ಮಂಜುನಾಥ ನಗರದ ನೂತನ ನಾಮಫಲಕ ಉದ್ಘಾಟಿಸಿದ ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Jan 29, 2026, 01:45 AM IST
 ಮಂಜುನಾಥನಗರದ ನೂತನ ನಾಮಫಲಕವನ್ನು ಶಾಸಕ ಸಿ. ಎನ್. ಬಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಶ್ರವಣಬೆಳಗೊಳ ಹೋಬಳಿಯ ಕಸರನಹಳ್ಳಿ ಗ್ರಾಮದ ನೂತನ ಬಡಾವಣೆಗೆ ಮಂಜುನಾಥ ನಗರ ಎಂದು ನಾಮಕರಣ ಮಾಡಿ ನೂತನ ನಾಮಫಲಕವನ್ನು ಈ ದಿನ ಉದ್ಘಾಟಿಸಿ ಮಾತನಾಡಿ ಹೊಸ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸದಾ ಸಿದ್ಧ ಎಂದು ಹೇಳಿದರು. ಈಗಾಗಲೇ ಮೂಲಭೂತ ಸೌಕರ್ಯಗಳನ್ನು ನೀಡಲು ಕ್ರಮವಹಿಸಲಾಗಿದೆ ಎಂದರು. ಮಂಜುನಾಥನಗರ ನಿವಾಸಿಗಳಾದ ಸುಬ್ಬೇಗೌಡ, ಮಂಜೇಗೌಡ, ಬಾಲಚಂದ್ರ, ವಿಷಕಂಠ ಗೌಡ್ರು, ಶಿವರಾಂ , ಮಂಜೇಶ್, ಕಸರನಹಳ್ಳಿ ಹಾಗೂ ಎಂ ಹೊಸೂರು ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಂಜುನಾಥನಗರದ ನೂತನ ನಾಮಫಲಕವನ್ನು ಶಾಸಕ ಸಿ. ಎನ್. ಬಾಲಕೃಷ್ಣ ಉದ್ಘಾಟಿಸಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕಸರನಹಳ್ಳಿ ಗ್ರಾಮದ ನೂತನ ಬಡಾವಣೆಗೆ ಮಂಜುನಾಥ ನಗರ ಎಂದು ನಾಮಕರಣ ಮಾಡಿ ನೂತನ ನಾಮಫಲಕವನ್ನು ಈ ದಿನ ಉದ್ಘಾಟಿಸಿ ಮಾತನಾಡಿ ಹೊಸ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸದಾ ಸಿದ್ಧ ಎಂದು ಹೇಳಿದರು. ಈಗಾಗಲೇ ಮೂಲಭೂತ ಸೌಕರ್ಯಗಳನ್ನು ನೀಡಲು ಕ್ರಮವಹಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಭುವನಹಳ್ಳಿ ಯೋಗೇಶ್, ಆಯರಹಳ್ಳಿ ಪ್ರಭಾಕರ್‌, ಎಂ ಹೊಸೂರು ಶಿವನಂಜೇಗೌಡ, ಪೂಮಡಿಹಳ್ಳಿ ವಿಎಸ್‌ಎಸ್‌ಎನ್ ನಿರ್ದೇಶಕರಾದ ಸ್ನೇಹಜೀವಿ ಮಂಜು, ಜೆಡಿಎಸ್ ಮುಖಂಡರಾದ ಎಂ ಹೊಸೂರು ಮಂಜು, ಮದನೆ ಗ್ರಾಮದ ಮುಖಂಡರಾದ ಸುನಿಲ್, ಸ್ವಾಮಿ, ಆನಂದ್, ಎಂ ಹೊಸೂರು ಜೆಡಿಎಸ್ ಯುವ ಮುಖಂಡರಾದ ಚೇತನ್ ಎಂ ಹೊಸೂರು, ಕಸರನಹಳ್ಳಿ ಗ್ರಾಮದ ಮುಖಂಡರಾದ ದಿವಾಕರ್, ಕಾಂತಣ್ಣ, ಅನಂತ, ಪ್ರತಾಪ, ಮಂಜುನಾಥನಗರ ನಿವಾಸಿಗಳಾದ ಸುಬ್ಬೇಗೌಡ, ಮಂಜೇಗೌಡ, ಬಾಲಚಂದ್ರ, ವಿಷಕಂಠ ಗೌಡ್ರು, ಶಿವರಾಂ , ಮಂಜೇಶ್, ಕಸರನಹಳ್ಳಿ ಹಾಗೂ ಎಂ ಹೊಸೂರು ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಡಾ ಕೇಸಲ್ಲಿ ಸಿಎಂಗೆ ಬಿಗ್‌ ರಿಲೀಫ್‌
ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ