ಹಾಲಿಗೇರಿ ಗ್ರಾಮಸ್ಥರ ಶಿಕ್ಷಣ ಪ್ರೇಮ ರಾಜ್ಯಕ್ಕೆ ಮಾದರಿ

KannadaprabhaNewsNetwork | Published : Dec 11, 2023 1:15 AM

ಸಾರಾಂಶ

ಹಾಲಿಗೇರಿ ಗ್ರಾಮಸ್ಥರ ಶಿಕ್ಷಣ ಪ್ರೇಮ ಮಾದರಿ

ಕನ್ನಡಪ್ರಭವಾರ್ತೆ ಕೆರೂರ ಗುಡಿ ಗುಂಡಾರಗಳ ಅಭಿವೃದ್ಧಿಗೆ ಅನುದಾನ ಕೇಳುವವರೇ ಅಧಿಕ. ಆದರೆ, ಹಾಲಿಗೇರಿ ಗ್ರಾಮಸ್ಥರು ಶಾಲೆಗಳನ್ನೇ ಕೇಳುತ್ತಾರೆ. ಅವರ ಶಿಕ್ಷಣ ಪ್ರೇಮ, ದೇಶಕ್ಕೆ ಸತ್ಪ್ರಜೆ ಕೊಡಬೇಕೆಂಬ ಅವರ ಅಭಿಲಾಷೆ ರಾಜ್ಯಕ್ಕೆ ಮಾದರಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಜಿಪಂ ಬಾಗಲಕೋಟೆ, ತಾಪಂ ಬಾದಾಮಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಾದಾಮಿ, ಇವರು ಹಾಲಿಗೇರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ ವಿವೇಕ ಶಾಲಾ ಯೋಜನಯಡಿ ನಿರ್ಮಾಣಗೊಂಡ 2 ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಮ್ಮ ತಂದೆ ಮಾಜಿ ಸಚಿವ ಬಿ.ಬಿ ಚಿಮ್ಮನಕಟ್ಟಿಯವರ ಅಧಿಕಾರವಧಿಯಲ್ಲಿ ಗ್ರಾಮಸ್ಥರು ಪಟ್ಟುಹಿಡಿದು ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಿಕೊಂಡಿದ್ದರು. ಆ ಪ್ರೌಢಶಾಲೆಯ ನೂತನ ಕೊಠಡಿಗಳನ್ನು ಲೋಕಾರ್ಪಣೆಗೊಳಿಸುವ ಭಾಗ್ಯ ನನ್ನದಾಗಿದೆ. ಈಗ ಮತ್ತೆ ಪ್ರಾಥಮಿಕ ಶಾಲೆಯಿಂದ ಹಿಡಿದು ಪಿಯು ಕಾಲೇಜಿನವರೆಗಿನ ಕೆಪಿಎಸ್ಸಿ ಸ್ಕೂಲ್‌ ಮಂಜೂರಿಗಾಗಿ ಬೆನ್ನುಹತ್ತಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕುಮಾರ ಬಂಗಾರಪ್ಪರನ್ನು ನಾನು ಮನವೊಲಿಸಿ ಆ ಶಾಲೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಎಷ್ಟೆ ಕಷ್ಟ ಬರಲಿ ಶಾಲೆ ಬಿಡುವುದಿಲ್ಲವೆಂದು ಮಕ್ಕಳ ಬಾಯಿಂದ ಹೇಳಿಸಿದರು. ತಿದ್ದಿ ತೀಡಿ ಗೊಂಬೆ ಮಾಡಿ ಸಂಸ್ಕಾರ ಕೊಟ್ಟ ತಂದೆ ತಾಯಿ, ಗುರು-ಹಿರಿಯರನ್ನು, ಶಿಕ್ಷಣ ಕಲಿಸಿ ಉತ್ತಮ ನಾಗರಿಕತೆ ಕೊಟ್ಟ ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಮಕ್ಕಳು ಅಭ್ಯಾಸದ ಕಡೆ ಗಮನವಿಟ್ಟು ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಿಇಒ ಎನ್.ಆರ್‌. ಕುಂದರಗಿ ಮಾತನಾಡಿ ಕ್ರಿಯಾಶೀಲ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು ಕನಸು ಕಂಡವರು. ಶಿಕ್ಷಣ ಮತ್ತು ಆರೋಗ್ಯ ಅಭಿವೃದ್ಧಿಯಿಂದ ದೇಶದ ಸಧೃಡತೆ ಸಾಧ್ಯವೆಂದು ನಂಬಿದವರು. ಮಕ್ಕಳಿಗೆ ಕೆಪಿಎಸ್‌ಸಿ ಶಿಕ್ಷಣ ಸಿಗಬೇಕೆಂಬುದು ಗ್ರಾಮಸ್ಥರ ಆಶಯವಾಗಿದ್ದು, ಅದನ್ನು ಶಾಸಕರು ಮಾಡುತ್ತಾರೆಂಬ ಭರವಸೆ ಇದೆ ಎಂದರು. ಕೆಎಂಎಫ್ ನಿರ್ದೇಶಕ ಈರಣ್ಣ ಕರಿಗೌಡ್ರ ಮತ್ತು ಗ್ರಾಮದ ಪ್ರಮುಖ ವೀರಯ್ಯ ಸೂಳಿಕೇರಿ ಮಾತನಾಡಿ, ಭೀಮಸೇನ ಚಿಮ್ಮನಕಟ್ಟಿಯವರ ಕ್ಷೇತ್ರದ ಅಭಿವೃದ್ಧಿ ಕನಸು ಬಿಚ್ಚಿಟ್ಟು, ಅವರ ಶೈಕ್ಷಣಿಕ ಅಭಿವೃದ್ಧಿಯ ಗುರಿಯನ್ನು ವಿವರಿಸಿ ಕಾಲೇಜು ಮಂಜೂರಿಗೆ ಆಗ್ರಹಿಸಿದರು. ಹಾಲಿಗೇರಿ ಗ್ರಾಪಂ ಅಧ್ಯಕ್ಷ ಚುರಚಪ್ಪ ನಂದ್ಯಾಳ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಭಾರತಿ ಉಂಡಗೇರಿ ಧರಿಯಪ್ಪ ಪಿಡ್ಡೋಡಿ, ಪಿಡಿಒ ಎಂ.ಆರ್‌ ಚಿಕ್ಕೊಪ್ಪ, ದುಂಡಪ್ಪ ಬಿದರಿ, ಸಾವಿತ್ರಿ ದೋಣಿ, ಭಾರತಿ ಹುಗ್ಗಿ, ಸಿದ್ದಪ್ಪ ಕಂಬಳಿ, ಗೀತಾ ಭಜಂತ್ರಿ, ಉಸ್ಮಾನ ಅತ್ತಾರ, ನಾಗೇಶ ಚಂದಾವರಿ, ರಾಮಣ್ಣ ಡೊಳ್ಳಿ, ಫಕೀರಯ್ಯ ಒಡೆಯರ, ಸಿದ್ದಪ್ಪ ದೇವರಮನಿ, ಹನಮಂತಗೌಡ ಭರಮಗೌಡ್ರ ಸೇರಿದಂತೆ ಹಲವು ಗಣ್ಯರು ಇದ್ದರು. ಪ್ರೌಢಶಾಲೆಯ ಮುಖ್ಯ ಗುರುಮಾತೆ ವಿ.ಎಸ್.ಮೇಟಿ ಸ್ವಾಗತಿಸಿದರು. ಶಿಕ್ಷಕ ಬಿ.ಕೆ.ಚಿಮ್ಮಲ ನಿರೂಪಿಸದರು. ಎಂ.ಎಸ್.ಗಚ್ಚಿನ ವಂದಿಸಿದರು.

Share this article