ಕನ್ನಡಪ್ರಭ ವಾರ್ತೆ ಕಮಲನಗರ
ಖೇರ್ಡಾದಿಂದ ಭಂಡಾರಕುಮಟಾವರೆಗೆ 380 ಲಕ್ಷ ಮೊತ್ತದ ರಸ್ತೆ ಕಾಮಗಾರಿ, ಕಮಲನಗರದಿಂದ ಚೊಂಡಿಮುಖೇಡ್‌ವರೆಗೆ 70 ಲಕ್ಷದ ರಸ್ತೆ ಹಾಗೂ ಹೊಳಸಮುದ್ರದಿಂದ ಹುಲಸೂರ್‌ವರೆಗೆ 70 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗೇಮಾ ತಾಂಡಾದಲ್ಲಿ 30 ಲಕ್ಷ, ಅಂಬ್ರು ತಾಂಡಾದಲ್ಲಿ 20 ಲಕ್ಷ, ಚೊಂಡಿಮುಖೇಡ್‌ನಲ್ಲಿ 163 ಲಕ್ಷ, ಪೂಮಾ ತಾಂಡಾದಲ್ಲಿ 38 ಲಕ್ಷ ಹಗೂ ವಾಗನಗೇರಾ ಗ್ರಾಮದಲ್ಲಿ 98 ಲಕ್ಷ, ಬೆಳಕೋಣಿಯಲ್ಲಿ 240 ಲಕ್ಷ ಹಾಗೂ ಪಾಂಡುತಾಂಡಾದಲ್ಲಿ 15 ಲಕ್ಷ ಮೊತ್ತದ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಜನತೆಗೆ ಅನುಕೂಲವಾಗಲಿ ಎಂಬ ಕಾರಣದಿಂದ ಸರ್ಕಾರಗಳ ಮೇಲೆ ಒತ್ತಡ ಹೇರಿ ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಾರಣದಿಂದಾಗಿ ಕೆಲವೆಡೆ ಕೆಲಸಗಳು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಎಂಜಿನಿಯರ್‌ಗಳು ಕಚೇರಿಗಳಿಗೆ ಸೀಮಿತರಾಗದೆ ಕಾಮಗಾರಿ ಸ್ಥಳಗಳಿಗೆ ಓಡಾಡಬೇಕು.
ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಬೇಕು. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಎಲ್ಲ ಉಪಕರಣಗಳನ್ನು ಬಳಕೆ ಮಾಡಬೇಕು. ಡಾಂಬರೀಕರಣ ಅಚುಕಟ್ಟಾಗಿ ಆಗಬೇಕು. ಸಿಸಿ ಕೆಲಸಗಳಿಗೆ ಸಮರ್ಪಕವಾಗಿ ಕ್ಯೂರಿಂಗ್ ಮಾಡಬೇಕು. ಎಲ್ಲಿಯಾದರೂ ಕಾಮಗಾರಿ ಕಳಪೆಯಾಗಿರುವುದು ಕಂಡುಬಂದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಮುಂದಾಗಬೇಕಾಗುತ್ತದೆ ಎಂದು ಖಡಕ್ಕಾಗಿ ಸೂಚಿಸಿದರು.
ಬಳತ್(ಕೆ) ನೀರಿನ ಘಟಕಕ್ಕೆ ಚಾಲನೆ:
ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವಾನಂದ ವಡ್ಡೆ, ಶಿವಕುಮಾರ ಝುಲ್ಫೆ, ಸತೀಷ ಪಾಟೀಲ, ಯೋಗೇಶ ಪಾಟೀಲ, ರಾಜು ಶಳ್ಕೆ, ಸಂಜು ಮುರ್ಕೆ, ಉದಯ ಸೋಲಾಪೂರೆ, ಸಚಿನ್ ಬಿರಾದಾರ, ಮಾರುತಿ ವಾಡೇಕರ್, ರಾಹುಲ್ ಪಾಟೀಲ್, ರಾವಸಾಬ್ ಪಾಟೀಲ, ಭರತ್ ಕದಮ್, ನಾಗೇಶ ಪತ್ರೆ, ವಿಷ್ಣು ರುದ್ನುರೆ, ಶ್ರೀನಿವಾಸ ಖೂಬಾ, ಪ್ರದೀಪ ಪವಾರ್, ಹಣಮಂತ ಪಾಟೀಲ, ಪ್ರತಿಕ್ಷಾ ಪಾಟೀಲ, ಬಾಬುರಾವ ವಾಗ್ಮಾರೆ ಹಾಗೂ ಇತರರು ಉಪಸ್ಥಿತರಿದ್ದರು.