ಜಗಳೂರು ಸರ್ಕಾರಿ ಆಸ್ಪತ್ರೆ ಜಾಗಕ್ಕೆ ಶಾಸಕ ದೇವೇಂದ್ರಪ್ಪ ಭೇಟಿ

KannadaprabhaNewsNetwork |  
Published : Dec 14, 2025, 02:45 AM IST
13 ಜೆ.ಜಿ.ಎಲ್.1) ಜಗಳೂರು  ಪಟ್ಟಣದ ಮರೇನಹಳ್ಳಿ ರಸ್ತೆ ಎನ್ಜಿಒ ಬಡಾವಣೆ ಸಮೀಪ ಸಾರ್ವಜನಿಕ ಆಸ್ಪತ್ರೆ  ನಿರ್ಮಿಸಲು ಕಾಯ್ದಿರಿಸಿದ  ೫ ಎಕರೆ ಜಾಗವನ್ನು ಶನಿವಾರ  ಶಾಸಕ ಬಿ.ದೇವೇಂದ್ರಪ್ಪ ಪರಿಶೀಲನೆ ನಡೆಸಿದರು. ಕೆಪಿಸಿಸಿ ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್, ಎಇಇ ಶ್ರೀನಿವಾಸ್, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಪ.ಪಂ ಮಾಜಿ ಅಧ್ಯಕ್ಷ ಮಂಜುನಾಥ್,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ ಇದ್ದರು. | Kannada Prabha

ಸಾರಾಂಶ

ಪಟ್ಟಣದ ಮರೇನಹಳ್ಳಿ ರಸ್ತೆ ಎನ್ಜಿಒ ಬಡಾವಣೆ ಸಮೀಪ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು ಕಾಯ್ದಿರಿಸಿದ ೫ ಎಕರೆ ಸ್ಥಳಕ್ಕೆ ಶನಿವಾರ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ಮರೇನಹಳ್ಳಿ ರಸ್ತೆ ಎನ್ಜಿಒ ಬಡಾವಣೆ ಸಮೀಪ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು ಕಾಯ್ದಿರಿಸಿದ ೫ ಎಕರೆ ಸ್ಥಳಕ್ಕೆ ಶನಿವಾರ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಮತ್ತು ಎಂಜಿನಿಯರ್ ಜತೆ ಜಾಗವನ್ನು ಒಮ್ಮೆ ವೀಕ್ಷಣೆ ಮಾಡಿದ ಶಾಸಕರು, ಎಲ್ಲಾ ಇಂತಹ ಸುಂದರವಾದ ಜಾಗ ಸಿಕ್ಕಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಉತ್ತಮ ಆಸ್ಪತ್ರೆ ನಿರ್ಮಿಸಬೇಕು ಎಂದರು.

ಖಾಸಗಿ ಆಸ್ಪತ್ರೆಗಳ ಗುಣಮಟ್ಟ ಮತ್ತು ಶುಚಿತ್ವ ಸರ್ಕಾರಿ ಆಸ್ಪತ್ರೆಗಳಲ್ಲೂ ಇರುವಂತೆ ನೋಡಿಕೊಳ್ಳಲು ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಜಗಳೂರಿನಲ್ಲೂ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ೫೦ ಕೋಟಿ ರು. ಅನುದಾನ ಘೋಷಣೆ ಮಾಡಿದ್ದರು. ಅದರಂತೆ ೫ ಎಕರೆ ಜಾಗವನ್ನು ಗುರುತಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮುರ‍್ನಾಲ್ಕು ಬಾರಿ ಸ್ಥಳ ಪರಿಶೀಲನೆ ಮಾಡಿ ನೀಲನಕ್ಷೆಯನ್ನು ಸಿದ್ದಪಡಿಸಿದ್ದಾರೆ. ಆದಷ್ಟು ಬೇಗ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಆರಂಭಿಸಲಾಗುವುದು ಎಂದರು.

ಕೆಪಿಸಿಸಿ ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್, ಎಇಇ ಶ್ರೀನಿವಾಸ್, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಪ.ಪಂ ಮಾಜಿ ಅಧ್ಯಕ್ಷ ಮಂಜುನಾಥ್,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಮುಖಂಡರಾದ ಅಜ್ಜಪ್ಪ, ಶೇಖರಪ್ಪ, ನಾಗರಾಜ್, ಮಹಮದ್ ಗೌಸ್, ಆಪ್ತ ಸಹಾಯಕ ಮಧು ಗುಬ್ಬಿ, ನಾಗರಾಜ್, ಮುಸ್ಟೂರಪ್ಪ, ಚಿಕ್ಕಮ್ಮನಹಟ್ಟಿ ಕಾಟಪ್ಪ, ಬಸವರಾಜ್, ಶಾಸಕರ ಅಂಗರಕ್ಷಕ ಸೋಮಣ್ಣ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ