ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಎಚ್.ಟಿ.ಮಂಜು ಗುದ್ದಲಿ ಪೂಜೆ

KannadaprabhaNewsNetwork |  
Published : Nov 23, 2025, 01:45 AM IST
22ಕೆಎಂಎನ್ ಡಿ14 | Kannada Prabha

ಸಾರಾಂಶ

ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ಕೈಗೊಳ್ಳಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಈ ರಸ್ತೆ ನ್ಯಾಯಾಧೀಶರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಡಿಪ್ಲೊಮೋ ವಿದ್ಯಾರ್ಥಿಗಳು ಒಡಾಡುವ ಜಾಗವಾಗಿದೆ. ಗುತ್ತಿಗೆದಾರರು ಆದಷ್ಟು ಕಾಮಗಾರಿ ಬೇಗ ಮುಗಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಪ್ರವಾಸಿಮಂದಿರ ವೃತ್ತದಿಂದ ಹೊರವಲಯದ ಸುಮಾರು 1.4 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಎಚ್.ಟಿ.ಮಂಜು ಗುದ್ದಲಿ ಪೂಜೆ ನೆರವೇರಿಸಿದರು.

ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಗೆ ಪ್ರವಾಸಿ ಮಂದಿರ ವೃತ್ತದಿಂದ ಸುಮಾರು 4 ಕೋಟಿ ರು. ಅಂದಾಜು ವೆಚ್ಚದಲ್ಲಿ ಮುಖ್ಯ ರಸ್ತೆ ಎರಡೂ ಬದಿಯಲ್ಲಿ ಪಾರ್ಕಿಂಗ್, ವಾಕಿಂಗ್ ಪಾಥ್, ರಸ್ತೆ ಮಧ್ಯದಲ್ಲಿ ಡಿವೈಡರ್ ನಿರ್ಮಾಣಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ಕೈಗೊಳ್ಳಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಈ ರಸ್ತೆ ನ್ಯಾಯಾಧೀಶರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಡಿಪ್ಲೊಮೋ ವಿದ್ಯಾರ್ಥಿಗಳು ಒಡಾಡುವ ಜಾಗವಾಗಿದೆ. ಗುತ್ತಿಗೆದಾರರು ಆದಷ್ಟು ಕಾಮಗಾರಿ ಬೇಗ ಮುಗಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಸೂಕ್ತ ಅನುದಾನ ನೀಡದ ಕಾರಣದಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಯಾವುದೇ ವಾರ್ಡ್‌ಗಳಲ್ಲಿ ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಕೆಶಿಪ್ ಎಂಜಿನಿಯರ್ ಶಿವರಾಜು, ಗುತ್ತಿಗೆದಾರ ಅಂಬರೀಶ್, ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಪಿ.ಕೆ.ಜಿ ಮಹೇಶ್, ನಾಗರಾಜು, ವಿಶ್ವನಾಥ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಇದ್ದರು.

ಇಂದು ನಟಧರ್ಮ ನಾಟಕ ಪ್ರದರ್ಶನ

ನಾಗಮಂಗಲ: ಪಟ್ಟಣದ ಕನ್ನಡ ಸಂಘ ವಿಶ್ವಸ್ಥ ಸಮಿತಿಯಿಂದ ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ ಆಯೋಜಿಸಿರುವ 17ನೇ ನಾಗರಂಗ ನಾಟಕೋತ್ಸವದ ಮೊದಲ ದಿನ ನ.23ರ ರಾತ್ರಿ 8 ಗಂಟೆಗೆ ಬೆಂಗಳೂರಿನ ಐಕ್ಯ ತಂಡ ಪ್ರಸ್ತುತ ಪಡಿಸುವ ಗಣೇಶ್ ಮಂದಾರ್ತಿ ನಿರ್ದೇಶನದ ‘ನಟಧರ್ಮ’ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕದ ಸಾರಾಂಶ: ಇದೊಬ್ಬ ನಟನ ಕಥೆ. ತನ್ನ ಪಾತ್ರ ನಿರ್ವಹಣೆಯನ್ನು ಅತ್ಯಂತ ಪಕ್ವವಾಗಿ ನಿರ್ವಹಿಸಲು ತಿಡಗಿಸಿಕೊಳ್ಳು ಪ್ರಯತ್ನದಲ್ಲಿ ತನ್ನನ್ನು ತಾನೇ ಆಧ್ಯಾತ್ಮದ ಜ್ಞಾನಕ್ಕೆ ಏರಿಸಿಕೊಳ್ಳುತ್ತಿದ್ದವ. ಅವನು ವಹಿಸುವ ಅನೇಕ ಪಾತ್ರಗಳ ವೈಶಿಷ್ಟ್ಯ ಮತ್ತು ಅದರ ಹಿನ್ನಲೆಯ ಕಾಯಕ ನಿಷ್ಠೆ ಹಾಗೂ ಅಭಿವ್ಯಕ್ತಿಗಳ ಹೋರಾಟಗಳ ಪಾಕವೇ ‘ನಟಧರ್ಮ’ ನಾಟಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!
ಬೇಡ್ತಿಗಾಗಿ ಪಶ್ಚಿಮ ಘಟ್ಟ- ಬಯಲುಸೀಮೆ ಜಲ ಸಂಘರ್ಷ!