ಕನ್ನಡಪ್ರಭ ವಾರ್ತೆ ಔರಾದ್
ಕಪ್ಪಿಕೇರಿ ಗ್ರಾಮದ ಅರವಿಂದ ಮಲ್ಲಿಕಾರ್ಜುನ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬಸ್ಥರು ಮೃತರನ್ನು ನೆನೆಸಿಕೊಂಡು ತೀವ್ರ ಭಾವುಕರಾದರು. ಶಾಸಕರು ಮೃತರ ಪತ್ನಿ ಹಾಗೂ ಕುಟುಂಬಸ್ಥರನ್ನು ಸಮಾಧಾನಪಡಿಸಿ, ಧೈರ್ಯದಿಂದ ಇರುವಂತೆ ತಿಳಿಸಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿ, ಈಗ ಮಗು ವಿನ ಭವಿಷ್ಯದ ಕುರಿತು ಯೋಚಿಸ ಬೇಕು. ಮಗುವಿನ ಶಿಕ್ಷಣ, ಮದುವೆ ಸೇರಿದಂತೆ ಯಾವುದೇ ಸಮಸ್ಯೆ ಎದುರಾದರೂ ನಾನು ನಿಮ್ಮ ಕುಟುಂಬದೊಂದಿಗೆ ಇರುತ್ತೇನೆ. ಸರ್ಕಾರದಿಂದಲೂ ಅಗತ್ಯ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ಧೈರ್ಯದಿಂದ ಇರಿ ಎಂದು ಹೇಳಿದರು.
ಇದೇ ವೇಳೆ ಜೊನ್ನಿಕೇರಿ ಗ್ರಾಮದ ಶಿವರಾಯ ಮಾದಪ್ಪ ಕುಣಿಕೇರೆ, ಶಂಬೆಳ್ಳಿ ಗ್ರಾಮದ ಶಿವರಾಜ ಎಕಲಾರೆ, ಧೂಪತಮಹಾಗಾಂವ ಗ್ರಾಮದ ಶಿವಾನಂದ ಸ್ವಾಮಿ ಹಾಗೂ ಬಾಬಳಿ ಗ್ರಾಮದ ಶರಣು ಬಾಬಶೆಟ್ಟಿ ಮಾಲೀಪಾಟೀಲ ಅವರ ಮನೆಗಳಿಗೆ ಭೇಟಿ ನೀಡಿದ ಪ್ರಭು ಬಿ.ಚವ್ಹಾಣ ಅವರು ಕುಟುಂಬಸ್ಥರೊಂದಿಗೆ ಮಾತನಾಡಿ, ತಾವು ಕುಟುಂಬದೊಂದಿಗೆ ಇರುವುದಾಗಿ ಭರವಸೆ ನೀಡಿದರು. ಇನ್ನು, ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶೆಂಬೆಳ್ಳಿ ಗ್ರಾಮದ ಸಂತೋಷ ಹಾವಗಿರಾವ್ ಅವರನ್ನು ಭೇಟಿ ಮಾಡಿದ ಶಾಸಕರು, ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಕುಟುಂಬಸ್ಥರೊಂದಿಗೆ ಮಾತನಾಡಿ ಚಿಕಿತ್ಸೆ ಹಾಗೂ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ರಾಜಕುಮಾರ ಸೋರಾಳೆ, ನಾಗಶೆಟ್ಟಿ ಗಾದಗೆ, ಸಚಿನ ರಾಠೋಡ, ಪ್ರಕಾಶ ಜೀರ್ಗೆ, ಮಂಜು ಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.