ಮೊದಲಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ । ಎರಡು ದಿನ ದೆಹಲಿಗೆ ತೆರಳುವ ಸಿಎಂ, ಡಿಸಿಎಂ ಲೋಕಸಭೆ ಅಭ್ಯರ್ಥಿ ಚರ್ಚೆ । ಕಾರ್ಯಕರ್ತರಿಗೆ ಮಣೆ ಕನ್ನಡಪ್ರಭ ವಾರ್ತೆ ಹಾಸನ
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ, ನಿಗಮ ಮಂಡಳಿ ಅಧಕ್ಷ ಸ್ಥಾನ ಹಂಚಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಇದೇ ತಿಂಗಳು ೪,೫ ನೇ ತಾರೀಖು ಸಿಎಂ, ಡಿ.ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿ, ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಕೆ.ಎಂ.ಶಿವಲಿಂಗೇಗೌಡರು ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ’ ಎಂದು ಹೇಳಿದರು. ಪಟ್ಟಿ ಬಿಡುಗಡೆಗೂ ಮುನ್ನ ರಾಜಣ್ಣ ಅವರು ಹೀಗೆ ಹೇಳಿದ್ದಾರೆ.
ಮುಂದಿನ ಸಚಿವರ ಬದಲಾವಣೆ ಸಂದರ್ಭ ಶಿವಲಿಂಗೇಗೌಡ ಸಚಿವಾರಾಗುತ್ತಾರೆ ಎಂದು ರಾಜಣ್ಣ ಅವರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.‘ಕಾರ್ಯಕರ್ತರಿಗೂ ನಿಗಮ ಮಂಡಳಿ ಸ್ಥಾನ ಕೊಡಬೇಕು. ಅವರಿಂದಲೇ ನಾವೆಲ್ಲಾ ಗೆದ್ದಿರೋದು. ಕಾರ್ಯಕರ್ತರು ಇರುವುದರಿಂದಲೇ ನಾವೆಲ್ಲಾ ಶಾಸಕರಾಗಿರೋದು. ಕಾರ್ಯಕರ್ತರು, ಶಾಸಕರು ಇಬ್ಬರಿಗೂ ಸ್ಥಾನ ಕೊಟ್ಟು ಸಮತೋಲನ ಕಾಪಾಡುವ ಬಗ್ಗೆ ಪಕ್ಷ ಮತ್ತು ಅಧ್ಯಕ್ಷರ ನಿರ್ಣಯ ಇದೆ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಬಿ. ಶಿವರಾಂ, ಶ್ರೇಯಸ್ ಪಟೇಲ್ ಉಪಸ್ಥಿತರಿದ್ದರು.
ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸದ ಕುರಿತು ಮಾತನಾಡಿ, ‘ಬಿಜೆಪಿಯವರಿಗೆ ಯಾರನ್ನು ಕರೆಯಬೇಕು, ಬೇಡ ಎಂಬ ಅಜೆಂಡಾ ಇರುತ್ತೆ. ಬಿಜೆಪಿ ಅಜೆಂಡಾನಾ ನಾವ್ಯಾಕೆ ಪ್ರಶ್ನೆ ಮಾಡಬೇಕು? ಅಲ್ಲಿಗೆ ಹೋಗಿ ಮಾಡಿದರೆ ಮಾತ್ರ ರಾಮನ ದರ್ಶನ, ಆಶೀರ್ವಾದಾನಾ?