ಕನ್ನಡಪ್ರಭ ವಾರ್ತೆ ಸಿಂಧನೂರು
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಈಗಾಗಲೇ ದೇವರಾಜ ಅರಸು ತರಕಾರಿ ಮಾರುಕಟ್ಟೆ, ಕನಕದಾಸ ವೃತ್ತದ ಬಳಿಯಿರುವ ಉಪ ಮಾರುಕಟ್ಟೆ, ಅಪ್ನಾಮಂಡಿ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಕಾಯಿಪಲ್ಲೆ, ದಿನ್ನಿಸಿ ಪದಾರ್ಥಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಸುಕೋ ಬ್ಯಾಂಕ್ ಹಿಂಭಾಗ, ಪಿಡಬ್ಲ್ಯೂಡಿ ಕ್ಯಾಂಪಿನ ನೀರಾವರಿ ಇಲಾಖೆ ಜಾಗ, ಪಿಕಾರ್ಡ್ ಬ್ಯಾಂಕ್ ಬಳಿಯಿರುವ ಆಹಾರ ಇಲಾಖೆಯ ಗೋದಾಮು, ಎಪಿಎಂಸಿ ಆವರಣದ ಖಾಲಿ ಜಾಗವನ್ನು ಸಂಬಂಧಿಸಿದ ಮೇಲಾಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದು, ವ್ಯಾಪಾರಸ್ಥರಿಗೆ ನೀಡಲಾಗುವುದೆಂದು ತಿಳಿಸಿದರು.
ಉಪರಸ್ತೆಗಳು ಹಾಗೂ ಪ್ರತಿಯೊಂದು ವಾರ್ಡ್ನಲ್ಲೂ ಜನಸಂದಣಿ ಇರುವ ಕಡೆ ಖಾಲಿ ಜಾಗ ಗುರುತಿಸಿ 10 ರಿಂದ 15 ತಳ್ಳುವ ಬಂಡಿಗಳಿಗೆ ತರಕಾರಿ, ಹಣ್ಣು, ಕಾಯಿಪಲ್ಲೆ, ದಿನ್ನಿಸಿ ಪದಾರ್ಥಗಳ ಮಾರಾಟ ಮಾಡುವುದಕ್ಕೂ ನಗರಸಭೆಯಿಂದ ವ್ಯವಸ್ಥೆ ಮಾಡಲಾಗುವುದು ಎಂದರು.ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ಮುಖಂಡರಾದ ಡಿ.ಎಚ್.ಪೂಜಾರ್, ಚಂದ್ರಶೇಖರ ಗೊರಬಾಳ, ಟಿ.ಹುಸೇನ್ಸಾಬ, ಬಾಷುಮಿಯಾ, ಬಸವಂತ ರಾಯಗೌಡ ಕಲ್ಲೂರು, ನಾಗರಾಜ್ ಪೂಜಾರ್, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರದ, ಶಂಕರ್ ಗುರಿಕಾರ, ಖಾಸಿಂಸಾಬ ಕಾರ್ಪೇಂಟರ್, ಚಿಟ್ಟಿಬಾಬು, ಅಮೀನಸಾಬ್ ನದಾಫ್ ಮತ್ತಿತರರು ಇದ್ದರು.---
ಫೋಟೋ:5ಕೆಪಿಎಸ್ಎನ್ಡಿ1: ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯಿಂದ ಭಾನುವಾರ ನಡೆದ 6ನೇ ದಿನದ ಉಪವಾಸ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಬಂದು ಚರ್ಚಿಸಿ ಮಾತನಾಡಿದರು