ ಶುಕುರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಹಾಲ್ಮುತ್ತೂರು ಭವಾನಿಶಂಕರ ಭಜನಾಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

ಹೋಬಳಿ ಕಸಾಪ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ್, ರೋಟರಿ ಸಮುದಾದಳ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಹೋಬಳಿ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷೆ ತಮನ್ನಾ , ಅಣ್ಣಯ್ಯ,ನಾಗರಾಜ್, ನಿಲುಗುಳಿ ಪದ್ಮನಾಭ್, ಎ.ಒ.ವೆಂಟೇಶ್, ಸುಮ, ಸುಮಿತ್ರಾ ನಾರಾಯಣ್ ಸೇರೇಗಾರ್, ಮಂಜುನಾಥ್ ಮುಂತಾದವರು ಉಪಸ್ಥಿತಿರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.13ರಿಂದ 5 ದಿನ ಯುವ ದಸರಾ: ನಟ ಪ್ರಭುದೇವರಿಂದ ಉದ್ಘಾಟನೆ
ದರ್ಶನ್‌ ಕೇಸ್‌: ಮಾಫಿ ಸಾಕ್ಷಿ ಪ್ರದೂಷ್‌ ಹೇಳಿಕೆ