ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕರಿಂದ ಚಾಲನೆ

KannadaprabhaNewsNetwork |  
Published : Feb 22, 2025, 12:48 AM IST
ಬಿಳಿಗಿರಿರಂಗನಬೆಟ್ಟ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕರಿಂದ ಚಾಲನೆ | Kannada Prabha

ಸಾರಾಂಶ

ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ, ಸಿಎಸ್‌ಆರ್ ಫಂಡ್‌ನಿಂದ ಕಂಪೆನಿಗಳಿಗೆ ಬರುವ ಆದಾಯದ ಶೇ. ೨ ರಷ್ಟನ್ನು ಇಂತಹ ಸಮಾಜಮುಖಿ ಕಾರ್ಯಗಳಿಗೆ ದಾನವಾಗಿ ನೀಡಬೇಕೆಂಬ ನಿಯಮ ಜಾರಿಗೆ ಬಂದಿತು. ಅಲ್ಲಿಂದ ಕಂಪೆನಿಗಳು ಇಂತಹ ಅನೇಕ ಜನಪರ ಕೆಲಸಗಳನ್ನು ಮಾಡುತ್ತ ಬಂದಿದೆ. ದೇಶದಲ್ಲಿ ೨೦೨೩-೨೪ ನೇ ಸಾಲಿನಲ್ಲಿ ೨೯ ಸಾವಿರ ಕೋಟಿ ರೂ ಹಣ ಇದಕ್ಕೆ ಬಳಕೆಯಾಗಿರುವ ಮಾಹಿತಿ ಇದೆ. ಬೆಟ್ಟದಲ್ಲಿ ವೋಲ್ವೋ ಕಂಪೆನಿಯವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಇದೇ ಯೋಜನೆಯಡಿಯಲ್ಲಿ ನಿರ್ಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ವೋಲ್ವೋ ಕಂಪನಿಯ ವತಿಯಿಂದ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.

ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ, ಸಿಎಸ್‌ಆರ್ ಫಂಡ್‌ನಿಂದ ಕಂಪೆನಿಗಳಿಗೆ ಬರುವ ಆದಾಯದ ಶೇ. ೨ ರಷ್ಟನ್ನು ಇಂತಹ ಸಮಾಜಮುಖಿ ಕಾರ್ಯಗಳಿಗೆ ದಾನವಾಗಿ ನೀಡಬೇಕೆಂಬ ನಿಯಮ ಜಾರಿಗೆ ಬಂದಿತು. ಅಲ್ಲಿಂದ ಕಂಪೆನಿಗಳು ಇಂತಹ ಅನೇಕ ಜನಪರ ಕೆಲಸಗಳನ್ನು ಮಾಡುತ್ತ ಬಂದಿದೆ. ದೇಶದಲ್ಲಿ ೨೦೨೩-೨೪ ನೇ ಸಾಲಿನಲ್ಲಿ ೨೯ ಸಾವಿರ ಕೋಟಿ ರೂ ಹಣ ಇದಕ್ಕೆ ಬಳಕೆಯಾಗಿರುವ ಮಾಹಿತಿ ಇದೆ. ಬೆಟ್ಟದಲ್ಲಿ ವೋಲ್ವೋ ಕಂಪೆನಿಯವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಇದೇ ಯೋಜನೆಯಡಿಯಲ್ಲಿ ನಿರ್ಮಿಸಿದ್ದಾರೆ. ಬೆಟ್ಟದ ಮೆಟ್ಟಿಲು ನಿರ್ಮಾಣ ಸೇರಿದಂತೆ ಇತರೆ ಕಾರ್ಯಗಳಿಗೆ ೪ ಕೋಟಿ ರೂ. ವಾಪಸ್ಸಾಗಿತ್ತು. ಮತ್ತೆ ಈ ಹಣವನ್ನು ವಾಪಸ್ಸು ತಂದು ಇದರ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಸುಸಜ್ಜಿತ ದಾಸೋಹ ಭವನ, ಕಮರಿಯ ಅಭಿವೃದ್ಧಿ, ಪಾತ್ ವೇ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಈಗಾಗಲೇ ಬೆಟ್ಟದಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ, ಬಸ್ ನಿಲ್ದಾಣ ನಿರ್ಮಿಸಲು ಬಿಳಿಗಿರಿಭವನದ ಬಳಿ ಇರುವ ಜಮೀನನ್ನು ಸಾರಿಗೆ ನಿಗಮಕ್ಕೆ ನೀಡಲಾಗಿದ್ದು, ಆದಷ್ಟು ಬೇಗ ಈ ಕಾಮಗಾರಿಯೂ ಆರಂಭಗೊಳ್ಳಲಿದೆ. ಇದರೊಂದಿಗೆ ಯಳಂದೂರು ಪಟ್ಟಣ ಹಾಗೂ ಸಂತೆಮರಹಳ್ಳಿಯಲ್ಲೂ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೂ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಜೊತೆಗೆ ಗಿರಿಜನರಿಗೆ ನೀಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿಕೊಂಡಿದ್ದು, ಇದನ್ನು ವಾಪಸ್ಸು ಕೊಡಿಸಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.

ವೋಲ್ವೋ ಕಂಪೆನಿಯ ಸಿಎಸ್‌ಆರ್ ವಿಭಾಗದ ನಿರ್ದೇಶಕ ಜಿ.ವಿ. ರಾವ್ ಮಾತನಾಡಿ, ಬಿಳಿಗಿರಿರಂಗನಬೆಟ್ಟದಲ್ಲಿ ನಾವು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇವೆ. ಈಗಾಗಲೇ ನಾವು ೩೩ ಘಟಕಗಳನ್ನು ಮಾಡಿದ್ದೇವೆ. ನಮ್ಮ ಕಂಪೆನಿಯ ವತಿಯಿಂದ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಘಟಕ ನಿರ್ಮಾಣ ಮಾಡಲಾಗುವುದು. ಅಲ್ಲದೆ ಬಿಳಿಗಿರಿ ರಂಗನಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸಲು ನಮ್ಮ ಸಂಸ್ಥೆ ತೀರ್ಮಾನಿಸಿದ್ದು ಆದಷ್ಟು ಬೇಗ ಇದನ್ನು ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಪ್ರಜ್ವಲ್ ಟ್ರಸ್ಟ್‌ನ ಅನಂತ್ ಮಾತನಾಡಿದರು. ದೇಗುಲದ ಇಒ ಮೋಹನ್‌ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೇತಮ್ಮ, ಗುಂಬಳ್ಳಿ ರಾಜಣ್ಣ, ಸಿದ್ದರಾಜು, ವೆಂಕಟರಾಮು, ವಿ. ನಾರಾಯಣಸ್ವಾಮಿ, ಸುರೇಶ್, ಎಸ್. ರವಿಕುಮಾರ್, ಪಿಎಸ್‌ಐ ಹನುಮಂತ ಉಪ್ಪಾರ್, ವೆಂಕಟೇಶ್ ನಿವೃತ್ತ ಶಿಕ್ಷಕ ಲಿಂಗರಾಜು, ರೂಪೇಶ್, ಸತೀಶ್ ಸೇರಿದಂತೆ ಅನೇಕರು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌