ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಟಿ.ಬಿ.ಜಯಚಂದ್ರ ಭೇಟಿ

KannadaprabhaNewsNetwork |  
Published : Mar 30, 2026, 12:30 AM IST
೨೯ಶಿರಾ೧: ಶಿರಾ ತಾಲೂಕು ಹುಲಿಕುಂಟೆ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಿದ್ದ ಭಾರಿ ಆಲಿಕಲ್ಲು ಮಳೆಯಿಂದ ದಾಳಿಂಬೆ ಬೆಳೆಗಾರರಿಗೆ ಮತ್ತು ವಿವಿಧ ಬೆಳೆಗಳಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ ಸುಮಾರು ಎಕರೆಯಲ್ಲಿ ಫಸಲಿಗೆ ಬಂದ ದಾಳಿಂಬೆ ಸೇರಿದಂತೆ ವಿವಿಧ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ  ಶಾಸಕ ಟಿ.ಬಿ. ಜಯಚಂದ್ರ ಅವರು ತಾಲೂಕು ಆಡಳಿತದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ವಿವಿಧ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ ಶಾಸಕ ಟಿ.ಬಿ. ಜಯಚಂದ್ರ ಅವರು ತಾಲೂಕು ಆಡಳಿತದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕು ಹುಲಿಕುಂಟೆ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಿದ್ದ ಭಾರಿ ಆಲಿಕಲ್ಲು ಮಳೆಯಿಂದ ದಾಳಿಂಬೆ ಬೆಳೆಗಾರರಿಗೆ ಮತ್ತು ವಿವಿಧ ಬೆಳೆಗಳಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ ಸುಮಾರು ಎಕರೆಯಲ್ಲಿ ಫಸಲಿಗೆ ಬಂದ ದಾಳಿಂಬೆ ಸೇರಿದಂತೆ ವಿವಿಧ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ ಶಾಸಕ ಟಿ.ಬಿ. ಜಯಚಂದ್ರ ಅವರು ತಾಲೂಕು ಆಡಳಿತದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು ಆಲಿಕಲ್ಲು ಮಳೆ ಬಿದ್ದು ತಾಲೂಕಿನ ರೈತರ ಬೆಳೆಗಳಿಗೆ ನಷ್ಟ ಉಂಟಾಗಿದ್ದು, ನನ್ನ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಆಲಿ ಕಲ್ಲು ಮಳೆ ಬಿದ್ದು ರೈತರ ಬೆಳೆ ಹಾನಿ ಉಂಟಾಗಿರುವುದು ಇದೆ ಪ್ರಥಮವಾಗಿದೆ. ಹುಲಿಕುಂಟೆ ಹೋಬಳಿ ವ್ಯಾಪ್ತಿಯ ರೈತರ ದಾಳಿಂಬೆ ತೋಟ ನಷ್ಟವಾಗಿದ್ದು ಹೆಚ್ಚು ಆರ್ಥಿಕ ವೆಚ್ಚದಿಂದ ಬೆಳೆಯುವ ಬೆಳೆ ದಾಳಿಂಬೆಯಾಗಿದ್ದು, ನೂರಕ್ಕೆ ನೂರರಷ್ಟು ನಷ್ಟವಾಗಿರುವುದು ನಷ್ಟದ ಪ್ರಮಾಣ ನೂರಕ್ಕೆ ನೂರರಷ್ಟು ಆಗಿದೆ. ಇನ್ಸೂರೆನ್ಸ್ ಮಾಡಿದ್ದು ಹಣ್ಣು ಕೀಳುವ ಮುನ್ನ ನಷ್ಟವಾಗಿದ್ದು ದಾಳಿಂಬೆ ವ್ಯಾಪ್ತಿಯ ಅಡಿಕೆ ತೊಗರಿ ರಾಗಿ ಹಾನಿಯಾಗಿದೆ. ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ಮಾಡಲಿದ್ದು ನೂರಕ್ಕೆ ನೂರರಷ್ಟು ಪರಿಹಾರ ನೀಡಬೇಕಿದೆ. ನಷ್ಟದ ಪ್ರಮಾಣ ಹೆಚ್ಚಾಗಿದ್ದು, ಅಂತಹ ಬೆಳೆ ಪರಿಹಾರ ನೀಡಬೇಕಿದೆ. ತಾಲೂಕು ಆಡಳಿತ ಅಧಿಕಾರಿಗಳು ವೀಕ್ಷಣೆ ಮಾಡಿದ್ದು ವರದಿ ಬಂದಾಗ ಉನ್ನತ ಮಟ್ಟದ ಚರ್ಚೆ ನಡೆಸಿ ಅದಕ್ಕೆ ಪರಿಹಾರ ನೀಡುವುದಾಗಿ ಟಿಬಿಜೆ ಹೇಳಿದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್ ಹಾರೋಗೆರೆ, ಜಿಲ್ಲಾ ವಿಮಾ ಕಂಪನಿಯ ಪ್ರತಿನಿಧಿ ಚಂದನ, ತಹಸೀಲ್ದಾರ್, ಆನಂದ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ನಾಗರಾಜ್, ಕೃಷಿ ಅಧಿಕಾರಿ, ಸತ್ಯನಾರಾಯಣ, ರೇಷ್ಮೆ ವಿಸ್ತರಣಾಧಿಕಾರಿ ಗಂಗಾಧರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸುಧಾಕರ್, ಸಹಾಯಕ ತೋಟಗಾರಿಕಾ ಅಧಿಕಾರಿ ಜಬಿವುಲ್ಲಾ, ಎಪಿಎಂಸಿ ಮಾಜಿ ಅಧ್ಯಕ್ಷ ಗೋಣಿಹಳ್ಳಿ ಜಿಎನ್ ದೇವರಾಜ್, ಶಿರಾ ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ಮಹೇಂದ್ರ ಗೌಡ, ಚಿರತಹಳ್ಳಿ ಡಿ ಮಂಜುನಾಥ್, ಪ್ರಕಾಶ್, ಓಂಕಾರ್, ಸಿದ್ದೇಗೌಡ, ರವಿಚಂದ್ರ, ಪುಟ್ಟಿರಮ್ಮ ರಾಜಣ್ಣ ಮುದ್ದು ರಾಜು ಗಿರೀಶ್, ಕೆಂಚಪ್ಪ, ತಿಪ್ಪಣ್ಣ, ಪುಟರಾಜು, ಕರಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನದಲ್ಲಿ ಶ್ರೀರಾಮನವಮಿ ವೈಭವ ಸಾಮೂಹಿಕ ಯಜ್ಞ
ಕಡೂರಿನಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ: ಭಂಡಾರಿ ಶ್ರೀನಿವಾಸ್