ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಮಾಡುವುದಕ್ಕೆ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಬಹಳ ಮುಖ್ಯವಾಗಿವೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಹೆಚ್ಚಿನ ರೀತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಂತು ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಒಂದು ಸದಾವಕಾಶವಾಗಿದೆ ಸಲಹೆ ನೀಡಿದರು.
ಭಾಗ್ಯಮ್ಮ ಮಾತನಾಡಿ, ನಮ್ಮ ಶಾಸಕರಾದ ಎಸ್.ಮುನಿರಾಜು ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಸ್ವಯಂ ಪ್ರೇರಿತವಾಗಿ ಕೆಲಸ ಮಾಡಲಿ ಎಂದು ಅವರಿಗೆ ಉಚಿತವಾಗಿ ಹೊಲಿಗೆ ತರಭೇತಿಯನ್ನು ಕಲಿಸಿಕೊಡಲಾಗಿದೆ.ಇದರಿಂದ ಮಹಿಳೆಯರು ಸ್ವಂತವಾಗಿ ಕೆಲಸವನ್ನು ಮಾಡಬಹುದು ಇದರಿಂದ ಮಹಿಳೆಯರು ಸ್ವಾವಲಂಭಿಯಾಗಿ ಬದುಕಬಹುದು ಎಂದು ತಿಳಿಸಿದರು.ಈ ವೇಳೆ ಸುಜಾತ ಮುನಿರಾಜು, ಚಿಕ್ಕಬಾಣಾವರ ಗ್ರಾಪಂ ಮಾಜಿ ಉಪಾಧ್ಯಕ್ಷೆ ಭಾಗ್ಯಮ್ಮ , ಮುಖಂಡರಾದ ಬಿ.ಎಂ ಚಿಕ್ಕಣ್ಣ , ವೆಂಕಟೇಶ್ , ಮಹಮ್ಮದ್ ಕಬೀರ್ ಅಹಮ್ಮದ್ ಮತ್ತಿತರರಿದ್ದರು.ರಸ್ತೆಗಳ ಡಾಂಬರೀಕರಣ
ಕಾಮಗಾರಿಗೆ ಚಾಲನೆ:ರಾಜಗೋಪಾಲನಗರ ವಾರ್ಡಿನ ಅನ್ನಪೂರ್ಣ ಲೇಔಟ್ ಹಾಗೂ ಇತರೆ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಮುನಿರಾಜು ಹೇಳಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡಿನ ಅನ್ನಪೂರ್ಣೇಶ್ವರಿ ನಗರದ ಜಿಟಿ ರೆಸಿಡೆನ್ಸಿ ಹಾಗೂ ವೀರ ಬ್ರಹ್ಮೇಂದ್ರ ಮಠ ಬಳಿಯ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ವಾರ್ಡ್ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ವಾರ್ಡ್ ಅಧ್ಯಕ್ಷ ಆರ್ ಸಿ ಹರೀಶ್,ವೈ.ಜಿ ನಾಗರಾಜ್, ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ದಿನೇಶ್, ಶ್ರೀನಿವಾಸ್, ಮುಖಂಡರಾದ ವೆಂಕಟೇಶ್, ರಾಮಸ್ವಾಮಿ, ಜವರಪ್ಪ ರಾಮ್, ಬಿಬಿಎಂಪಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ನರಸಿಂಹಮೂರ್ತಿ, ಸಹಾಯಕ ಅಭಿ ಅಂಯಂತರರಾದ ಪ್ರವೀಣ್. ಸಹಾಯಕರಾದ ರಮೇಶ್, ಸಿದ್ದಪ್ಪ, ಪುಟ್ಟಸ್ವಾಮಿ ಹಾಗೂ ಸ್ಥಳೀಯ ಮುಖಂಡರಿದ್ದರು.