ಬಹಳ ದಿನಗಳ ಬೇಡಿಕೆಯಾಗಿರುವ ನಗರದ ಪಿಪಿ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪನೆಯ ಬಗ್ಗೆ ಶಾಸಕರಿಗೆ ನೆನಪು ಮಾಡಿಕೊಟ್ಟು ಈ ಕಾರ್ಯವನ್ನು ಕಾರ್ಯಗತ ಗೊಳಿಸಿಕೊಡಬೇಕೆಂದು ಉಮೇಶ್ ಹಾಗೂ ಮುಖಂಡರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿರುವ ಶಾಸಕರು, ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಪೂರ್ಣ ಮನಸ್ಸಿನಿಂದ ಭರವಸೆ ನೀಡಿದ್ದಾರೆಂದು, ನಿಯೋಗವು ಮಾಧ್ಯಮಕ್ಕೆ ತಿಳಿಸಿದೆ.
ಅರಸೀಕೆರೆ: ತಾಲೂಕು ವೀರಶೈವ ಸಮಾಜದ ಯುವಕರು ಶಾಸಕ ಕೆಎಂ ಶಿವಲಿಂಗೇಗೌಡ ಅವರನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ವೀರಶೈವ ಸಮಾಜದ ಮುಖಂಡ ಕಾಟಿಕೆರೆ ಉಮೇಶ್ ಅವರ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ವೀರಶೈವ ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು, ವೀರಶೈವ ಸಮಾಜದ ರುದ್ರಭೂಮಿ ಅಭಿವೃದ್ಧಿ ಆಗಬೇಕಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ನಿಯೋಗ ಶಾಸಕರಲ್ಲಿ ಮನವಿ ಮಾಡಿದೆ. ಬಹಳ ದಿನಗಳ ಬೇಡಿಕೆಯಾಗಿರುವ ನಗರದ ಪಿಪಿ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪನೆಯ ಬಗ್ಗೆ ಶಾಸಕರಿಗೆ ನೆನಪು ಮಾಡಿಕೊಟ್ಟು ಈ ಕಾರ್ಯವನ್ನು ಕಾರ್ಯಗತ ಗೊಳಿಸಿಕೊಡಬೇಕೆಂದು ಉಮೇಶ್ ಹಾಗೂ ಮುಖಂಡರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿರುವ ಶಾಸಕರು, ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಪೂರ್ಣ ಮನಸ್ಸಿನಿಂದ ಭರವಸೆ ನೀಡಿದ್ದಾರೆಂದು, ನಿಯೋಗವು ಮಾಧ್ಯಮಕ್ಕೆ ತಿಳಿಸಿದೆ.
ನಿಯೋಗದಲ್ಲಿ ನೋಳಂಬ ವೀರಶೈವ ಸಮಾಜದ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಹೊಯ್ಸಳೇಶ್ವರ ಕಾಲೇಜು ಸಮಿತಿ ನಿರ್ದೇಶಕ ದಿವಾಕರ್, ಮಂಜುನಾಥ್, ನಗರಸಭೆ ನಾಮಿನಿ ಸದಸ್ಯ ಸಂತೋಷ್ ತಳಲುತೊರೆ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲೋಕೇಶ್, ಮಲ್ಲೇಶ್ವರ ಮಂಜು, ಮಧು ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.