)
-ಮಾಜಿ ಸಚಿವ ಎಚ್. ಹಾಲಪ್ಪ ಆಕ್ರೋಶ । ಕೆಡಿಪಿ ಸಭೆಯಲ್ಲಿ ತಹಸೀಲ್ದಾರ್‌ಗೆ ಅವಮಾನ ಆರೋಪ----
ಕೆಡಿಪಿ ಸಭೆಯಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವ ತಹಸೀಲ್ದಾರ್ ಡಾ. ಪ್ರತಿಭಾ ಅವರನ್ನು ಶಾಸಕರು ಅವಮಾನಿಸಿದ್ದು ಖಂಡನೀಯ. ತಹಸೀಲ್ದಾರ್‌ಗೆ ಬುದ್ಧಿ ಹೇಳಲು ಬೇರೆ ವೇದಿಕೆ ಇತ್ತು. ಸಾರ್ವಜನಿಕವಾಗಿ ಕೆಡಿಪಿ ಸಭೆಯಲ್ಲಿ ಮಹಿಳಾ ಅಧಿಕಾರಿಯನ್ನು ಅವಮಾನಿಸಿದ್ದನ್ನು ಖಂಡಿಸುತ್ತೇನೆಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲುಕ್ವಾರೆ ಸೇರಿ ಬೇರೆ ಬೇರೆ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸವನ್ನು ತಹಸೀಲ್ದಾರ್ ಮಾಡುತ್ತಿದ್ದಾರೆ.ಬಹುಶಃ ತಮ್ಮ ವ್ಯವಹಾರಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎನ್ನುವ ಉದ್ದೇಶದಿಂದ ಶಾಸಕರು ತಹಸೀಲ್ದಾರ್‌ಗೆ ಸಭೆಯಲ್ಲಿ ಅವಮಾನಿಸಿರಬೇಕು ಎಂದು ಟೀಕಿಸಿದರು.
ಪೌರಾಯುಕ್ತರು, ಕಾರ್ಯನಿರ್ವಾಹಣಾಧಿಕಾರಿಗಳು, ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ಹುದ್ದೆಗಳು ಖಾಲಿ ಇದೆ. ೧೨ ಸಬ್ ಇನ್ಸ್ಪೆಕ್ಟರ್‌ಗಳ ಪೈಕಿ ಕೇವಲ ೪ ಜನ ಮಾತ್ರ ಇದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಾಲೂಕಿನಲ್ಲಿ ಕೊಲೆ, ಸುಲಿಗೆ ಪ್ರಕರಣ ಜಾಸ್ತಿಯಾಗಿದ್ದು ಕಾನೂನು ವ್ಯವಸ್ಥೆ ಹಳಿ ತಪ್ಪಿದೆ ಎಂದು ದೂರಿದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಮಾಪನಾ ಕೇಂದ್ರ ಸರಿ ಇದೆಯಾ ಎಂದು ಕೇಳುತ್ತಿರುವುದೇ ವಿಚಿತ್ರ. ಮೂರು ಬಾರಿ ಶಾಸಕನಾಗಿದ್ದೇನೆ ಎಂದು ಹೇಳಿಕೊಳ್ಳುವವರಿಗೆ ಕನಿಷ್ಠ ಇಂತಹದ್ದರ ಬಗ್ಗೆ ಜ್ಞಾನ ಇರಬೇಕು. ಉಪವಿಭಾಗೀಯ ಆಸ್ಪತ್ರೆಗೆ ₹೭೦ ಕೋಟಿ ಬಂದಿದೆ ಎನ್ನುತ್ತಾರೆ. ಹಾಗಾದರೆ, ಹಣ ಎಲ್ಲಿದೆ ಎಂದು ಜನರಿಗೆ ಲೆಕ್ಕಕೊಡಿ. ಮಾತೆತ್ತಿದರೆ ಸುಳ್ಳು ಹೇಳಿ ಇಲ್ಲದ್ದನ್ನು ಇದೆ ಎಂದು ಬಿಂಬಿಸುತ್ತಿದ್ದಾರೆ. ಸದ್ಯದಲ್ಲೇ ಅವರ ಸುಳ್ಳಿನ ಸರಮಾಲೆಯ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ರೈತಸಂಘದ ಖಂಡನೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಅನೇಕ ವರ್ಷಗಳ ನಂತರ ಓರ್ವ ದಕ್ಷ ತಹಸೀಲ್ದಾರ್ ಬಂದಿದ್ದಾರೆ. ಅವರ ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕೆ ಹೊರತು ಅವರನ್ನು ಅಧಿಕಾರಿಗಳ ಸಭೆಯಲ್ಲಿ ತಲೆತಗ್ಗಿಸುವಂತೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದರು.
ಕಸ್ತೂರಿ ರಂಗನ್ ವರದಿ ವಿರುದ್ಧ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಮನವಿ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಸಂಸತ್‌ನಲ್ಲಿ ಮಾತನಾಡಲು ಬಿ.ವೈ. ರಾಘವೇಂದ್ರ ಅವರನ್ನು, ವಿಧಾನಸಭೆಯಲ್ಲಿ ಮಾತನಾಡಲು ಗೋಪಾಲಕೃಷ್ಣ ಬೇಳೂರು ಅವರನ್ನು ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಅಲ್ಲಿ ಜನಪ್ರತಿನಿಧಿಗಳು ನಮ್ಮ ಧ್ವನಿಯಾಗಬೇಕು. ಕೇರಳ ಮಾದರಿ ಎಂದು ಹೇಳಿ ಇನ್ನೊಂದಿಷ್ಟು ಆತಂಕ ತಂದುಕೊಳ್ಳುವುದಕ್ಕಿಂತ ವಾಸ್ತವತೆಯನ್ನು ಸಮೀಕ್ಷೆ ನಡೆಸಲು ಒತ್ತಾಯ ಮಾಡಬೇಕು ಎಂದರು. ದೇವು ಆಲಳ್ಳಿ ಇದ್ದರು.