ರಾಮನಗರ: ಬಿಡದಿ ಪಟ್ಟಣ ಹಾಗೂ ಎಂ.ಗೋಪಹಳ್ಳಿ ಗ್ರಾಪಂ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೆಆರ್ ಡಿಸಿಎಲ್ ಅಧ್ಯಕ್ಷರೂ ಆದ ಶಾಸಕ ಎಚ್.ಸಿ.ಬಾಲಕೃಷ್ಣ ಗುರುವಾರ ಲೋಕಾರ್ಪಣೆ ಮಾಡಿದರು.
ಆನಂತರ ಎಂ.ಗೋಪಹಳ್ಳಿ ಗ್ರಾಪಂ ವ್ಯಾಪ್ತಿಯ ಉರಗಹಳ್ಳಿ ಗ್ರಾಮದಲ್ಲಿ ಬಾಷ್ ಇಂಡಿಯಾ ಕಂಪೆನಿ ವತಿಯಿಂದ ಸಿಎಸ್ಆರ್ ನಿಧಿಯಡಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಶಾಸಕರು ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಹೂವು ನೀಡಿ ಸ್ವಾಗತಿಸಿದ ಅಂಗನವಾಡಿ ಪುಟಾಣಿಗಳಿಗೆ ಶಾಸಕರು ಸಿಹಿ ವಿತರಿಸಿ ಸಂಸತಪಟ್ಟರು. ಪ್ರಮುಖರಾದ ಪುಟ್ಟೀರಮ್ಮನದೊಡ್ಡಿ ಆರ್.ಸ್ವಾಮಿ, ಗ್ರಾಪಂ ಸದಸ್ಯರಾದ ಶಿವಲಿಂಗಯ್ಯ, ತಿಮ್ಮಯ್ಯ, ಗೋವಿಂದರಾಜು, ಮುಖಂಡರಾದ ರಾಜಣ್ಣ, ಅಜಯ್, ಉರಗಹಳ್ಳಿ ರಾಜು, ಸೇರಿದಂತೆ ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು.
ಹೊಸಕೆರೆಹಳ್ಳಿ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬಾಷ್ ಇಂಡಿಯಾ ಕಂಪೆನಿಯ ಸಿಎಸ್ಆರ್ ನಿಧಿಯಡಿ ನವೀಕರಣಗೊಂಡಿರುವ ಅಂಗನವಾಡಿ ಕಟ್ಟಡವನ್ನು ಬಾಲಕೃಷ್ಣ ಉದ್ಘಾಟಿಸಿದರು. ರಾಮನಹಳ್ಳಿ ಗ್ರಾಮದಲ್ಲಿ ಮನರೇಗಾ ಮತ್ತು ಇಲಾಖಾ ಅನುದಾನದಡಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಹಾಗೂ ಗ್ರಾಪಂ ವರ್ಗ-1ರ ಅಡಿಯಲ್ಲಿ ನಿರ್ಮಿಸಿರುವ 24*7 ತೆರೆದ ಗ್ರಂಥಾಲಯವನ್ನು ಶಾಸಕರು ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.ಇದೇ ವೇಳೆ ರಾಮನಹಳ್ಳಿ ವಿವಿದ್ಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿಪತ್ತಿನ ಸಹಕಾರ ಸಂಘದ ಕಚೇರಿಗೆ ಶಾಸಕರು ಭೇಟಿ ನೀಡಿದಾಗ ಸದಸ್ಯರು ಹಾಗೂ ಮುಖಂಡರು ಹೊಸ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು. ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲು ತಮ್ಮ ಶಾಸಕರ ನಿಧಿಯ ಜತೆಗೆ ಸಹಕಾರ ಸಚಿವರ ಗಮನ ಸೆಳೆದು ಸೂಕ್ತ ಅನುದಾನ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸರೋಜಮ್ಮ, ನಿಕಟಪೂರ್ವ ಅಧ್ಯಕ್ಷ ಆರ್.ಎ.ಗೋಪಾಲ್, ಸದಸ್ಯರಾದ ಸುಜಾತ ತಾಯಪ್ಪ, ಪ್ರಕಾಶ್, ರಾಮಚಂದ್ರಯ್ಯ, ತಿಮ್ಮಯ್ಯ, ರಾಧಾಕುಮಾರ್, ಪಿಡಿಒ ಲೋಕೇಶ್, ಕಾರ್ಯದರ್ಶಿ ಶಶಿಕಿರಣ್, ತಾಪಂ ಮಾಜಿ ಸದಸ್ಯರಾದ ಗೀತಾಪುಟ್ಟರಾಜು, ಮುಖಂಡರಾದ ಸಿದ್ಧರಾಜು, ವೀರಣ್ಣ, ಕುಮಾರ್ ಮತ್ತಿತರರು ಹಾಜರಿದ್ದರು.
--5ಕೆಆರ್ ಎಂಎನ್ 5.ಜೆಪಿಜಿ
ಉರಗಹಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು.---