ಆನಿಕೆರೆಗೆ ಶಾಸಕ ಶ್ರೀನಿವಾಸ ಮಾನೆ ಬಾಗಿನ

KannadaprabhaNewsNetwork |  
Published : Aug 26, 2025, 01:04 AM IST
ಫೋಟೊ: 25ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಈ ಬಾರಿ ಉತ್ತಮ ಮಳೆ ಸುರಿದಿದ್ದು, ತಾಲೂಕಿನ ಕೆರೆ, ಕಟ್ಟೆಗಳೆಲ್ಲ ಭರ್ತಿಯಾಗಿವೆ. ತಾಲೂಕಿನ ರೈತರ ಜೀವನಾಡಿ ಮಳಗಿ ಧರ್ಮಾ ಜಲಾಶಯ ಅವಧಿಗೆ ಮೊದಲೇ ಭರ್ತಿಯಾಗಿ ಕೋಡಿ ಬಿದ್ದಿದ್ದು ಅಚ್ಚುಕಟ್ಟು ಪ್ರದೇಶದ ಕೆರೆಗಳೆಲ್ಲವೂ ಭರ್ತಿಯಾಗಿವೆ.

ಹಾನಗಲ್ಲ: ಸತತ ಮಳೆಯಿಂದ ಭರ್ತಿಯಾಗಿರುವ ಇಲ್ಲಿನ ಆನಿಕೆರೆಗೆ ಪುರಸಭೆ ವತಿಯಿಂದ ಸೋಮವಾರ ಶಾಸಕ ಶ್ರೀನಿವಾಸ ಮಾನೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.

ಈ ಬಾರಿ ಉತ್ತಮ ಮಳೆ ಸುರಿದಿದ್ದು, ತಾಲೂಕಿನ ಕೆರೆ, ಕಟ್ಟೆಗಳೆಲ್ಲ ಭರ್ತಿಯಾಗಿವೆ. ತಾಲೂಕಿನ ರೈತರ ಜೀವನಾಡಿ ಮಳಗಿ ಧರ್ಮಾ ಜಲಾಶಯ ಅವಧಿಗೆ ಮೊದಲೇ ಭರ್ತಿಯಾಗಿ ಕೋಡಿ ಬಿದ್ದಿದ್ದು ಅಚ್ಚುಕಟ್ಟು ಪ್ರದೇಶದ ಕೆರೆಗಳೆಲ್ಲವೂ ಭರ್ತಿಯಾಗಿವೆ. ಅಂತರ್ಜಲ ಪ್ರಮಾಣವೂ ಸುಧಾರಣೆ ಕಂಡಿದೆ. ತಾಲೂಕಿನಲ್ಲಿ ಎಲ್ಲ ಏತ ನೀರಾವರಿ ಯೋಜನೆಗಳನ್ನು ಸಹ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು.

ಪುರಸಭೆ ಅಧ್ಯಕ್ಷೆ ರಾಧಿಕಾ ರವೀಂದ್ರ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ರಾಜು ಗುಡಿ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ತಹಸೀಲ್ದಾರ್‌ ರೇಣುಕಾ ಎಸ್., ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿಯವರ, ಮಂಜುನಾಥ ಗೂರನವರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತೀನ ಶಿರಬಡಗಿ, ಪುರಸಭೆ ಸದಸ್ಯೆ ಮಮತಾ ಆರೇಗೊಪ್ಪ, ಮಹೇಶ ಪವಾಡಿ, ಎಂ.ಎಂ. ಬಡಗಿ, ಗನಿ ಪಾಳಾ, ಸುರೇಶ ನಾಗಣ್ಣನವರ, ವಿರೂಪಾಕ್ಷಪ್ಪ ಕಡಬಗೇರಿ, ತಾಲೂಕು ಬಗರಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ ತಳವಾರ, ಮುಖಂಡರಾದ ಆದರ್ಶ ಶೆಟ್ಟಿ, ರಾಜು ಗುಡಿ, ರವೀಂದ್ರ ದೇಶಪಾಂಡೆ, ಸಿಕಂದರ ವಾಲಿಕಾರ, ರಾಜಕುಮಾರ ಶಿರಪಂಥಿ, ಸುರೇಶ ನಿಂಗೋಜಿ, ಇರ್ಫಾನ ಮಿಠಾಯಿಗಾರ, ಈರಣ್ಣ ಬೈಲವಾಳ, ಶಕೀಲ ಬಾಳೂರ, ಮಾರುತಿ ತಾಂದಳೆ, ಭರಮಣ್ಣ ಶಿವೂರ, ಶಿವಕುಮಾರ ಭದ್ರಾವತಿ, ಸಂತೋಷ ಸುಣಗಾರ, ಖಂಡೋಜಿ ಭೋಸಲೆ, ಸಿದ್ಧನಗೌಡ ಪಾಟೀಲ, ರಾಮಣ್ಣ ಪೂಜಾರ, ತಮ್ಮಣ್ಣ ಆರೇಗೊಪ್ಪ ಇದ್ದರು.ಬೈಕ್‌ಗಳ ಡಿಕ್ಕಿ: ವ್ಯಕ್ತಿ ಸಾವು

ಹಾವೇರಿ: ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ತಾಲೂಕಿನ ಬಿದರಗಡ್ಡಿ ಗ್ರಾಮದ ಸಂಜೀವ ಶಂಕ್ರಪ್ಪ ದೇವಿಹೊಸೂರು(25) ಮೃತ ಬೈಕ್ ಸವಾರ. ಬ್ಯಾಡಗಿ ತಾಲೂಕು ಕದಮನಹಳ್ಳಿ ಗ್ರಾಮದ ರಾಕೇಶ ಬಸವರಾಜ ತಳವಾರ(23) ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಆರೋಪಿತನು ಹಾವೇರಿ ನಗರದ ಚೆನ್ನಮ್ಮ ಸರ್ಕಲ್‌ನಿಂದ ವೇಗವಾಗಿ ಬಂದು ವಾಲ್ಮೀಕಿ ವೃತ್ತದ ಬಳಿ ಯಾವುದೇ ಸೂಚನೆ ನೀಡದೆ ಒಮ್ಮೇಲೆ ಯೂಟರ್ನ್ ಆಗಿ ವಾಲ್ಮೀಕಿ ವೃತ್ತದಿಂದ ಸಿದ್ದಪ್ಪ ಸರ್ಕಲ್ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿ ಹೊಡೆತಕ್ಕೆ ಸಂಜೀವ ದೇವಿಹೊಸೂರ ಬೈಕ್ ಸವಾರನಿಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಮೃತನ ಸಂಬಂಧಿ ಶಿವಪುತ್ರಪ್ಪ ದೇವಿಹೊಸೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ