ಕಾಮಗಾರಿ ಪರಿಶೀಲಿಸಿದ ಶಾಸಕ ಎಂ. ಚಂದ್ರಪ್ಪ

KannadaprabhaNewsNetwork |  
Published : Jun 25, 2024, 12:39 AM IST
ಚಿತ್ರಮಾಹಿತಿ (23 ಹೆಚ್‌ ಎಲ್‌ ಕೆ 2)ಹೊಳಲ್ಕೆರೆಯಲ್ಲಿ ಶಾಸಕ ಎಂ.ಚಂದ್ರಪ್ಪ ಒಳಾಂಗಣ ಕ್ರೀಡಾಂಗಣ ಕಾಮಗಾರಿ ವೀಕ್ಷಿಸಿದರು.……………………………………………………………………………………………………………………………………………………………………… | Kannada Prabha

ಸಾರಾಂಶ

ಹೊಳಲ್ಕೆರೆಯಲ್ಲಿ ಶಾಸಕ ಎಂ.ಚಂದ್ರಪ್ಪ ಒಳಾಂಗಣ ಕ್ರೀಡಾಂಗಣ ಕಾಮಗಾರಿ ವೀಕ್ಷಿಸಿದರು.

ಹೊಳಲ್ಕೆರೆ: ಪಟ್ಟಣ ತಾಲ್ಲೂಕು ಕೇಂದ್ರವಾದರೂ ಕ್ರೀಡಾಂಗಣ ಇರಲಿಲ್ಲ. ಈಗ ಸುಮಾರು 35 ಕೋಟಿ ವೆಚ್ಚದಲ್ಲಿ ಸುಂದರ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಇನ್ನೂಂದು ತಿಂಗಳಲ್ಲಿ ಸಾರ್ವಜನಿಕ ಬಳಕೆಗಾಗಿ ಕ್ರೀಡಾಂಗಣ ಸಿದ್ದವಾಗಲಿದೆ ಎಂದು ಪಟ್ಟಣದಲ್ಲಿ ನಡೆಯುತ್ತಿರುವ ಕ್ರೀಡಾಂಗಣದ ರೂಫಿಂಗ್ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಶಾಸಕ ಎಂ.ಚಂದ್ರಪ್ಪ ಮಾತನಾಡಿದರು.

4 ಕೋಟಿ ರು. ವೆಚ್ಚದಲ್ಲಿ ಒಳಂಗಣ ಕ್ರೀಡಾಂಗಣ ನಿರ್ಮಾಣ ಆಗುತ್ತಿದ್ದು, ರೂಫಿಂಗ್ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣ 200 ಅಡಿ ಉದ್ದ, 100 ಅಡಿ ಅಗಲವಿದ್ದು, ವಾಲಿಬಾಲ್, ಶೆಟಲ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್ ಆಡಲು ಅವಕಾಶ ಸಿಗಲಿದೆ. ಪ್ರೇಕ್ಷಕರ ಗ್ಯಾಲರಿ, ವೀಕ್ಷಕ ವಿವರಣಾ ಬಾಕ್ಸ್, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕ್ರೀಡಾಪಟುಗಳ ವಿರಾಮಕ್ಕೆ ಪ್ರತ್ಯೇಕ ವಿಭಾಗ ಇದೆ. ಜಿಲ್ಲೆಯಲ್ಲಿಯೇ ಇದು ಸುಸಜ್ಜಿತ ಕ್ರೀಡಾಂಗಣ ಆಗಲಿದೆ ಎಂದರು.

ಕ್ರೀಡಾಂಗಣದ ಹಿಂದೆ 2 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ತಾಲೂಕು ಕ್ರೀಡಾಂಗಣಕ್ಕೆ 7.5 ಕೋಟಿ ಅನುದಾನ ನೀಡಿದ್ದು, ಗ್ಯಾಲರಿ ಕಾಮಗಾರಿ ನಡೆಯುತ್ತಿದೆ. ಈಗ ಮತ್ತೆ ಕ್ರೀಡಾಂಗಣ ಅಭಿವೃದ್ಧಿಗೆ 20 ಕೋಟಿ ಅನುದಾನ ನೀಡುತ್ತಿದ್ದು, ಪ್ರೇಕ್ಷಕರ ಗ್ಯಾಲರಿಗೆ ರೂಫಿಂಗ್, ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗುವುದು. ಕಾಮಗಾರಿ ಮುಗಿದ ನಂತರ ಇದು ಸುಂದರ ಕ್ರೀಡಾಂಗಣವಾಗಿ ಹೊರಹೊಮ್ಮಲಿದೆ ಎಂದರು. ಕಾಮಗಾರಿ ವೀಕ್ಷಣೆ ವೇಳೆ ಪುರಸಭೆ ಸದಸ್ಯ ಮುರುಗೇಶ್, ಡಿ.ಸಿ.ಮೋಹನ್, ಎಂಜಿನಿಯರ್ ಶಿವಕುಮಾರ್, ಮಹೇಶ್ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು