ಹರಿಹರ: ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಹರಿಹರ ತಾಲೂಕನ್ನು ಲಾರ್ವ ಮುಕ್ತ ಮಾಡುವಂತೆ ಶಾಸಕ ಬಿ.ಪಿ.ಹರೀಶ್ ಮನವಿ ಮಾಡಿದರು.
ದಾವಣಗೆರೆ ಜಿಲ್ಲೆಯ ಒಬ್ಬ ವಿದ್ಯಾರ್ಥಿನಿ ಡೆಂಘೀಜ್ವರಕ್ಕೆ ಬಲಿಯಾಗಿದ್ದು, ತ್ವರಿತ ಗತಿಯಲ್ಲಿ ಸಾರ್ವಜನಿಕರಿಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಆ ಮೂಲಕ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.
ಇದೇ ವೇಳೆ ಶಾಸಕರು ಹರ್ಲಾಪುರದ ಕೆಲವು ಮನೆಗಳಿಗೆ ಭೇಟಿ ನೀಡಿ, ಸ್ವಚ್ಛತೆ ಪರಿಶೀಲಿಸಿದರು. ಮಳೆಗಾಲ ಆರಂಭವಾಗಿದ್ದು, ಮನೆ, ಸುತ್ತಮುತ್ತಲ ಜಾಗಗಳಲ್ಲಿ ಆದಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಲಾರ್ವ ಉತ್ಪತ್ತಿಗೆ ಅವಕಾಶ ನೀಡದಂತೆ ಜಾಗೃತಿ ಮೂಡಿಸಿದರು.ನಗರಸಭಾ ಸದಸ್ಯ ಸೈಯದ್ ಅಲೀಂ, ಟಿಎಚ್‌ಒ ಡಾ.ಅಬ್ದುಲ್ ಖಾದರ್, ಇಒ ರಾಮಕೃಷ್ಣಪ್ಪ, ಡಾ.ವಿಶ್ವನಾಥ್ ಕುಂದಗೋಳ ಮಠ, ಡಾ.ಕಲ್ಲೇಶ್, ಡಾ.ಗಿರಿಜಾ, ಎಂ.ಉಮ್ಮಣ್ಣ, ಶಶಿಕಾಂತ್, ಸುಧಾ, ಶಾಂತಮ್ಮ, ಅಶ್ವಿನಿ, ಕವಿತಾ, ವಸಂತ, ಮಂಜುನಾಥ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.