ಕನ್ನಡಪ್ರಭ ವಾರ್ತೆ ಮಂಡ್ಯ
ಭೂ ನ್ಯಾಯ ಮಂಡಳಿ ಸದಸ್ಯ ಅರುಣ್ ಪಣಕನಹಳ್ಳಿ ಮಾತನಾಡಿ, ಶಾಸಕ ರವಿಕುಮಾರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ವಿವಿಧ ಸೇವಾ ಕಾರ್ಯಗಳ ಮೂಲಕ ಸರಳವಾಗಿ ಆಚರಿಸುತ್ತಿದ್ದೇವೆ. ಶಾಸಕರಿಗೆ ಆಯುಸ್ಸು-ಆರೋಗ್ಯ-ರಾಜಕೀಯ ಭವಿಷ್ಯ ವೃದ್ಧಿಗಾಗಿ ದೇಗುಲದಲ್ಲಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಇದೇ ವೇಳೆ ವಿಕಾಸನ ಜೋಗುಳ ದತ್ತು ಕೇಂದ್ರದ ಮಕ್ಕಳಿಗೆ ಬೆಳಗಿನ ಉಪಾಹಾರ, ಹಣ್ಣು ಮತ್ತು ಸಿಹಿ ವಿತರಣೆ ಮತ್ತ ರಾತ್ರಿ ವೇಳೆಯ ಹೋಳಿಗೆ ಊಟ ಆಯೋಜಿಸಿದ್ದೇವೆ. ಮಧ್ಯಾಹ್ನ ಕೆಂಪೇಗೌಡ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಸಸಿಗಳನ್ನು ನೆಟ್ಟು ನೀರೆರೆದವು ಎಂದರು.ನಗರಸಭಾ ಸದಸ್ಯರಿಂದ ಪೂಜೆ-ಹಣ್ಣುಹಂಪಲು ವಿತರಣೆ:
ಈ ವೇಳೆ ನಗರಸಭಾ ಸದಸ್ಯರಾದ ಮಂಜು, ಶ್ರೀಧರ್, ಪೂರ್ಣಿಮಾ, ಮಂಗಳಾ, ಪವಿತ್ರಾ, ಸೌಭಾಗ್ಯ, ಗೀತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ, ಉಪಾಧ್ಯಕ್ಷೆ ನೀಲಾಮೂರ್ತಿ, ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಜಯುಕುಮಾರ್, ಚಂದಗಾಲು ವಿಜಯ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್, ಉಮ್ಮಡಹಳ್ಳಿ ಉಮೇಶ್, ಆಟೋ ಕೃಷ್ಣ, ಚಿಕ್ಕಮಂಡ್ಯ ಮೋಹನ್, ವೀಣಾ, ವಿಜಯಲಕ್ಷ್ಮಿ ಮತ್ತಿತರರಿದ್ದರು.