ಗುಂಡ್ಲುಪೇಟೆಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ, ಡೀಸಿ ಚಾಲನೆ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಪಟ್ಟಣದ ಪುರಸಭೆ ಆಯೋಜಿಸಿದ್ದ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಎಂಬ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಚಾಲನೆ ನೀಡಿದರು. ಪಟ್ಟಣದ ನೆಹರು ಪಾರ್ಕ್‌ ಆವರಣದಲ್ಲಿ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಅಭಿಯಾನದ ಅಂಗವಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಗಿಡ ನೆಡುವ ಮೂಲಕ ಗುಂಡ್ಲುಪೇಟೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಪಟ್ಟಣದ ಸ್ವಚ್ಛತೆಯಾಗಿದ್ದರೆ ಪರಿಸರ ಹಾಗೂ ಜನರ ಆರೋಗ್ಯವೂ ಚೆನ್ನಾಗಿ ಇರಲಿದೆ. ಅಶುಚಿತ್ವಕ್ಕೆ ದಾರಿ ಮಾಡಿಕೊಟ್ಟರೆ ರೋಗ, ರುಜಿನಗಳು ಬರಲಿವೆ. ಪಟ್ಟಣದ ಸ್ವಚ್ಛತೆಗೆ ನಾಗರೀಕರು ಪ್ರಥಮ ಆದ್ಯತೆ ನೀಡಬೇಕು ಎಂದರು.

ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಸ್ವಚ್ಛತಾ ಕಾರ್ಯಕ್ರಮ । ಶಾಸಕ ಗಣೇಶ್‌ ಪ್ರಸಾದ್‌, ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಚಾಲನೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಪಟ್ಟಣದ ಪುರಸಭೆ ಆಯೋಜಿಸಿದ್ದ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಎಂಬ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಚಾಲನೆ ನೀಡಿದರು. ಪಟ್ಟಣದ ನೆಹರು ಪಾರ್ಕ್‌ ಆವರಣದಲ್ಲಿ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಅಭಿಯಾನದ ಅಂಗವಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಗಿಡ ನೆಡುವ ಮೂಲಕ ಗುಂಡ್ಲುಪೇಟೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಪಟ್ಟಣದ ಸ್ವಚ್ಛತೆಯಾಗಿದ್ದರೆ ಪರಿಸರ ಹಾಗೂ ಜನರ ಆರೋಗ್ಯವೂ ಚೆನ್ನಾಗಿ ಇರಲಿದೆ. ಅಶುಚಿತ್ವಕ್ಕೆ ದಾರಿ ಮಾಡಿಕೊಟ್ಟರೆ ರೋಗ, ರುಜಿನಗಳು ಬರಲಿವೆ. ಪಟ್ಟಣದ ಸ್ವಚ್ಛತೆಗೆ ನಾಗರೀಕರು ಪ್ರಥಮ ಆದ್ಯತೆ ನೀಡಬೇಕು ಎಂದರು.

ಜಿಲ್ಲಾಧಿಕಾರಿಗೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆಸಕ್ತಿಯಿದೆ, ಗುಂಡ್ಲುಪೇಟೆ ಪಟ್ಟಣ ಸ್ವಚ್ಛತೆಯಲ್ಲಿ ಮೊದಲಿರಬೇಕು ಎಂಬ ಜಿಲ್ಲಾಧಿಕಾರಿಗಳ ಆಸಕ್ತಿಗೆ ಪಟ್ಟಣದ ಜನರು ಸಹಕರಿಸಿ ಎಂದರು. ಪಟ್ಟಣದ ನಾಗರೀಕರು ವಿಶೇಷ ಆಸಕ್ತಿ ವಹಿಸಿದರೆ ಗುಂಡ್ಲುಪೇಟೆ ಪಟ್ಟಣ ಸ್ವಚ್ಛವಾಗಲಿದೆ. ಜನರು ಸ್ವಯಂ ಪ್ರೇರಿತರಾಗಿ ಸ್ವಚ್ಛತೆಗೆ ಒತ್ತು ಕೊಟ್ಟರೆ ಪಟ್ಟಣದ ಸುಂದರವಾಗಿ ಇರಲಿದೆ ಎಂದರು.ಪರಿಸರ ಹಾಗು ಸ್ವಚ್ಛತೆ ಚೆನ್ನಾಗಿದ್ದರೆ ಪಟ್ಟಣದ ಅಭಿವೃದ್ಧಿಗೂ ಆಸಕ್ತಿ ಬರಲಿದೆ. ಪಟ್ಟಣದ ಮನೆಗಳ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಗಿಡ ಗಂಟಿಗಳಿದ್ದರೆ ಸ್ವಚ್ಛತೆ ಮಾಡುವ ಆಸಕ್ತಿ ಬರಬೇಕಿದೆ ಎಂದರು. ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಮಾತನಾಡಿ, ಈಗಾಗಲೇ ನೆರೆಯ ಮೈಸೂರು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಸ್ವಚ್ಛ ನಗರಿ ಎಂದು ಹೆಸರು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡು ಬಂದಿದೆ ಎಂದರು.ಗುಂಡ್ಲುಪೇಟೆಯಲ್ಲಿ 23 ವಾರ್ಡ್‌ಗಳಿವೆ. ಪಟ್ಟಣದ ಸ್ವಚ್ಛತೆ ಪುರಸಭೆ ಮತ್ತು ಪೌರಕಾರ್ಮಿಕರಿಗೆ ಸೀಮಿತವಲ್ಲ ಪಟ್ಟಣದ ಎಲ್ಲಾ ನಾಗರಿಕರು ಪಟ್ಟಣದಲ್ಲಿ ಕಸ ಬಿಸಾಕುವುದನ್ನು ಬಿಡಬೇಕು ಎಂದರು.ಸ್ವಚ್ಛತಾ ಅಭಿಯಾನ ಒಂದು ದಿನಕ್ಕೆ ಸೀಮಿತವಲ್ಲ ನಿರಂತರವಾಗಿ ಆರು ತಿಂಗಳ ಕಾಲ ಪಟ್ಟಣದ ಸ್ವಚ್ಛತೆಗೆ ನಾಗರಿಕರು ಸಹಕರಿಸಿದರೆ ಸ್ವಚ್ಛ ಪಟ್ಟಣ ಪ್ರಶಸ್ತಿ ಸಿಗುವ ಸಾಧ್ಯತೆ ಹೆಚ್ಚಿದೆ ಹಾಗಾಗಿ ಜನರು ಸಹಕರಿಸಬೇಕು ಎಂದರು ಮನವಿ ಮಾಡಿದರು.ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತ ಕುಮಾರಿ ಮಾತನಾಡಿ, ಮುಂದಿನ ಆರು ತಿಂಗಳ ಕಾಲ ಈ ಸ್ವಚ್ಛ ಅಭಿಯಾನ ನಡೆಯಲಿದ್ದು ಪಟ್ಟಣದ ಪ್ರತಿಯೊಬ್ಬ ನಾಗರೀಕರು, ಸ್ವಯಂ ಸೇವಕರು, ಸಂಘ ಸಂಸ್ಥೆಗಳು ಅಭಿಯಾನ ಯಶಸ್ವಿಯಾಗಲು ಸಹಕರಿಸಿ ಎಂದರು.ಅಭಿಯಾನದಲ್ಲಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಗುಂಡ್ಲುಪೇಟೆ ಸ್ವಚ್ಛ ಅಭಿಯಾನದ ರಾಯಬಾರಿ ಸರಿಗಮಪ ಖ್ಯಾತಿಯ ಯೋಗಶ್ರೀ, ಕ್ಲೀನ್ ಮೈಸೂರು ನಿರ್ದೇಶಕಿ ಲೀಲಾ ವೆಂಕಟೇಶ್, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಶ್ರೀನಿವಾಸ್(ಕಣ್ಣಪ್ಪ), ಮಧು, ನಿರ್ಮಲ, ಪುರಸಭೆ ಮಾಜಿ ಅಧ್ಯಕ್ಷ ಭಾಗ್ಯಮ್ಮ, ಕಾಂಗ್ರೆಸ್‌ ಮುಖಂಡರಾದ ಎಚ್.ಎನ್.ಬಸವರಾಜು, ಎಸ್‌ಆರ್‌ಎಸ್‌ ರಾಜು, ಪೊಲೀಸ್‌ ಪ್ರಕಾಶ್‌, ಜಿಕೆಎನ್‌ ವಿಶ್ವ, ಬಡಪ್ಪನ ಸುರೇಶ್‌, ಸುರೇಶ್‌ ಕಾರ್ಗಳ್ಳಿ, ಶಿವಕುಮಾರ್‌, ಉದ್ಯಮಿಗಳಾದ ಆರ್.ಮಧುಕುಮಾರ್‌, ಬೈಜು, ಕಂದಾಯ ನಿರೀಕ್ಷಕ ಮನೋಹರ್‌, ಗ್ರಾಮ ಲೆಕ್ಕಿಗ ಜವರೇಗೌಡ, ಚಾಮುಂಡಿ ಬೆಟ್ಟ ಉಳಿಸಿ ಸಮಿತಿ, ಪರಿಸರ ಬಳಗದ ಸದಸ್ಯರು, ನಮ್ಮ ಗುಂಡ್ಲುಪೇಟೆ ತಂಡ ಸ್ವಯಂ ಸೇವಕರು ಸೇರಿದಂತೆ ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕ ಇದ್ದರು.

ಆಡಳಿತ ಪಕ್ಷದ 4 ಮಂದಿ, ವಿಪಕ್ಷದ ಎಲ್ಲಾ ಪುರಸಭೆ ಸದಸ್ಯರು ಗೈರು: ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲೊಂದಾದ ಸ್ವಚ್ಛ ಭಾರತ ನಿರ್ಮಾಣದ ಅಭಿಯಾನದಡಿ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಅಭಿಯಾನ ಕಾರ್ಯಕ್ರಮಕ್ಕೆ ಬಹುತೇಕ ಪುರಸಭೆ ಸದಸ್ಯರು ಗೈರಾಗಿದ್ದರು. ಸ್ವಚ್ಛ ಅಭಿಯಾನದಲ್ಲಿ ನಾಲ್ಕು ಪುರಸಭೆ ಸದಸ್ಯರ ಹೊರತು ಪಡಿಸಿ ಬಹುತೇಕ ಸದಸ್ಯರು ಬೆರಳೆಣಿಕೆಯಷ್ಟು ಹಾಜರಾಗಿದ್ದರು. ಆಡಳಿತ ಕೆಲವರು ಗೈರು ಮತ್ತು ವಿಪಕ್ಷದ ಬಹುತೇಕ ಎಲ್ಲಾ ಪುರಸಭೆ ಸದಸ್ಯರು ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸ್ವಚ್ಛತಾ ಅಭಿಯಾನಕ್ಕೂ ಪುರಸಭೆ ಸದಸ್ಯರು ಬಹುತೇಕರು ಗೈರಾಗಿದ್ದು ದುರಂತ.

ಕೆಆರ್‌ಸಿ ರಸ್ತೆಯಲ್ಲಿ ಬಿತ್ತಿಪತ್ರ ಅಂಟಿಸಿದ ಶಾಸಕ, ಜಿಲ್ಲಾಧಿಕಾರಿಗುಂಡ್ಲುಪೇಟೆ: ಸ್ವಚ್ಛ ಅಭಿಯಾನ ಚಾಲನೆ ಬಳಿಕ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಎಡ, ಬಲ ಅಂಗಡಿಗಳಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಜಿಲ್ಲಾಧಿಕಾರಿ ಶಿಲ್ಪನಾಗ್‌ ಭೇಟಿ ನೀಡಿ ಸ್ವಚ್ಛತೆ ಆದ್ಯತೆ ನೀಡಬೇಕು ಹಾಗೂ ಪ್ಲಾಸ್ಟಿಕ್‌ ರಹಿತ ವ್ಯಾಪಾರ ನಡೆಸಿ ಎಂದು ಕೋರಿದರು. ಪಟ್ಟಣದ ಪ್ರಮುಖ ಬೀದಿಗಳ ಅಂಗಡಿಗಳಿಗೆ ಭೇಟಿ ನೀಡುವ ಸಮಯದಲ್ಲಿ ಏಕ ಬಳಕ್ಕೆ ಪ್ಲಾಸ್ಟಿಕ್ ನಿಷೇಧ ಅರಿವು ಮೂಡಿಸುವ ಸಲುವಾಗಿ ಕರಪತ್ರವನ್ನು ಹಂಚುವ ಜೊತೆಗೆ ಗೋಡೆಗಳಿಗೂ ಬಿತ್ತಿಪತ್ರ ಅಂಟಿಸಿದರು.

Share this article