ಕೆಲ ಸಚಿವರ ಬದಲಾವಣೆಗೆ ಎಐಸಿಸಿಗೆ ಪತ್ರ: ಶಾಸಕ ಇಕ್ಬಾಲ್ ಹುಸೇನ್‌

KannadaprabhaNewsNetwork |  
Published : Feb 24, 2026, 02:15 AM IST
23ಕೆಆರ್ ಎಂಎನ್ 4.ಜೆಪಿಜಿಶಾಸಕ ಇಕ್ಬಾಲ್ ಹುಸೇನ್  | Kannada Prabha

ಸಾರಾಂಶ

ರಾಮನಗರ: ಬಹುತೇಕ ಸಚಿವರು ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವುದಿರಲಿ, ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ. ಹಾಗಾಗಿ ಒಂದಷ್ಟು ಸಚಿವರನ್ನು ಬದಲಾವಣೆ ಮಾಡುವಂತೆ ಎಐಸಿಸಿಗೆ ಬರೆದಿರುವ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು

ರಾಮನಗರ: ಬಹುತೇಕ ಸಚಿವರು ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವುದಿರಲಿ, ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ. ಹಾಗಾಗಿ ಒಂದಷ್ಟು ಸಚಿವರನ್ನು ಬದಲಾವಣೆ ಮಾಡುವಂತೆ ಎಐಸಿಸಿಗೆ ಬರೆದಿರುವ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಚಿವರನ್ನೂ ಬದಲಾವಣೆ ಮಾಡಿ ಅಂತಲ್ಲ, ಒಂದಷ್ಟು ಸಚಿವರ ಬದಲಾವಣೆ ಆಗಬೇಕು. ಹಾಗಾಗಿ ಹೈಕಮಾಂಡ್‌ಗೆ ಬರೆದ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ. ನನಗೆ ಸಚಿವ ಸ್ಥಾನ ಬೇಕು ಅಂತ ನಾನು ಸಹಿ ಹಾಕಿಲ್ಲ. ಬದಲಾವಣೆ ಮಾಡಿ ಅಂತ ಸಹಿ ಹಾಕಿದ್ದೇನೆ ಎಂದರು.

ನನಗೆ ಶಾಸಕ ಸ್ಥಾನವೇ ಸಾಕು, ಜನಸೇವೆ ಮಾಡಿಕೊಂಡಿದ್ದೇನೆ. ಬೇರೆ ಅನುಭವಿ ಶಾಸಕರಿಗೂ ಅಕವಾಶ ನೀಡಬೇಕು. ಹಾಗಾಗಿ ಹೈಕಮಾಂಡ್‌ಗೆ ಪತ್ರ ಬರೆದು ನಮ್ಮ ಬೇಡಿಕೆ ತಿಳಿಸಿದ್ದೇವೆ. ವರಿಷ್ಠರು ನಮ್ಮ ಮನವಿಗೆ ಸ್ಪಂದಿಸುವ ಭರವಸೆ ಇದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

23ಕೆಆರ್ ಎಂಎನ್ 4.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವರಾಯನದುರ್ಗದಲ್ಲಿ ರೋಪ್ ವೇ ನಿರ್ಮಾಣ
ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಶಕ್ತಿ: ಎಚ್.ಎಂ.ರೇವಣ್ಣ