ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
50 ಲಕ್ಷ ರು.ವೆಚ್ಚದಲ್ಲಿ ಹೋಬಳಿಯ ಹುಲಿಕೆರೆ ಗ್ರಾಮದ ಬೋರನಕಟ್ಟೆ ಕೆರೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ನಬಾರ್ಡ್ ವತಿಯಿಂದ ನಡೆಯಲಿರುವ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಬೋರನಕಟ್ಟೆ ಕೆರೆಗೆ ತೋಟಿ ಏತ ನೀರಾವರಿ ಯೋಜನೆಯ ಮೂಲಕ ನೀರುಹರಿಸಲಾಗುತ್ತದೆ. ಈಗಾಗಲೇ ಶೇಕಡ 90ರಷ್ಟು ತೋಟಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು ಯೋಜನೆಯ ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೂ ದೂರು ಸಲ್ಲಿಸಲಾಗಿದ್ದು, ಗುತ್ತಿಗೆದಾರರು 20 ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ನಬಾರ್ಡ್ ವತಿಯಿಂದ ಕೆರೆ ಅಭಿವೃದ್ಧಿಗೆ ನೀಡಿರುವ 50 ಲಕ್ಷ ರು. ಅನುದಾನದಲ್ಲಿ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಳಸಿಕೊಳ್ಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಹುಲಿಕೆರೆ ಗ್ರಾಮದಿಂದ ಬಾಣನಕರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಹೋಗಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.
ಕೃಷಿ ಪತ್ತಿನ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್ ಮಾತನಾಡಿ, ಗ್ರಾಮದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಆಶಾದೇವಿ ಪ್ರಕಾಶ್, ಹೊನ್ನಮ್ಮ ಧರಣಿ ಕುಮಾರ್, ಹಿರಿಯಣ್ಣ ಗೌಡ, ಗುತ್ತಿಗೆದಾರ ಕಲ್ಕೆರೆ ನಾಗಣ್ಣ, ಮುಖಂಡರಾದ ತೋಟಿ ನಾಗರಾಜ್, ಪುಟ್ಟಸ್ವಾಮಿ, ಜಂಬೂರ್ ಮಹೇಶ್, ಚಂದ್ರೇಗೌಡ, ಡೈರಿ ಅಧ್ಯಕ್ಷೆ ರೇಣುಕಾ ರಂಗಸ್ವಾಮಿ, ಕಾರ್ಯದರ್ಶಿ ಭಾಗ್ಯಮ್ಮ ವೆಂಕಟೇಶ್, ವಾರ್ಡನ್ ಮಹೇಶ್, ಪುನೀತ್, ದೇವರಾಜ್, ನಾಗೇಶ್, ಸೋಮೇಗೌಡ, ಪಟೇಲ್ ಶಂಕರೇಗೌಡ, ಅರ್ಚಕ ಲಕ್ಷ್ಮೀನಾರಾಯಣ್, ವರದರಾಜ್, ಹೊನ್ನೇಗೌಡ, ರಂಗೇಗೌಡ, ಯಶೋಧ, ಸುಜಾತ, ಹತ್ತಿಯಲ್ಲಿ ಮಹೇಶ್, ಪ್ರಶಾಂತ್, ನಂಜೇಗೌಡ, ಶಿವಲಿಂಗೇಗೌಡ, ಬೈರೇಗೌಡ, ರಂಜನ್, ಭರತ್, ಗೌತಮ್, ಹರೀಶ್, ಅಶೋಕ್, ಗೋವಿಂದೇಗೌಡ, ಕೃಷ್ಣೇಗೌಡ, ಕೃಷ್ಣಮೂರ್ತಿ, ಸೋಮು, ಲೋಕೇಶ್, ಪುಟ್ಟರಾಜು, ಅಶೋಕ್, ಹಾಜರಿದ್ದರು.