ರಾಮನಗರ: ಕನ್ನಡ ನೆಲ, ಜಲ, ಭಾಷೆಗಾಗಿ ಹೋರಾಡುವ ಯಾವ ಹೋರಾಟಗಾರರು ಕನ್ನಡದ ಶಾಲನ್ನು ಮಾರಾಟ ಮಾಡಿಕೊಂಡಿಲ್ಲ. ನೀವಾದರು ಮುಗ್ಧ ಜನರಿಗೆ ಕೂಪನ್ ಆಸೆ ತೋರಿಸಿದ ಶಾಸಕರಾದ ಟೋಕನ್ ಗಿರಾಕಿ ಎಂದು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಟೀಕಿಸಿದರು.
ಜನಪ್ರತಿನಿಧಿ ಎಂಬುದನ್ನು ಮರೆತು ಶಾಸಕರು ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಇಂದಿರಾನಗರ ಹೋಟೆಲ್ ನಲ್ಲಿ ಶಾಸಕರ ಮತ್ತು ಮಹಿಳೆಯೊಂದಿಗೆ ಏನಾಯಿತು. ಶಾಸಕರು ಮೂರು ದಿನ ಆಸ್ಪತ್ರೆಗೆ ದಾಖಲಾಗಿದ್ದೇಕೆ ಎಂಬುದರ ದಾಖಲೆಗಳು ನನ್ನ ಬಳಿಯಿದೆ. ಮಾನ ಮರ್ಯಾದೆಗೆ ಅಂಜಿ ಆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಆದರೆ, ಹೊಂಗಾಣಿದೊಡ್ಡಿ ರೈತರಿಗೆ ಆಗುತ್ತಿರುವ ಅನ್ಯಾಯ ಸಹಿಸದ ಆ ಮಹಿಳೆ ಮಾಧ್ಯಮಗಳ ಎದುರು ಶಾಸಕರ ನಡವಳಿಕೆ ಬಹಿರಂಗಪಡಿಸಲು ಸಿದ್ಧವಾಗಿದ್ದಾರೆ.
ಆ ರೀತಿಯ ಕೃತ್ಯಗಳಲ್ಲಿ ಸಿಲುಕುವ ಶಾಸಕರು ಅದರಿಂದ ಪಾರಾಗಲು ರೋಲ್ ಕಾಲ್ ಕೊಡುತ್ತಾರೆಯೇ ಹೊರತು ಹೋರಾಟಗಾರರಿಗೆ ಅಲ್ಲ. ಇಂತಹ ಶಾಸಕರು, ಹೋರಾಟಗಾರರ ನೈತಿಕತೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕೂಡಲೆ ಹೋರಾಟಗಾರರಲ್ಲಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.ಹೊಂಗಾಣಿದೊಡ್ಡಿ ಭೂ ಮಾಲೀಕರು ಮತ್ತು ರೈತರು ತಮ್ಮ ನಡುವಿನ ಸಮಸ್ಯೆ ಬಗೆ ಹರಿಸಿಕೊಳ್ಳುತ್ತಿದ್ದರು. ಆದರೆ, ನೀವು ಮಧ್ಯ ಪ್ರವೇಶಿಸಿ ಕಳ್ಳ ಮಾರ್ಗದಲ್ಲಿ ರೈತರ 67 ಎಕರೆ ಭೂಮಿಯನ್ನು ಕಬಳಿಸಿದ್ದೀರಿ. ಭೂ ಮಾಲೀಕರು ಶೀಘ್ರದಲ್ಲಿಯೇ ಸತ್ಯಾಂಶ ಬಹಿರಂಗ ಪಡಿಸಲಿದ್ದಾರೆ ಎಂದರು.
ರೈತಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ ಮಾತನಾಡಿ, ಶಾಸಕರ ಭೂ ಕಬಳಿಕೆ ಮಾಡಿಲ್ಲ ಎನ್ನುವುದಾದರೆ ಅವರ ಹೆಸರಿಗೆ ಭೂಮಿ ನೋಂದಣಿ ಹೇಗಾಯಿತು. ರೈತರಿಗೆ ವಾಪಸ್ ಬರೆದು ಕೊಡಲು ಅವರ ಪಿತ್ರಾರ್ಜಿತ ಆಸ್ತಿಯಲ್ಲ. ನೈತಿಕತೆ ಇದ್ದರೆ ರೈತರಿಗೆ ಭೂಮಿ ವಾಪಸ್ ಕೊಡಲಿ ಎಂದು ಒತ್ತಾಯಿಸಿದರು.
28ಕೆಆರ್ ಎಂಎನ್ 3.ಜೆಪಿಜಿ