ಬ್ರಹ್ಮಾವರ ಸಬ್ ಕಚೇರಿಗೆ ಶಾಸಕ ಯಶ್ಪಾಲ್ ದಿಢೀರ್ ಭೇಟಿ

KannadaprabhaNewsNetwork | Published : Oct 23, 2023 12:15 AM

ಸಾರಾಂಶ

ದಿನಂಪ್ರತಿ ನೂರಾರು ಮಂದಿ ಸಾರ್ವಜನಿಕರು ನೋಂದಣಿಗಾಗಿ ಇಲ್ಲಿಗೆ ಬಂದು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ ಎಂಬ ದೂರಿಗೆ ಕಂದಾಯ ಇಲಾಖೆಯ ಸರ್ವರ್ ಸಮಸ್ಯೆ ಕಾರಣ
ಕನ್ನಡಪ್ರಭ ವಾರ್ತೆ ಬ್ರಹ್ಮಾವರ ಇಲ್ಲಿನ ಉಪನೋಂದಣಿ (ಸಬ್ ರಿಜಿಸ್ಟ್ರಾರ್) ಕಚೇರಿಗೆ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಸೋಮವಾರ ದಿಢೀರ್ ಭೇಟಿ ನೀಡಿ, ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬದ ಬಗ್ಗೆ ಸಾರ್ವಜನಿಕರ ದೂರಿನ ಬಗ್ಗೆ ಪರಿಶೀಲನೆ ನಡೆಸಿದರು. ದಿನಂಪ್ರತಿ ನೂರಾರು ಮಂದಿ ಸಾರ್ವಜನಿಕರು ನೋಂದಣಿಗಾಗಿ ಇಲ್ಲಿಗೆ ಬಂದು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ ಎಂಬ ದೂರಿಗೆ ಕಂದಾಯ ಇಲಾಖೆಯ ಸರ್ವರ್ ಸಮಸ್ಯೆ ಕಾರಣ ಎಂದು ಅಧಿಕಾರಿಗಳು ಹೇಳಿದರು. ರಾಜ್ಯ ಸರ್ಕಾರ ಕೋಟ್ಯಂತರ ರು.ಗಳ ಆದಾಯ ತರುವ ನೋಂದಣಿ ಪ್ರಕ್ರಿಯೆಗೆ ಸರ್ವರ್ ದೋಷ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ, ತಕ್ಷಣ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಹಳೆಯ ಕಚೇರಿಯಲ್ಲಿಯೇ ಈಗಲೂ ಉಪನೋಂದಣಿ ಕಚೇರಿ ನಡೆಯುತ್ತಿದ್ದು, ಇಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ತಕ್ಷಣವೇ ನೂತನ ಬ್ರಹ್ಮಾವರ ತಾಲೂಕು ಸೌಧಕ್ಕೆ ಕಚೇರಿಯನ್ನು ಸ್ಥಳಾಂತರಿಸುವಂತೆ ತಿಳಿಸಿದರು. ಈ ಸಂದರ್ಭ ಸ್ಥಳೀಯ ಪ್ರಮುಖರಾದ ಸುಧೀರ್ ಶೆಟ್ಟಿ, ಸಚಿನ್ ಪೂಜಾರಿ, ರಾಜು ಪೂಜಾರಿ, ಸಂತೋಷ್ ಜತ್ತನ್, ಗಣೇಶ್ ಕುಲಾಲ್, ಪ್ರದೀಪ್ ಬೈಕಾಡಿ ಮೊದಲಾದವರು ಉಪಸ್ಥಿತರಿದ್ದರು.

Share this article