ರಂಗನಾಥಸ್ವಾಮಿ ಮಡಿತೇರು ಎಳೆದ ಶಾಸಕ ಜನಾರ್ದನ ರೆಡ್ಡಿ

KannadaprabhaNewsNetwork |  
Published : Apr 10, 2026, 02:00 AM IST
9ುಲು2 | Kannada Prabha

ಸಾರಾಂಶ

ಸಂಜೆ ಮಹಾರಥೋತ್ಸವ ಜರುಗುವದಕ್ಕಿಂತ ಪೂರ್ವದಲ್ಲಿ ಮಡಿ ತೇರು ಎಳೆಯಲಾಯಿತು.

ಗಂಗಾವತಿ: ತಾಲೂಕಿನ ರಂಗನಾಥಸ್ವಾಮಿ ಮಡಿತೇರು ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾಗವಹಿಸಿ ತೇರು ಎಳೆದು ಭಕ್ತಿ ಸಮರ್ಪಿಸಿದರು.

ಬೆಳಗ್ಗೆ ಜಾತ್ರೆ ನಿಮಿತ್ತ ರಂಗನಾಥಸ್ವಾಮಿಗೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಂಜೆ ಮಹಾರಥೋತ್ಸವ ಜರುಗುವದಕ್ಕಿಂತ ಪೂರ್ವದಲ್ಲಿ ಮಡಿ ತೇರು ಎಳೆಯಲಾಯಿತು. ಶಾಸಕ ಗಾಲಿ ಜನಾರ್ದನ ರೆಡ್ಡಿ ತೇರಿಗೆ ಪೂಜೆ ಸಲ್ಲಿಸಿ ತೇರು ಎಳೆದರು. ಈ ವೇಳೆ ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜಿ. ಬಾಬು, ಮನೋಹರಗೌಡ ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಡಪದ ಅಪ್ಪಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ
ಸಮತೋಲಿತ ಆಹಾರದಿಂದ ಉತ್ತಮ ಆರೋಗ್ಯ