ನೂಲಗೇರಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಬಣಕಾರ

KannadaprabhaNewsNetwork |  
Published : Nov 07, 2026, 02:15 AM IST
ಹಿರೇಕೆರೂರು ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆಯಿಂದ ಭರ್ತಿಯಾದರು ಸಣ್ಣ ಹಾಗೂ ದೊಡ್ಡ ಕೆರೆಗೆ ಗ್ರಾಮಸ್ಥರೊಂದಿಗೆ ಶಾಸಕ ಯು.ಬಿ.ಬಣಕಾರ ಬಾಗಿನ ಸಮರ್ಪಿಸಿದರು. | Kannada Prabha

ಸಾರಾಂಶ

ಹಿರೇಕೆರೂರು ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆಯಿಂದ ಭರ್ತಿಯಾದರು ಸಣ್ಣ ಹಾಗೂ ದೊಡ್ಡ ಕೆರೆಗೆ ಗ್ರಾಮಸ್ಥರೊಂದಿಗೆ ಶಾಸಕ ಯು.ಬಿ.ಬಣಕಾರ ಬಾಗಿನ ಸಮರ್ಪಿಸಿದರು.

ಹಿರೇಕೆರೂರು:ಕೆರೆ ಕಟ್ಟೆಗಳು ಮೈದುಂಬಿ ಹರಿದಾಗ ರೈತರ ಮೊಗದಲ್ಲಿ ಮಂದಹಾಸ ಮೂಡುವ ಜತೆಗೆ ಜನ ಜಾನುವಾರಗಳಿಗೆ ಅನುಕೂಲವಾಗಿ ಅಂತರ್ಜಲ ಮಟ್ಟ ಸುಧಾರಣೆಯಾಗುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆಯಿಂದ ಭರ್ತಿಯಾದ ಸಣ್ಣ ಹಾಗೂ ದೊಡ್ಡ ಕೆರೆಗೆ ಗ್ರಾಮಸ್ಥರೊಂದಿಗೆ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು. ಕೆರೆಗಳು ತುಂಬಿ ಹರಿದಾಗ ಬಾಗಿನ ನೀಡುವುದು ನಮ್ಮ ಸಂಪ್ರದಾಯ ಅದರಂತೆ ಇಂದು ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸಿ ರೈತರಿಗೆ ಒಳಿತಾಗಲಿ ಎಂದು ಆಶಿಸಿ ಭಕ್ತಿಯಿಂದ ಬಾಗಿನ ನೀಡಲಾಗಿದೆ.

ಬರಗಾಲದ ಈ ಸಂದರ್ಭದಲ್ಲಿ ಕೆರೆ ತುಂಬಿಸುವ ಯೋಜನೆಗಳಿಂದ ಕೆರೆಗಳಿಗೆ ನೀರು ಬಂದಾಗ ರೈತರಲ್ಲಿ ನಗುಮುಖ ಕಾಣುತ್ತದೆ. ರೈತಾಪಿ ಜನರಿಗೆ ನಾಗರಿಕರಿಗೆ, ದನಕರುಗಳಿಗೆ ಅನುಕೂಲವಾಗುತ್ತದೆ. ಅಂತರ್ಜಲಮಟ್ಟ ಸುಧಾರಣೆಯಾಗಿ ಕೊಳವೆ ಬಾವಿಯ ನೀರಿನ ಇಳುವರಿ ಅಧಿಕಾರಿಯಾಗುವ ಮೂಲಕ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ರೈತರು ಗ್ರಾಮಸ್ಥರು ಕೆರೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸರ್ಕಾರದ ಕೆರೆ ತುಂಬಿಸುವ ಯೋಜನೆಗಳ ಉದ್ದೇಶ ಈಡೇರಿಸಬೇಕು ಎಂದರು.ಗ್ರಾಮಸ್ಥರಾದ ಎಂ.ಎಂ.ಹುಲ್ಮನಿ, ಗಂಗಾಧರ ಕೋರಿ, ವೀರಭದ್ರಯ್ಯ ಕುಂಚೂರಮಠ, ಈರನಗೌಡ ದಖವಾಯಿ, ಮಹದೇವಪ್ಪ ವೀರಾಪುರ, ಮಲ್ಲಪ್ಪ ಚಲವಾದಿ, ವಿನಯ ದಳವಾಯಿ, ಬಸವರಾಜ ಚಿಕ್ಕೇರಿ, ಬಸವರಾಜ ಆರೀಕಟ್ಟಿ, ಸೋಮಶೇಖರ ಪುರದ, ರಮೇಶ ಹಿಂದಿನಮನಿ, ಪ್ರಶಾಂತ ಅಂಗಡಿ, ಬಸವರಾಜ ಚಲವಾದಿ, ಗಣೇಶ ಚಲವಾದಿ, ರಾಜು ಕೋರಿ, ಸಿದ್ದಲಿಂಗಯ್ಯ ಹಿರೇಮಠ, ಮನೋಹರ ಕಮ್ಮಾರ, ಈರನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ ಮಡಿವಾಳರ, ಪಿ.ಡಿ.ಬಸನಗೌಡ್ರ, ಮುಖಂಡರಾದ ಮಹೇಂದ್ರ ಬಡಳ್ಳಿ, ಮಹೇಶ ಗುಬ್ಬಿ, ಹನುಮಂತಗೌಡ ಭರಮಣ್ಣನವರ, ಶಿವರಾಜ ಹರಿಜನ, ನಿಂಗಪ್ಪ ಚಳಗೇರಿ, ನಾರಯಣಪ್ಪ ಗೌರಕ್ಕನವರ, ಸಿದ್ದನಗೌಡ ನರೇಗೌಡ್ರ, ರವಿ ಚಿಂದಿ, ರವಿ ಸಿದ್ದಪ್ಪಗೌಡ್ರ, ಮಹೇಶ ಹೊಸಮನಿ, ಹನುಮಗೌಡ ಹುಡೇದ, ಕಂಠಾಧರ ಅಂಗಡಿ, ಕೆ.ಡಿ. ದಿವಿಗಿಹಳ್ಳಿ ಸೇರಿದಂತೆ ಗ್ರಾಮಸ್ಥರು ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ