ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಶಾಸಕ ನರೇಂದ್ರಸ್ವಾಮಿ ಗುದ್ದಲಿ ಪೂಜೆ

KannadaprabhaNewsNetwork |  
Published : Aug 27, 2025, 01:00 AM IST
26ಕೆಎಂಎನ್ ಡಿ26 | Kannada Prabha

ಸಾರಾಂಶ

ನಾನು ಈಗಾಗಲೇ ನೀರಾವರಿ ವಿಚಾರದಲ್ಲಿ ಈ ವರ್ಷದಲ್ಲಿ 250 ಕೋಟಿ ರು. ವೆಚ್ಚದಲ್ಲಿ ನಾಲಾ ಆಧುನೀಕರಣ ಮಾಡಿಸಿದ್ದೇನೆ. ಇನ್ನೂ ಸುಮಾರು 300 ಕೋಟಿ ರು. ವೆಚ್ಚದಲ್ಲಿ ಈ ಭಾಗದ ಸಣ್ಣ ಸೇತುವೆಗಳು, ಕಾಲವೇಗಳನ್ನು ದುರಸ್ತಿ ಮಾಡಿಸಬೇಕಿದೆ. ನೀರಾವರಿ ಇಲಾಖೆಯಿಂದ ಸುಮಾರು 600 ಕೋಟಿಗೂ ಮಿಗಿಲಾದ ಯೋಜನೆಗಳನ್ನು ಮಳವಳ್ಳಿ ತಾಲೂಕಿಗೆ ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಬಾಳೆಹೊನ್ನಿಗ ಗ್ರಾಮದಲ್ಲಿ ಸುಮಾರು 20 ಲಕ್ಷ ರು. ವೆಚ್ಚದ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನೂತನವಾಗಿ 24 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಗರಡಿ ಮನೆ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಮಳವಳ್ಳಿ ತಾಲೂಕಿನ ಪ್ರತಿಯೊಂದು ಗ್ರಾಮಗಳ ಮತ್ತು ಜನರಲ್ ಬೀದಿಗಳಲ್ಲಿ ರಸ್ತೆ, ಚರಂಡಿ ಮತ್ತು ಕೆಲವು ಪಿಡಬ್ಲ್ಯೂಡಿ ರಸ್ತೆಗಳ ಕಾಮಗಾರಿಗಳಿಗೆ ಇನ್ನು ಒಂದು ತಿಂಗಳೊಳಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 25 ಕೋಟಿ ರು. ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸುತ್ತೇನೆ ಎಂದರು.

ನಾನು ಈಗಾಗಲೇ ನೀರಾವರಿ ವಿಚಾರದಲ್ಲಿ ಈ ವರ್ಷದಲ್ಲಿ 250 ಕೋಟಿ ರು. ವೆಚ್ಚದಲ್ಲಿ ನಾಲಾ ಆಧುನೀಕರಣ ಮಾಡಿಸಿದ್ದೇನೆ. ಇನ್ನೂ ಸುಮಾರು 300 ಕೋಟಿ ರು. ವೆಚ್ಚದಲ್ಲಿ ಈ ಭಾಗದ ಸಣ್ಣ ಸೇತುವೆಗಳು, ಕಾಲವೇಗಳನ್ನು ದುರಸ್ತಿ ಮಾಡಿಸಬೇಕಿದೆ. ನೀರಾವರಿ ಇಲಾಖೆಯಿಂದ ಸುಮಾರು 600 ಕೋಟಿಗೂ ಮಿಗಿಲಾದ ಯೋಜನೆಗಳನ್ನು ಮಳವಳ್ಳಿ ತಾಲೂಕಿಗೆ ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮನ್ಮಲ್ ನಿರ್ದೇಶಕರಾದ ಕೃಷ್ಣೆಗೌಡ, ವಿಶ್ವಾಸ್, ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್, ಕೆಂಪಯ್ಯನ ದೊಡ್ಡಿ ಮೋಹನ್ ಕುಮಾರ್, ಕುಂತೂರು ಗೋಪಾಲ್, ದಳವಾಯಿ ಕೊಡಹಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಸಂಪತ್ ಕುಮಾರ್, ಉಪಾಧ್ಯಕ್ಷೆ ಮಾಲಾಶ್ರೀ ರವಿ, ಮುಖಂಡರಾದ ಪ್ರಕಾಶ್, ಬಾಗೋ ಜಿ ಕುಮಾರ್, ರಾಜು, ರವಿ ಸೇರಿದಂತೆ ಇತರರು ಇದ್ದರು.

ಶ್ರೀವೀರಭದ್ರೇಶ್ವರಸ್ವಾಮಿ 3ನೇ ವರ್ಷದ ಜಯಂತ್ಯುತ್ಸವ

ಮಂಡ್ಯ: ತಾಲೂಕಿನ ಉರಮಾರಕಸಲಗೆರೆ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ 3ನೇ ವರ್ಷದ ಜಯಂತ್ಯುತ್ಸವ ಸಂಭ್ರಮದಿಂದ ನಡೆಯಿತು.

ಜಯಂತ್ಯುತ್ಸವದ ಅಂಗವಾಗಿ ಸ್ವಾಮಿಗೆ ಬೆಳಗ್ಗೆ ಶ್ರೀಮಹಾಗಣಪತಿ ಹೋಮ, ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ, ಮಧ್ಯಾಹ್ನ ಗಂಗಾ ಪೂಜೆ, ಹೂ ಹೊಂಬಾಳೆ, ಪಲ್ಲಕ್ಕಿ ಉತ್ಸವ, ಬಸವ ಮತ್ತು ದೇವರ ಮೆರವಣಿಗೆ ಜರುಗಿತು.

ಸಂಜೆ 6 ಗಂಟೆಗೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಶ್ರೀವೀರಭದ್ರೇಶ್ವರ ಸೇವಾ ಟ್ರಸ್ಟ್, ಗ್ರಾಮಸ್ಥರ ನೇತೃತ್ವದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ದೇವರ ಭಕ್ತರು, ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?