-ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ಕೋಡಿಬಿದ್ದ ಹಿನ್ನೆಲೆ ಶಾಸಕ ಟಿ.ರಘುಮೂರ್ತಿ ಬಾಗಿನ
ಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಇತ್ತೀಚೆಗೆ ಬಂದ ಉತ್ತಮ ಮಳೆಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಕೆರೆಗಳು ತುಂಬಿಹರಿಯುತ್ತಿರುವುದು ಸಂತಸ ತಂದಿದೆ. ವಿಶೇಷವಾಗಿ ನಗರಂಗೆರೆ ಕೆರೆ ಈ ವರ್ಷವೂ ತುಂಬಿ ಕೋಡಿ ಬಿದಿದ್ದ ಪರಿಣಾಮ ಈ ಭಾಗದ ಜನರಲ್ಲಿ ಸಂತೋಷ ಮನೆ ಮಾಡಿದೆ. ಗ್ರಾಮದ ಜನರಲ್ಲಿ ಹೊಸ ಉತ್ಸಾಹ ಕಾಣಲಾಗುತ್ತಿದೆ, ಕಳೆದ ೨೦೨೨ರಲ್ಲಿ ಭಾರಿ ಪ್ರಮಾಣದ ಜನರನ್ನು ಸೇರಿಸಿ ತೆಪ್ಪೋತ್ಸವ ಆಚರಿಸಲಾಗಿತ್ತು. ಮತ್ತೊಮ್ಮೆ ಗ್ರಾಮದ ಕೆರೆ ತುಂಬಿದ್ದು, ಈ ಭಾಗದಲ್ಲಿ ಇನ್ನೂ ಮುಂದೆ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಬಹುದು ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.ಅವರು, ಬುಧವಾರ ಮಧ್ಯಾಹ್ನ ಕೋಡಿಬಿದ್ದ ನಗರಂಗೆರೆ ಕೆರೆಗೆ ಭೇಟಿ ನೀಡಿ, ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಮಾತನಾಡಿದರು. ಪ್ರಸ್ತುತ ಈ ವರ್ಷದ ಮಳೆಯಲ್ಲಿ ಮೊದಲ ಬಾರಿಗೆ ಈ ಕೆರೆಕೋಡಿಬಿದ್ದಿರುವುದು ವಿಶೇಷ. ಗ್ರಾಮದ ಕೆರೆಯ ನೀರು ಸರಾಗವಾಗಿ ಹರಿಯುತ್ತಿದ್ದು, ಏನಾದರೂ ಸಮಸ್ಯೆ ಇದ್ದರೆ ಗಮನಕ್ಕೆ ತರುವಂತೆ ಮನವಿ ಮಾಡಿದರು.
----
ಪೋಟೋ: ೯ಸಿಎಲ್ಕೆ೧ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿನ ಅರ್ಪಿಸಿದರು.