ಚಾಮರಾಜನಗರ: ಕ್ಷೇತ್ರದ ಶಾಸಕರು ಹಾಗೂ ಎಂಎಸ್‌ಐಎಲ್‌ನ ಅಧ್ಯಕ್ಷ ಶಾಸಕ ಸಿ.ಪುಟ್ಟರಂಗಶೆಟ್ಟಿಯ ೭೦ನೇ ವರ್ಷ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ನಗರದ ಜಿಲ್ಲಾ ಅಸ್ಪತ್ರೆಯಲ್ಲಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ವಿತರಣೆ ಮಾಡಲಾಯಿತು.
ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್ ಮಾತನಾಡಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ನಾಲ್ಕು ಬಾರಿ ಕ್ಷೇತ್ರದ ಆಯ್ಕೆಯಾಗಿ ಹೆಚ್ಚಿನ ಅಭಿವೃದ್ದಿ ಮಾಡುವ ಜತೆಗೆ ಜನಾನುರಾಗಿ ನಾಯಕರಾಗಿದ್ದಾರೆ. ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವಶೆಟ್ಟಿ, ಎಸ್‌ಪಿಕೆ ಉಮೇಶ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಚುಡಾ ಸದಸ್ಯರಾದ ರಾಜೇಂದ್ರ, ತಾಪಂ ಮಾಜಿ ಸದಸ್ಯ ಎಸ್.ರಾಜು, ನಗರಸಭಾ ಮಾಜಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ಕರಿನಂಜನಪುರ ಸ್ವಾಮಿ, ಕಾಗಲವಾಡಿ ಮೋಳೆ ಶ್ರೀನಿವಾಸಶೆಟ್ಟಿ, ಕಾಗಲವಾಡಿ ಚಂದ್ರು, ವೈದ್ಯಾಕೀಯ ಅಸ್ಪತ್ರೆಯ ಡಿನ್ ಮಂಜುನಾಥ್, ಜಿಲ್ಲಾ ಸರ್ಜನ್ ಕೆ.ಆರ್.ಮಹೇಶ್, ಸ್ಥಾನಿಕ ವೈದ್ಯಾಧಿಕಾರಿ ಮಹೇಶ್ ಇದ್ದರು.