ಯಲ್ಲಾಪುರ: ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರರಿಗೆ ಬುಧವಾರ ನಡೆಯಲಿರುವ ಪಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಜಿಲ್ಲಾಧ್ಯಕ್ಷ ಎಸ್.ಎನ್. ಹೆಗಡೆ ವಿಪ್ ಜಾರಿ ಮಾಡಿದ್ದಾರೆ.
ಹೆಬ್ಬಾರ ಬಣದ ೧೦ ಸದಸ್ಯರು, ಬಿಜೆಪಿಯ ೫ ಸದಸ್ಯರು, ಕಾಂಗ್ರೆಸ್ಸಿನ ೩ ಸದಸ್ಯರು, ಪಕ್ಷೇತರ ೧ ಸದಸ್ಯರು ಇದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಬ್ಬಾರ ಬಣದ ಎಲ್ಲ ಸದಸ್ಯರು, ಕಾಂಗ್ರೆಸ್ ಪಕ್ಷದ ನರ್ಮದಾ ನಾಯ್ಕ ಅವರಿಗೆ ಬೆಂಬಲಿಸುವ ಬಗ್ಗೆ ನಿರ್ಣಯಿಸಲಾಗಿದೆ ಎನ್ನಲಾಗಿದೆ.
ಶಾಸಕರು ಕಳೆದ ೨- ೩ ದಿನಗಳಿಂದ ಯಲ್ಲಾಪುರದಲ್ಲೇ ಇದ್ದರೂ ಅವರಿಗೆ ವಿಪ್ ನೋಟಿಸ್ ನೀಡದೇ, ತೀರಾ ಅಪರೂಪಕ್ಕೊಮ್ಮೆ ತಾಪಂ ಸಭಾಭವನದಲ್ಲಿ ಏನಾದರೂ ಕಾರ್ಯಕ್ರಮಗಳು ಇದ್ದ ಸಂದರ್ಭದಲ್ಲಿ ತಾಪಂ ಆವಾರದಲ್ಲಿರುವ ಶಾಸಕರ ಭವನಕ್ಕೆ ಹೆಬ್ಬಾರ ಹೋಗುತ್ತಾರೆ. ಅದು ಅರಿವಿದ್ದರೂ ಬಿಜೆಪಿಯವರು ಶಾಸಕರ ಕಚೇರಿಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಶಾಸಕರಿಗೆ ನೇರವಾಗಿ ಅಂಚೆ ಮೂಲಕವೂ ವಿಪ್ ಕಳುಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.
ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸೋಮು ನಾಯ್ಕ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಆ. 21ರಂದು ನಡೆಯಲಿರುವ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಯಲ್ಲಾಪುರ ಶಾಸಕರಿಗೆ ಬಿಜೆಪಿಯಿಂದ ವಿಪ್ ಜಾರಿಯಾದ ನಂತರ ಸೋಮು ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ಪ್ರಕರಣ ದಾಖಲಾದಂತೆ ಕಾಣುತ್ತಿದ್ದು, ರಾಜಕಾರಣದಲ್ಲಿ ಈ ಘಟನೆ ಕಪ್ಪುಚುಕ್ಕೆ ಎಂದು ಆರೋಪಿಸಿದರು.
ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯೆ ನರ್ಮದಾ ನಾಯ್ಕ ಅಧ್ಯಕ್ಷೆ, ಅಮಿತ್ ಅಂಗಡಿ ಉಪಾಧ್ಯಕ್ಷ, ಅಬ್ದುಲ್ ಅಲಿ ಕೆ. ಹಮೀದ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಹೆಬ್ಬಾರ ಬಣದ ೧೦ ಸದಸ್ಯರು, ಬಿಜೆಪಿಯ ೫ ಸದಸ್ಯರು, ಕಾಂಗ್ರೆಸ್ಸಿನ ೩ ಸದಸ್ಯರು, ಪಕ್ಷೇತರ ೧ ಸದಸ್ಯರು ಇದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಬ್ಬಾರ ಬಣದ ಎಲ್ಲ ಸದಸ್ಯರು, ಕಾಂಗ್ರೆಸ್ ಪಕ್ಷದ ನರ್ಮದಾ ನಾಯ್ಕ ಅವರಿಗೆ ಬೆಂಬಲಿಸುವ ಬಗ್ಗೆ ನಿರ್ಣಯಿಸಲಾಗಿದೆ ಎನ್ನಲಾಗಿದೆ. ಆದರೆ, ರಾಜಕೀಯದಲ್ಲಿ ಏನೂ ಆಗಬಹುದು ಎಂಬುದನ್ನು ಅಲ್ಲಗಳೆಯಲಾಗದು.