ಸ್ಮಾರ್ಟ್ ಕ್ಲಾಸ್‍ಗೆ ಶಾಸಕ ಜೆ.ಟಿ.ಪಾಟೀಲ ಚಾಲನೆ

KannadaprabhaNewsNetwork |  
Published : Nov 28, 2024, 12:31 AM IST
ಕಲಾದಗಿ | Kannada Prabha

ಸಾರಾಂಶ

ಬಸಪ್ಪ ಎಂ.ತೋಟದ ಅವರು ತಮ್ಮ ಸ್ವಂತದ ಒಂದು ಲಕ್ಷಕ್ಕೂ ಹೆಚ್ಚು ಹಣ ನೀಡಿ ಸ್ಮಾರ್ಟ್ ಕ್ಲಾಸ್‍ ವ್ಯವಸ್ಥೆ ಮಾಡಿಸಿಕೊಟ್ಟಿರುವುದು ಅನುಕರಣೀಯ

ಕನ್ನಡಪ್ರಭ ವಾರ್ತೆ ಕಲಾದಗಿ

ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಾಮೀಣ ಮಕ್ಕಳಿಗೂ ತಂತ್ರಜ್ಞಾನದ ಮೂಲಕ ಅತ್ಯುತ್ತಮ ಶಿಕ್ಷಣ ಸಿಗುವ ಅವಶ್ಯಕತೆ ಇದೆ. ಇದನ್ನು ನೀಗಿಸಲು ಗೋವಿಂದಕೊಪ್ಪದ ಸರ್ಕಾರಿ ಶಾಲೆಗೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಬಸಪ್ಪ ಎಂ.ತೋಟದ ಅವರು ತಮ್ಮ ಸ್ವಂತದ ಒಂದು ಲಕ್ಷಕ್ಕೂ ಹೆಚ್ಚು ಹಣ ನೀಡಿ ಸ್ಮಾರ್ಟ್ ಕ್ಲಾಸ್‍ ವ್ಯವಸ್ಥೆ ಮಾಡಿಸಿಕೊಟ್ಟಿರುವುದು ಅನುಕರಣೀಯ, ಆದರ್ಶವಾದದ್ದು ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಗೋವಿಂದಕೊಪ್ಪದಲ್ಲಿ ವಿವೇಕ ಶಾಲಾ ಯೋಜನೆಯಡಿ ₹13 ಲಕ್ಷರೂ ಅನುದಾನದಲ್ಲಿ ನಿರ್ಮಿಸಿದ್ದ ನೂತನ ಕೊಠಡಿ ಹಾಗೂ ಶಾಲೆಯ ಎಸ್‍ಡಿಎಂಸಿ ಅಧ್ಯ್ಯಕ್ಷ ಬಸಪ್ಪ ಎಂ.ತೋಟದ ಮಾಡಿಕೊಟ್ಟಿರುವ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ಗೋವಿಂದಕೊಪ್ಪ ಜನರ ಹಾಗೂ ಶಾಲೆಯ ಶಿಕ್ಷಕರ ಶೈಕ್ಷಣಿಕ ಕಾಳಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳೊಂದಿಗೆ ಮಾತು:

ಈ ಸಂದರ್ಭದಲ್ಲಿ ತರಗತಿಯೊಂದಕ್ಕೆ ತೆರಳಿದ ಶಾಸಕರು ಅಲ್ಲಿದ್ದ ಮಕ್ಕಳೊಂದಿಗೆ ಮಾತನಾಡಿ, ಶಾಲೆಯ ಶಿಕ್ಷಣದ ಬಗ್ಗೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಹಲವು ಸಾಮಾನ್ಯ ಪ್ರಶೆಗಳನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರ ಪಡೆದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸೂಚನೆ ನೀಡಿದರು.

ಮನವಿಗೆ ಸ್ಪಂದನೆ:

ಉನ್ನತ ವ್ಯಾಸಂಗಕ್ಕಾಗಿ ಕಲಾದಗಿ, ಬಾಗಲಕೋಟೆಗೆ ಹೋಗಿಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇರದಿರುವುದು ಬಹಳ ತೊಂದರೆಯಾಗಿದೆ. ಊರಿಂದ ಕಲಾದಗಿವರೆಗೆ, ಮುಖ್ಯ ರಸ್ತೆವರೆಗೆ ನಡೆದುಕೊಂಡೇ ಹೋಗಿ ಬರಬೇಕಾಗಿದೆ. ಬಸ್ ವ್ಯವಸ್ಥೆ ಮಾಡಿಕೊಡಬೇಕೆಂಬ ಊರಿನವರ, ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು ಕೂಡಲೇ ಸಾರಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಗ್ರಾಪಂ ಸದಸ್ಯ ತಿಪ್ಪಣ್ಣ.ಬಿ.ಬೀಡಕಿ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಬಸಪ್ಪ ಎಂ.ತೋಟದ, ಉಪಾಧ್ಯಕ್ಷ ಶ್ರೀಶೈಲ ಶಿವನಿಚ್ಚಿ, ಸದಸ್ಯ ನಿಂಗಪ್ಪ ಬೂದಿಹಾಳ, ಪಿಕೆಪಿಎಸ್ ಸದಸ್ಯ ರಮೇಶ ಶಿವನಿಚ್ಚಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ, ಮುಖಂಡರಾದ ಲಕ್ಕಪ್ಪ ಶಿವನಿಚ್ಚಿ, ಸಂಗಣ್ಣಾ ಮುಧೋಳ, ಶಿವರಾಯಪ್ಪ ಶಿವನಿಚ್ಚಿ, ಯಲ್ಲಪ್ಪ ನಂದ್ಯಾಳ, ಮುತ್ತಪ್ಪ.ಹ.ನಂದ್ಯಾಳ, ನಿಂಗಪ್ಪ ಬೂದಿಹಾಳ, ಸಿ.ಅರ್.ಪಿ ಕೆ.ಎಂ.ಗುಡದಿನ್ನಿ, ಶಾಲಾ ಮುಖ್ಯಗುರು ಎಸ್.ಎಸ್.ಬೆಲ್ಲದಡಿ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ